ಡಿಬಾಸ್​ ಹುಟ್ಟುಹಬ್ಬ: ‘ಮೆಜೆಸ್ಟಿಕ್’​ನಲ್ಲಿ ಕಾಲಿಟ್ಟು ಚಾಲೆಂಜಿಂಗ್ ಸ್ಟಾರ್ ಆಗಿ ಮೆರೆದ ಟಾಪ್ 10 ಸಿನಿಮಾ

Happy Birthday Dboss | ಸ್ಯಾಂಡಲ್​​​ವುಡ್​ನಲ್ಲಿ ಸುನಾಮಿಯಂತೆ ಫ್ಯಾನ್ಸ್ ಫಾಲೋವಿಂಗ್ ಹೊಂದಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಇಂದು. ಅವರು ಇವತ್ತು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸವಿ ನೆನಪಿಗಾಗಿ ಅವರ ಟಾಪ್ 10 ಚಿತ್ರಗಳ ವಿವರವನ್ನು ನಿಮ್ಮ ಮುಂದೆ ಇಟ್ಟಿದ್ದೇವೆ.

  • TV9 Web Team
  • Published On - 13:40 PM, 16 Feb 2021
ಡಿಬಾಸ್​ ಹುಟ್ಟುಹಬ್ಬ: ‘ಮೆಜೆಸ್ಟಿಕ್’​ನಲ್ಲಿ ಕಾಲಿಟ್ಟು ಚಾಲೆಂಜಿಂಗ್ ಸ್ಟಾರ್ ಆಗಿ ಮೆರೆದ ಟಾಪ್ 10 ಸಿನಿಮಾ
ನಟಿ ರಕ್ಷಿತಾ ಮತ್ತು ದರ್ಶನ್

ಬೆಂಗಳೂರಿನಲ್ಲಿ ‘ಮೆಜೆಸ್ಟಿಕ್’ ಎಂಬುವುದು ಉದ್ಯೋಗವನ್ನು ಅರಸಿ ರಾಜಧಾನಿಗೆ ಬರುವ ಬಹುತೇಕ ಎಲ್ಲರಿಗೂ ಒಂದು ರೀತಿಯ ಹೆಬ್ಬಾಗಿಲು ಇದ್ದಂತೆ. ದರ್ಶನ್ ರ ಆಪ್ತ ಗೆಳೆಯ ಯಶ್ ಸಹ ಇದೇ ಮೆಜೆಸ್ಟಿಕ್​ನಲ್ಲಿ ಉದ್ಯೋಗಕ್ಕಾಗಿ ಅಲೆದಲೆದು ಆಯಾಸಗೊಂಡು ಇದೇ ಮೆಜೆಸ್ಟಿಕ್​ನಲ್ಲಿ ಪವಡಿಸಿದವರು. ಇನ್ನು ಇಂದು ಬರ್ತಡೇ ಆಚರಿಸಿಕೊಳ್ಳುತ್ತಿರುವ ಡಿ ಬಾಸ್​ ಸಹ ಮೆಜೆಸ್ಟಿಕ್ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರೇ. ಕುತೂಹಲದ ಸಂಗತಿಯೆಂದರೆ ದರ್ಶನ್​ ‘ಮೆಜಿಸ್ಟಿಕ್​​’ಗೇ ಸೀಮಿತಗೊಳ್ಳದೇ ಇನ್ನೂ ಒಂದು ಹೆಜ್ಜೆ ಮುಂದೆಯಿಟ್ಟು ‘ಕಲಾಸಿಪಾಳ್ಯ’ಕ್ಕೂ ಪ್ರವೇಶ ಪಡೆಯುತ್ತಾರೆ. ಅಲ್ಲಿಂದ ಮುಂದಕ್ಕೆ ಹಿಂದಿರುಗಿ ನೋಡದೆ ‘ಚಾಲೆಂಜಿಂಗ್ ಸ್ಟಾರ್’ ಆಗಿ ರೂಪಾಂತರಗೊಳ್ಳುತ್ತಾರೆ.

