AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roberrt Trailer: ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇ ಬೇಕು, ರಾಬರ್ಟ್​ನಲ್ಲಿ ಅಬ್ಬರಿಸಿದ ದರ್ಶನ್

D Boss Darshan: ಗುಣಮಟ್ಟದ ವಿಚಾರದಲ್ಲಿ ಕೂಡ ರಾಬರ್ಟ್ ಸಖತ್ ರಿಚ್ ಆಗಿ ಕಾಣಿಸುತ್ತಿದ್ದು, ತರುಣ್ ಸುಧೀರ್ ಈ ಸಿನಿಮಾದ ಮೂಲಕ ಮತ್ತೊಂದು ಗೆಲುವನ್ನು ತಮ್ಮ ಖಾತೆಯಲ್ಲಿ ಸೇರಿಸಿಕೊಳ್ಳಲಿದ್ದಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Roberrt Trailer: ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇ ಬೇಕು, ರಾಬರ್ಟ್​ನಲ್ಲಿ ಅಬ್ಬರಿಸಿದ ದರ್ಶನ್
ರಾಬರ್ಟ್​ ಸಿನಿಮಾ ಟ್ರೇಲರ್​
Skanda
|

Updated on:Feb 16, 2021 | 12:48 PM

Share

ಅಭಿಮಾನಿಗಳ ಪಾಲಿನ ಮಾಸ್ ಮಹಾರಾಜ, ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಡಿಬಾಸ್ ದರ್ಶನ್ (D Boss Darshan) ಅಭಿನಯದ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಟ್ರೇಲರ್ ಬಿಡುಗಡೆ ಆಗಿದೆ. ಬಾ ಬಾ ನಾನ್ ರೆಡಿ ಅಂತ ಬಂದೇ ಬಿಟ್ಟ ದಚ್ಚು ಎಂಟ್ರಿ ಟ್ರೇಲರ್​ನಲ್ಲಿ ಸಖತ್​ ಆಗಿ ಮೂಡಿಬಂದಿದೆ. ಒಬ್ಬರ ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ಬರ ಲೈಫಲ್ಲಿ ವಿಲನ್ ಆಗ್ಲೇ ಬೇಕು ಅನ್ನೋ ಕಿಲ್ಲರ್ ಡೈಲಾಗ್​ ಮೂಲಕ ದರ್ಶನ ಕೊಟ್ಟಿದ್ದಾರೆ ರಾಬರ್ಟ್. ಹೀಗಾಗಿ ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಪಾತ್ರವೇನು ಅನ್ನುವುದರ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಕ್ರಿಯೇಟ್ ಆಗಿದ್ದು, ಎರಡು ಶೇಡ್​ ಪಾತ್ರ ಅನ್ನೋದಂತು ಫಿಕ್ಸ್ ಆಗಿದೆ. ಟ್ರೇಲರ್​ ಕೊನೆಯಲ್ಲಿ ನೀನು ಮಾಸ್ ಆದ್ರೆ ನಾನು ಮಾಸ್​ಗೆ ಬಾಸ್ ಅನ್ನೋ ದರ್ಶನ್ ಡೈಲಾಗ್ ಧೂಳೆಬ್ಬಿಸುವಂತಿದೆ.

ಸ್ಟೈಲಿಶ್ ವಿಲನ್ ಜಗಪತಿಬಾಬು ಆರ್ಭಟಿಸಿದ್ದರೆ, ರವಿಶಂಕರ್, ರವಿಕಿಶನ್ ಖಡಕ್ ವಿಲನ್​ಗಳಾಗಿ ಟ್ರೇಲರ್​ನಲ್ಲಿ ಅಬ್ಬರಿಸಿದ್ದಾರೆ. ಈ ಟ್ರೇಲರ್​ನ ಒಂದೊಂದು ಸೀನ್ ಕೂಡ ಭಕ್ತಗಣಕ್ಕೆ ಕಣ್ಣಿಗೆ ಹಬ್ಬ ಎನ್ನುವಂತಿದೆ. ಡೈನಾಮಿಕ್ ಹೀರೋ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಾಯಕಿ ಆಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲೂ ರಾಬರ್ಟ್ ಟ್ರೇಲರ್​ ಬಿಡುಗಡೆ ಆಗಿದ್ದು ಮಾರ್ಚ್ 11ಕ್ಕೆ ಶಿವರಾತ್ರಿ ಪ್ರಯುಕ್ತ ಅಭಿಮಾನಿಗಳನ್ನ ಥಿಯೇಟರ್​ನಲ್ಲೇ ಜಾಗರಣೆ ಮಾಡಿಸುವುದಕ್ಕೆ ಸಿನಿಮಾ ತೆರೆ ಮೇಲೆ ಬರ್ತಿದೆ. ಟ್ರೇಲರ್​ ನೋಡ್ತಿದ್ರೆ ಕರ್ನಾಟಕದ ಅಡ್ಡಾದಲ್ಲಷ್ಟೇ ಅಲ್ಲದೇ ಟಾಲಿವುಡ್ ಬಾಕ್ಸ್ ಆಫೀಸ್​ನಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೌಂಡ್​ ಮಾಡೋದು ಪಕ್ಕಾ ಅನ್ನಿಸುತ್ತಿದೆ.

ಇದನ್ನೂ ಓದಿ: ಲೈಟ್ ಬಾಯ್​ ಜೀವನದಿಂದ ರಾಬರ್ಟ್​ ಸಿನಿಮಾವರೆಗೆ ದರ್ಶನ್ ನಡೆದು ಬಂದ ದಾರಿ

ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ನೇರವಾಗಿ ದರ್ಶನ ಕೊಡದೇ ಹೋದ್ರು ಟ್ರೇಲರ್​ ಮೂಲಕ ಕಾಣಿಸಿಕೊಂಡು ಸಂಭ್ರಮ ಪಡುವಂತೆ ಮಾಡಿದ್ದಾರೆ. ಟ್ರೈಲರ್ ಬಿಡುಗಡೆ ಆದ 48 ನಿಮಷಕ್ಕೆ ಹತ್ತು ಲಕ್ಷ ವೀಕ್ಷಣೆ ಗಳಿಸೋ ಮೂಲಕ ರಾಬರ್ಟ್ ಟ್ರೇಲರ್​ ದಾಖಲೆ ಬರೆದಿದೆ. ಗುಣಮಟ್ಟದ ವಿಚಾರದಲ್ಲಿ ಕೂಡ ರಾಬರ್ಟ್ ಸಖತ್ ರಿಚ್ ಆಗಿ ಕಾಣಿಸುತ್ತಿದ್ದು, ತರುಣ್ ಸುಧೀರ್ ಈ ಸಿನಿಮಾದ ಮೂಲಕ ಮತ್ತೊಂದು ಗೆಲುವನ್ನು ತಮ್ಮ ಖಾತೆಯಲ್ಲಿ ಸೇರಿಸಿಕೊಳ್ಳಲಿದ್ದಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಈ ಹಿಂದೆ ಬಿಡುಗಡೆ ಆದ ಪೊಗರು ಡೈಲಾಗ್ ಟ್ರೇಲರ್ ಮತ್ತು ಕೆಜಿಎಫ್ 2 ಟೀಸರ್​ನಂತೆಯೇ ರಾಬರ್ಟ್ ಟ್ರೇಲರ್​ನಲ್ಲೂ ಡೈಲಾಗ್​ಗಳ ಧಮಾಕಾ ಜೋರಾಗಿದೆ.

Published On - 12:47 pm, Tue, 16 February 21

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?