D Boss Darshan: ದರ್ಶನ್​ ಹುಟ್ಟುಹಬ್ಬಕ್ಕೆ ಜಗ್ಗೇಶ್​, ರಿಷಬ್​ ಶೆಟ್ಟಿ, ಪವನ್​ ಒಡೆಯರ್​ ಶುಭಾಶಯ

Challenging Star Darshan: ನವರಸ ನಾಯಕ ಜಗ್ಗೇಶ್ ಮತ್ತು ದರ್ಶನ್​ ಮಧ್ಯೆ ಕಳೆದ ವಾರವಷ್ಟೇ ಕಿಡಿ ಹೊತ್ತಿಸುವ ಪ್ರಯತ್ನವಾಗಿತ್ತು. ಆದರೆ, ಅದನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಿದ ಇಬ್ಬರೂ ನಟರು ವಿವಾದವನ್ನು ಅಲ್ಲೇ ತಣ್ಣಗಾಗಿಸಿದ್ದಾರೆ.

D Boss Darshan: ದರ್ಶನ್​ ಹುಟ್ಟುಹಬ್ಬಕ್ಕೆ ಜಗ್ಗೇಶ್​, ರಿಷಬ್​ ಶೆಟ್ಟಿ, ಪವನ್​ ಒಡೆಯರ್​ ಶುಭಾಶಯ
ದರ್ಶನ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಯಾರಿಸಿದ ಚಿತ್ರ
Follow us
Skanda
| Updated By: ರಶ್ಮಿ ಕಲ್ಲಕಟ್ಟ

Updated on: Feb 16, 2021 | 2:40 PM

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ತಮ್ಮ 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಅಭಿನಯದ ರಾಬರ್ಟ್​ ಸಿನಿಮಾ ಟ್ರೇಲರ್​ ಸಹ ಬಿಡುಗಡೆಯಾಗಿದ್ದು ಮತ್ತಷ್ಟು ಮೆರಗು ನೀಡಿದೆ. ದರ್ಶನ್​ ಹುಟ್ಟುಹಬ್ಬಕ್ಕೆ ದರ್ಶನ್​ ಅಭಿಮಾನಿಗಳು ಕಾಮನ್​ ಡಿಪಿ ತಯಾರಿಸಿ ಈಗಾಗಲೇ ವೈರಲ್​ ಮಾಡಿದ್ದರು. ಅದನ್ನೀಗ ಜಗ್ಗೇಶ್​, ರಿಷಬ್​ ಶೆಟ್ಟಿ, ಪವನ್​ ಒಡೆಯರ್​ ಸೇರಿದಂತೆ ಅನೇಕ ಗಣ್ಯರು ಟ್ವೀಟ್​ ಮಾಡಿ ಶುಭಾಶಯ ಕೋರಿದ್ದಾರೆ.

ನವರಸ ನಾಯಕ ಜಗ್ಗೇಶ್ ಮತ್ತು ದರ್ಶನ್​ ಮಧ್ಯೆ ಕಳೆದ ವಾರವಷ್ಟೇ ಕಿಡಿ ಹೊತ್ತಿಸುವ ಪ್ರಯತ್ನವಾಗಿತ್ತು. ಆದರೆ, ಅದನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಿದ ಇಬ್ಬರೂ ನಟರು ವಿವಾದವನ್ನು ಅಲ್ಲೇ ತಣ್ಣಗಾಗಿಸಿದ್ದಾರೆ. ಇತ್ತ ಜಗ್ಗೇಶ್ ಎರಡು ದಿನ ಹಿಂದೆಯೇ ದರ್ಶನ್​ ಹುಟ್ಟುಹಬ್ಬಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದು, ದರ್ಶನ್​ ಸಹ ಅದಕ್ಕೆ ಪ್ರತ್ಯುತ್ತರಿಸಿ ಧನ್ಯವಾದ ತಿಳಿಸಿದ್ದಾರೆ.

ಸದ್ಯ ದರ್ಶನ್​ ಅವರ ಟ್ವಿಟರ್ ಅಕೌಂಟ್​ನಲ್ಲಿ ಶುಭಾಶಯಗಳ ಮಹಾಪೂರವೇ ಇದ್ದು, ಸ್ಯಾಂಡಲ್​ವುಡ್​ನ ಬಹುತೇಕ ಗಣ್ಯರು ದರ್ಶನ್​ಗೆ ಶುಭಕೋರಿ ಹಾರೈಸಿದ್ದಾರೆ. ಇದೇ ಸಂದರ್ಭದಲ್ಲಿ ಟ್ವಿಟರ್​ನಲ್ಲಿ #Dboss #Darshan #HappyBirthdayDBoss ಹ್ಯಾಶ್​ಟ್ಯಾಗ್​ಗಳು ಟ್ರೆಂಡ್​ ಆಗಿವೆ.

ಇದನ್ನೂ ಓದಿ: ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇ ಬೇಕು, ರಾಬರ್ಟ್​ನಲ್ಲಿ ಅಬ್ಬರಿಸಿದ ದರ್ಶನ್