‘ಮೆಜೆಸ್ಟಿಕ್’​ನಲ್ಲಿ ಕಾಲಿಟ್ಟು.. ‘ಧ್ರುವ’ ತಾರೆಯಾಗಿ ಮಿಂಚಿ.. ‘ಕಿಟ್ಟಿ’ ಅನ್ನೋ ಪಟ್ಟ ಗಿಟ್ಟಿಸ್ಕೊಂಡು ರೋಸ್​ ಹಿಡಿದ ‘ಕರಿಯ’ ಇದೀಗ ಅಭಿಮಾನಿಗಳ ಪಾಲಿನ ‘ದಾಸ’.. ಸ್ಯಾಂಡಲ್​​ವುಡ್​ನ ‘ಸಾರಥಿ’ ‘ಚಕ್ರವರ್ತಿ’ ‘ಚಾಲೆಂಜಿಂಗ್ ಸ್ಟಾರ್’ ಆಗಿ ಮೆರೆಯುತ್ತಿದ್ದಾರೆ. ಇವತ್ತು ದಚ್ಚು ಫ್ಯಾನ್ಸ್​ ಪಾಲಿಗೆ ವೆರಿ ವೆರಿ​ ಸ್ಪೆಷಲ್ ಸ್ಪೆಷಲ್ ಡೇ. ಅದೇ ‘ರಾಬರ್ಟ್’ ಬರ್ತ್​​ ಡೇ. ದಚ್ಚು ಅಭಿಮಾನಿಗಳಿಗೆ ಹುಬ್ಬದ ದಿನ. ಈ ವಿಶೇಷ ದಿನಕ್ಕೆ ದರ್ಶನ್ ಅವರ ಟಾಪ್ 10 ಸೂಪರ್ ಸಿನಿಮಾಗಳು ನಿಮ್ಮ ಮುಂದೆ.

1.ಮೆಜೆಸ್ಟಿಕ್
Majestic Movie Darshan
‘ಮೆಜೆಸ್ಟಿಕ್’ ದರ್ಶನ್ ನಾಯಕ ನಟನಾಗಿ ಬಣ್ಣ ಹಚ್ಚಿದ ಮೊದಲ ಚಲನ ಚಿತ್ರ. ಈ ಚಿತ್ರವನ್ನು ಪಿ.ಎನ್.ಸತ್ಯ ನಿರ್ದೇಶಿಸಿದ್ದಾರೆ. ಇದರಲ್ಲಿ ದರ್ಶನ್, ರೇಖಾ, ಜೈ ಜಗದೀಶ್, ಮತ್ತು ಹರೀಶ್ ರಾಯ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. 2002ರಲ್ಲಿ ರಿಲೀಸ್ ಆದ ಈ ಚಿತ್ರ 100ದಿನಗಳನ್ನು ಪೂರೈಸಿತ್ತು. ಇದೊಂದು ಕನ್ನಡದ ಆ್ಯಕ್ಷನ್ ಕ್ರೈಮ್ ಸಿನಿಮಾ. ಇದರಲ್ಲಿ ದರ್ಶನ್ ದರೋಡೆಕೋರನಾಗಿ, ರೌಡಿಯಾಗಿ, ಅನಾಥ ಮಗುವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮೊದಲ ಚಿತ್ರದಲ್ಲೇ ಜನರ ಮನಸ್ಸಿನಲ್ಲಿ ಮನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

2.ನಮ್ಮ ಪ್ರೀತಿಯ ರಾಮು
Nanna Preethiya ramu Darshan
‘ನಮ್ಮ ಪ್ರೀತಿಯ ರಾಮು’ 2003ರಲ್ಲಿ ತೆರೆ ಕಂಡ ಒಂದು ದುರಂತ ಕಥೆ. ಮಲಯಾಳಂನಲ್ಲಿ ಮೂಡಿ ಬಂದಿದ್ದ ಈ ಸಿನಿಮಾವನ್ನು ಬರೆದ ವಿನಯನ್ ಎಂಬುವವರು ಕನ್ನಡಕ್ಕೂ ಈ ಸಿನಿಮಾ ಕಥೆಯನ್ನು ಬರೆದಿದ್ದಾರೆ. ಇದು ಮಲಯಾಳಂ ಚಿತ್ರ ‘ವಸಂತಿಯಮ್ ಲಕ್ಷ್ಮಿಯಮ್ ಪಿನ್ನೆ ನಜಾನಮ್’ ಚಿತ್ರದ ರಿಮೇಕ್ ಆಗಿದೆ. ಕನ್ನಡದಲ್ಲಿ ‘ನಮ್ಮ ಪ್ರೀತಿಯ ರಾಮು’ ಚಿತ್ರವನ್ನು ಸಂಜಯ್ ಮತ್ತು ವಿಜಯ್ ಎಂಬ ಇಬ್ಬರು ನಿರ್ದೇಶಿಸಿದ್ದಾರೆ.

