D Boss Darshan: ಸಂಭಾವನೆ ಪಡೆಯದೆ ಕರ್ನಾಟಕ ಕೃಷಿ ಇಲಾಖೆ ರಾಯಭಾರಿಯಾದ ದರ್ಶನ್​

D Boss Darshan: ಸಂಭಾವನೆ ಪಡೆಯದೆ ಕರ್ನಾಟಕ ಕೃಷಿ ಇಲಾಖೆ ರಾಯಭಾರಿಯಾದ ದರ್ಶನ್​
ದರ್ಶನ್​ ತೂಗುದೀಪ

Karnataka Agriculture Ambassador: ರಾಯಭಾರಿಯಾಗಿ ಕಾರ್ಯ ನಿರ್ವಹಿಸುವ ಕುರಿತು ದರ್ಶನ್​, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಯಾವ ತೆರನಾದ ಯೋಜನೆ ರೂಪಿಸಬೇಕು, ರೈತರನ್ನು ಹೇಗೆ ತಲುಪಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಚರ್ಚಿಸಿದ್ದಾರೆ.

Skanda

|

Feb 16, 2021 | 11:38 AM

ಚಾಲೆಂಜಿಂಗ್ ಸ್ಟಾರ್ ದರ್ಶನ್​ (Challenging Star Darshan) ಸಾಮಾಜಿಕ ಕಳಕಳಿ ಮೆರೆಯುವುದರಲ್ಲಿ ಎತ್ತಿದ ಕೈ. ಮೊದಲಿನಿಂದಲೂ ಪ್ರಚಾರವನ್ನಾಗಲೀ, ಹಣವನ್ನಾಗಲೀ ಬಯಸದೆ ಬಡವರಿಗೆ, ಅಶಕ್ತರಿಗೆ ಸದ್ದಿಲ್ಲದೇ ಸಹಾಯ ಹಸ್ತ ಚಾಚುತ್ತಾ ಬಂದಿದ್ದಾರೆ. ಜೊತೆಗೆ, ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದರ್ಶನ್​ ಅವರು ಯಾವುದೇ ಕೆಲಸ ಮಾಡಿದರೂ ಅದು ಬಲುಬೇಗನೇ ಪರಿಣಾಮ ಬೀರುತ್ತದೆ. ದರ್ಶನ್ ಅವರ ಈ ಜನಪ್ರಿಯತೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರ್ಕಾರ 44ನೇ ವರ್ಷಕ್ಕೆ ಕಾಲಿಡುತ್ತಿರುವ ಚಾಲೆಂಜಿಂಗ್ ಸ್ಟಾರ್ ಅವರನ್ನು ಕರ್ನಾಟಕ ಕೃಷಿ ಇಲಾಖೆ ರಾಯಭಾರಿಯಾಗಿ ನೇಮಕ ಮಾಡಿದೆ. ಈ ಕುರಿತ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಸರ್ಕಾರ ರೈತರಿಗಾಗಿ ಜಾರಿಗೆ ತರುವ ಕೃಷಿ ಯೋಜನೆಗಳನ್ನು ಪ್ರಚುರಪಡಿಸಲು ಮತ್ತು ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ದರ್ಶನ್​ ಈ ಇಲಾಖೆಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರಿಗಿರುವ ಜನಪ್ರಿಯತೆ ಮತ್ತು ಶಕ್ತಿ ಕೃಷಿಕರಲ್ಲಿ ಆತ್ಮಸಥೈರ್ಯ ಹೆಚ್ಚಿಸುವ ಜೊತೆಗೆ ಧನಾತ್ಮಕ ಪರಿಣಾಮ ಬೀರಲಿದೆ. ಸ್ವತಃ ಕೃಷಿಕ ಮತ್ತು ಪ್ರಾಣಿಪ್ರಿಯರಾಗಿರುವ ದರ್ಶನ್​ ಈ ಯೋಜನೆಯ ರಾಯಭಾರಿಯಾಗಲು ಅತ್ಯಂತ ಸೂಕ್ತ ವ್ಯಕ್ತಿ ಎಂದು ಯೋಜನೆಗೆ ಸಂಬಂಧಿಸಿದವರು ಅಭಿಪ್ರಾಯಪಟ್ಟಿದ್ದಾರೆ. ರಾಯಭಾರಿಯಾಗಿ ಕಾರ್ಯ ನಿರ್ವಹಿಸುವ ಕುರಿತು ದರ್ಶನ್​, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಯಾವ ತೆರನಾದ ಯೋಜನೆ ರೂಪಿಸಬೇಕು, ರೈತರನ್ನು ಹೇಗೆ ತಲುಪಬೇಕು ಎಂಬಿತ್ಯಾದಿ ವಿಚಾರಗಳ ಕುರಿತು ಚರ್ಚಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಅಭಿನಯದ ರಾಬರ್ಟ್​ ಸಿನಿಮಾ ಟ್ರೇಲರ್​ ಬಿಡುಗಡೆ, ಕೆಲವೇ ನಿಮಿಷಗಳಲ್ಲಿ ದಾಖಲೆ ವೀಕ್ಷಣೆ

ರಾಯಭಾರಿಯಾಗಲು ಯಾವುದೇ ಸಂಭಾವನೆ ಪಡೆಯದ ದರ್ಶನ್​ ಸಾಮಾನ್ಯವಾಗಿ ಜನಪ್ರಿಯ ವ್ಯಕ್ತಿಗಳು ಹಾಗೂ ಸ್ಟಾರ್ ನಟರನ್ನು ಜಾಹೀರಾತಿಗೆ ಬಳಸಿಕೊಳ್ಳಲು ದೊಡ್ಡ ಮೊತ್ತದ ಹಣ ತೆರಬೇಕಾಗುತ್ತದೆ. ಆದರೆ, ಈ ವಿಚಾರದಲ್ಲಿ ದರ್ಶನ್ ಬಹಳ ಉದಾರಿಯಾಗಿದ್ದು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ರಾಯಭಾರಿಯಾಗಲು ಯಾವುದೇ ಹಣ ಪಡೆದಿಲ್ಲ ಎಂದು ತಿಳಿದುಬಂದಿದೆ.

Follow us on

Most Read Stories

Click on your DTH Provider to Add TV9 Kannada