ಈ ಸಿನಿಮಾ ಕನ್ನಡದಲ್ಲಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ದರ್ಶನ ಹಳ್ಳಿಯಲ್ಲಿ ಹಾಡುವ ಅಂಧ ಕಲಾವಿದನಾಗಿ ನಟಿಸಿದ್ದರು. ಮತ್ತು ನವ್ಯಾ ನಟರಾಜನ್, ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು ಮತ್ತು ನಟ ದರ್ಶನ್ ಕೂಡ ಚಿತ್ರದಲ್ಲಿ ಕುರುಡನ ಸವಾಲಿನ ಪಾತ್ರವನ್ನು ಯಶಸ್ವಿಯಾಗಿ ಅಭಿನಯಿಸಿದ್ದಾರೆ. ಇಳಿಯರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

3.ಕರಿಯಾ
Kariyaa Darshan
ಕರಿಯಾ 2003ರಲ್ಲಿ ಬಂದ ಕನ್ನಡದ ಗ್ಯಾಂಗ್ ಸ್ಟಾರ್ ಚಿತ್ರ. ಇದನ್ನು ಪ್ರೇಮ್ ನಿರ್ದೇಶಿಸಿದ್ದು, ನಟ ದರ್ಶನ್ ಜೊತೆ ನಟಿ ಅಭಿನಯಶ್ರೀ ತೆರೆ ಹಂಚಿಕೊಂಡಿದ್ದರು. ಈ ಚಿತ್ರವು ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಆಗಿತ್ತು ಮತ್ತು ಕರ್ನಾಟಕದಲ್ಲಿ 675 ದಿನಗಳ ಓಟವನ್ನು ಪೂರೈಸಿತ್ತು. ಅಭಿಮಾನಿಗಳ ಬೇಡಿಕೆ ಮೇರೆಗೆ ಚಿತ್ರವನ್ನು 100 ಬಾರಿ ರೀ ರಿಲೀಸ್ ಮಾಡಲಾಗಿತ್ತು. ಇದು ಯುವ ಗ್ಯಾಂಗ್‌ ಸ್ಟಾರ್ ನರ್ತಕಿಯೊಬ್ಬಳನ್ನು ಪ್ರೀತಿಸುವ ಕಥೆ. ಈ ಚಿತ್ರವು ಪ್ರೇಮ್ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಇನ್ನು ಚಿತ್ರದ “ನೀ ನನಗೆ ಸಿಗದಿದ್ದರೆ ಆಸಿಡ್ ಹಾಕುವೆ” ಎಂಬ ಹಾಡಿನ ಸಾಹಿತ್ಯದಿಂದಾಗಿ ವಿವಾದವನ್ನು ಸೃಷ್ಟಿಸಿತ್ತು. ಮಹಿಳಾ ಸಂಸ್ಥೆಗಳು ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದವು.

4.ಲಾಲಿ ಹಾಡು

ಲಾಲಿ ಹಾಡು ಚಿತ್ರವನ್ನು ಎಚ್.ವಾಸು ನಿರ್ದೇಶಿಸಿದ್ದು, ಅಜಯ್ ಕುಮಾರ್ ಸಾಹಿತ್ಯ ಹೊಂದಿದೆ. ದರ್ಶನ್ ಮತ್ತು ನಟಿ ಅಭಿರಾಮಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಚಿತ್ರವನ್ನು ಸಾ ರಾ ಗೋವಿಂದ್ ಅವರ ತನು ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿದೆ. ಇನ್ನು 2003ರ ಮೂರನೇ ಬೆಸ್ಟ್ ಸಿನಿಮಾವಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದು ಚಿತ್ರದಲ್ಲಿ ಸಾದು ಕೋಕಿಲ ಸಂಯೋಜಿಸಿದ ಹಾಡುಗಳು ಸೂಪರ್ ಹಿಟ್ ಆಗಿದ್ದವು.

ಸಂಗೀತದಲ್ಲಿ ಯಶಸ್ವಿ ವೃತ್ತಿಜೀವನಕ್ಕಾಗಿ ನಗರಕ್ಕೆ ಬರುವ ಹಳ್ಳಿ ಗಾಯಕನ ಕಥೆಯನ್ನು ಚಲನಚಿತ್ರ ಹೇಳುತ್ತದೆ. ಆದ್ರೆ ಒಬ್ಬ ಹುಡುಗಿ ಅವನನ್ನು ಮೆಚ್ಚಿಸಲು ಮತ್ತು ಹಣಕ್ಕಾಗಿ ಅವನನ್ನು ಮದುವೆಯಾಗಲು ಪ್ರಯತ್ನಿಸುತ್ತಾಳೆ ಆದರೆ ಅದೃಷ್ಟವಶಾತ್ ಇಬ್ಬರೂ ಬೇರ್ಪಡುತ್ತಾರೆ. ಹೀರೋ ಜೀವನದಲ್ಲಿ ಭರವಸೆ ಕಳೆದುಕೊಂಡು ಖಿನ್ನತೆಗೆ ಸಿಲುಕುತ್ತಾನೆ. ಈ ವೇಳೆ ನಾಯಕಿ ನಾಯಕನ ಜೀವನದಲ್ಲಿ ನಂಬಿಕೆಯನ್ನು ಹೇಗೆ ಮರಳಿ ತರುತ್ತಾಳೆ ಎಂಬುದು ಉಳಿದ ಕಥೆ.

5.ದಾಸ
Daasa Darshan
ದಾಸ ಚಿತ್ರವನ್ನು ಪಿ.ಎನ್.ಸತ್ಯ ನಿರ್ದೇಶಿಸಿದ್ದು, ನಟಿ ಅಮೃತ, ಸತ್ಯಜೀತ್ ಮತ್ತು ಅವಿನಾಶ್ ನಟಿಸಿದ್ದಾರೆ. ಚಲನಚಿತ್ರವು ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತಾಯಿಯನ್ನು ಪ್ರೀತಿಸುವ ಯುವ ಕಾಲೇಜು ವಿದ್ಯಾರ್ಥಿಯ ಕಥೆಯನ್ನು ಹೇಳುತ್ತದೆ. ತನ್ನ ತಾಯಿಯ ಮೇಲೆ ಬಂದ ಆರೋಪಗಳನ್ನು ಸುಳ್ಳು ಎಂದು ಸಾಬೀತು ಪಡಿಸಲು ಹಾಗೂ ಸೇಡು ತೀರಿಸಿಕೊಳ್ಳುವ ಕಥೆಯಾಗಿದೆ.

6.ಕಲಾಸಿಪಾಳ್ಯ
kalasipalya movie Darshan
2004ರಲ್ಲಿ ತೆರೆ ಕಂಡ ಕಲಾಸಿಪಾಳ್ಯವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದು, ರಕ್ಷಿತಾ, ಮೋಹನ್ ರಾಜ್, ರಾಜು ಅನಂತಸ್ವಾಮಿ ಮತ್ತು ಅವಿನಾಶ್ ನಟಿಸಿದ್ದಾರೆ. ಈ ಚಲನ ಚಿತ್ರವು ತಮಿಳಿನ ಬ್ಲಾಕ್ ಬಸ್ಟರ್ ಹಿಟ್ ಧೂಲ್ ಸಿನಿಮಾದಿಂದ ಸ್ಫೂರ್ತಿ ಪಡೆದಿದೆ. 2004ರಲ್ಲಿ ಕನ್ನಡದಲ್ಲಿ ತೆರೆ ಕಂಡ ಚಿತ್ರಗಳ ಪೈಕಿ ಎರಡನೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಇದಾಗಿದೆ. ದರ್ಶನ್ ಅವರಿಗೆ ಯಶಸ್ಸು ತಂದುಕೊಟ್ಟ ಹಾಗೂ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಆಗಿ 250 ದಿನ ಪೂರೈಸಿದ ಚಿತ್ರವಾಗಿದೆ.

7. ಅಯ್ಯ
ayya darshan movie
2005ರಲ್ಲಿ ಮೂಡಿ ಬಂದ ಅಯ್ಯ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದು, ರಕ್ಷಿತಾ, ಅವಿನಾಶ್ ಮತ್ತು ಶ್ರೀನಗರ ಕಿಟ್ಟಿ ಜೊತೆಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ದರ್ಶನ್ ಖಡಕ್ ಪೊಲೀಸ್ ಆಫಿಸರ್ ಆಗಿ ನಟಿಸಿದ್ದು ನಗರದಲ್ಲಾಗುವ ಕ್ರೈಮ್ ತಡೆಯಲು ಶ್ರಮಿಸಿದ್ದಾರೆ. ಬ್ಲಾಕ್ ಬಸ್ಟರ್ ಸಿನಿಮಾವಾಗಿ 100 ದಿನಗಳ ಓಟವನ್ನು ಆಚರಿಸಿದೆ. ಈ ಸಿನಿಮಾ ತಮಿಳಿನ ಸಾಮಿ ಚಿತ್ರದ ರಿಮೇಕ್ ಆಗಿದೆ.

8.ಅನಾಥರು
Anaatharu Movie Darshan
2007 ರಲ್ಲಿ ತೆರೆ ಕಂಡ ‘ಅನಾಥರು’ ಚಿತ್ರದಲ್ಲಿ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಚಿತ್ರದಲ್ಲಿ ದರ್ಶನ್ ಮತ್ತು ಉಪೇಂದ್ರ ಸ್ನೇಹಿತರ ಪಾತ್ರವನ್ನು ನಿರ್ವಹಿಸಿದ್ದರು.

9. ಸಾರಥಿ
Saarathi Movie Darshan
2011ರಲ್ಲಿ ಮೂಡಿಬಂದ ‘ಸಾರಥಿ’ ದರ್ಶನ ವೃತ್ತಿಜೀವನದ ಪ್ರಮುಖ ಚಲನಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಅವರ ಸಹೋದರ ದಿನಕರ್ ತೂಗುದೀಪ್ ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ದೀಪಾ ಸನ್ನಿಧಿ, ಶರತ್ ಕುಮಾರ್, ರಂಗಾಯಣ ರಘು ಮತ್ತು ಶರತ್ ಲೋಹಿತಾಶ್ವಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರವು ಹಾಲಿವುಡ್ ಚಲನಚಿತ್ರ ‘ಲಯನ್ ಕಿಂಗ್’ ನಿಂದ ಸ್ಫೂರ್ತಿ ಪಡೆದಿದೆ. ಹುಡುಗಿಯನ್ನು ಪ್ರೀತಿಸುವ ಆಟೋರಿಕ್ಷಾ ಚಾಲಕನನ್ನು ಆಧರಿಸಿದ ಚಲನಚಿತ್ರ ಇದಾಗಿದೆ.

10. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
krantiveera sangolli rayanna Movie Darshan
2012ರಲ್ಲಿ ಬಂದ ‘ಕ್ರಾಂತಿವೀರ ಸಂಗೊಲ್ಲಿ ರಾಯಣ್ಣ’ ಚಿತ್ರದ ಮೂಲಕ ದರ್ಶನ್, ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಪಾತ್ರವನ್ನು ನಿರ್ವಹಿಸಿದ್ದರು. 1831 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜವಂಶದಲ್ಲಿ ಸೈನಿಕನಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರನ್ನು ಆಧರಿಸಿದ ಐತಿಹಾಸಿಕ ಚಲನಚಿತ್ರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’.

ಈ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ದರ್ಶನ್, ನಿಕಿತಾ, ಮತ್ತು ಜಯಪ್ರದಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಸಂಗೊಳ್ಳಿ ರಾಯಣ್ಣ ಶೌರ್ಯಕ್ಕೆ ಹೆಸರುವಾಸಿಯಾಗಿದ್ದವರು. ಬ್ರಿಟಿಷ್ ಸೈನ್ಯವು ಕುತಂತ್ರದಿಂದ ಸಂಗೊಳ್ಳಿ ರಾಯಣ್ಣನನ್ನು ಸೆರೆ ಹಿಡಿದು ಸಾರ್ವಜನಿಕವಾಗಿ ಗಲ್ಲಿಗೇರಿಸಿತ್ತು. ಚಿತ್ರದಲ್ಲಿ ದೇಶಪ್ರೇಮವನ್ನು ತುಂಬಲು ಯಶೋವರ್ಧನ್ ಮತ್ತು ಹರಿಕೃಷ್ಣ ಉತ್ತಮ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: D Boss Darshan Birthday: ಲೈಟ್ ಬಾಯ್​ ಜೀವನದಿಂದ ರಾಬರ್ಟ್​ ಸಿನಿಮಾವರೆಗೆ ದರ್ಶನ್ ನಡೆದು ಬಂದ ದಾರಿ