Roberrt Trailer: ದರ್ಶನ್ ಅಭಿನಯದ ರಾಬರ್ಟ್​ ಸಿನಿಮಾ ಟ್ರೇಲರ್​ ಬಿಡುಗಡೆ, ಕೆಲವೇ ನಿಮಿಷಗಳಲ್ಲಿ ದಾಖಲೆ ವೀಕ್ಷಣೆ

D Boss Darshan Birthday: ಆನಂದ್ ಆಡಿಯೋ ಅವರ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಅರ್ಧತಾಸಿನಲ್ಲಿ ಸುಮಾರು 4.50 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದೆ.

Roberrt Trailer: ದರ್ಶನ್ ಅಭಿನಯದ ರಾಬರ್ಟ್​ ಸಿನಿಮಾ ಟ್ರೇಲರ್​ ಬಿಡುಗಡೆ, ಕೆಲವೇ ನಿಮಿಷಗಳಲ್ಲಿ ದಾಖಲೆ ವೀಕ್ಷಣೆ
ರಾಬರ್ಟ್​ ಸಿನಿಮಾ ಟ್ರೇಲರ್​
Follow us
Skanda
|

Updated on:Feb 16, 2021 | 11:51 AM

ಚಾಲೆಂಜಿಂಗ್ ಸ್ಟಾರ್ ದರ್ಶನ್​ (Challenging Star Darshan) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 44ನೇ ವರ್ಷಕ್ಕೆ ಕಾಲಿಡುತ್ತಿರುವ ದರ್ಶನ್ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿದ್ದರೂ ಅವರನ್ನು ಖುಷಿಪಡಿಸಲು ಮಾತ್ರ ಮರೆತಿಲ್ಲ. ದರ್ಶನ್ ಜನ್ಮದಿನಾಚರಣೆ ಪ್ರಯುಕ್ತ ‘ರಾಬರ್ಟ್​’ (Roberrt) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್​ ನೋಡಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿದ್ದಾರೆ. ಆನಂದ್ ಆಡಿಯೋ ಅವರ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಅರ್ಧತಾಸಿನಲ್ಲಿ ಸುಮಾರು 4.50 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದೆ.

ಮಾರ್ಚ್​ 11ರಂದು ಶಿವರಾತ್ರಿ ದಿನವೇ ರಾಬರ್ಟ್​ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದರ್ಶನ್, ವಿನೋದ್ ಪ್ರಭಾಕರ್​, ಆಶಾ ಭಟ್, ಜಗಪತಿ ಬಾಬು, ರವಿ ಕಿಶನ್, ರವಿ ಶಂಕರ್ ಸೇರಿದಂತೆ ಮೊದಲಾದವರು ಅಭಿನಯಿಸಿರುವ ಈ ಚಿತ್ರದ ಕುರಿತು ಬಹು ನಿರೀಕ್ಷೆ ವ್ಯಕ್ತವಾಗುತ್ತಿದೆ. ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ಅವರು ಚಿತ್ರವನ್ನು ನಿರ್ಮಿಸುತ್ತಿದ್ದು, ತರುಣ್ ಕಿಶೋರ್ ಸುಧೀರ್ ಅವರು ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ವಿ.ಹರಿಕೃಷ್ಣ ಅವರು ಬ್ಯಾಕ್​ಗ್ರೌಂಡ್ ಸ್ಕೋರ್ ನೀಡಿದ್ದಾರೆ. ಒಟ್ಟಾರೆಯಾಗಿ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಜೋರಾಗಿಯೇ ಸದ್ದು ಮಾಡುವ ಲಕ್ಷಣ ಕಾಣುತ್ತಿದ್ದು, ದರ್ಶನ್ ಅಭಿಮಾನಿಗಳು ಹಬ್ಬ ಆಚರಿಸಲು ಸಜ್ಜಾಗಿರುವುದಂತೂ ಹೌದು.

ಇದನ್ನೂ ಓದಿ: ಇಂದು ಡಿ ಬಾಸ್​ ದರ್ಶನ್​ ಜನ್ಮದಿನ: ದಾಸನಿಗೆ ಸಿಕ್ಕ ಉಡುಗೊರೆಗಳೆಷ್ಟು ಗೊತ್ತಾ?

ROBERRT TRAILER

ರಾಬರ್ಟ್​ ಸಿನಿಮಾ ಟ್ರೇಲರ್​

ROBERRT TRAILER

ರಾಬರ್ಟ್​ ಸಿನಿಮಾ ಟ್ರೇಲರ್​ನಲ್ಲಿ ದರ್ಶನ್​

ಇನ್ನೊಂದೆಡೆ ದರ್ಶನ್​ ಹುಟ್ಟುಹಬ್ಬದ ಸಲುವಾಗಿ ಟ್ವಿಟ್ಟರ್​ನಲ್ಲಿ ಕಾಮನ್​ ಡಿಪಿ ಅಭಿಯಾನ ಜೋರಾಗಿ ನಡೆಯುತ್ತಿದೆ. ನಟನೆಯಲ್ಲಿ ಮಾತ್ರವಲ್ಲದೇ, ಪ್ರಾಣಿಗಳ ರಕ್ಷಣೆ ಹಾಗೂ ಛಾಯಾಗ್ರಹಣದಲ್ಲಿ ದರ್ಶನ್​ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಮೈಸೂರಿನ ಝೂನಲ್ಲಿ ಹುಲಿಯನ್ನು ಕೂಡ ಅವರು ದತ್ತು ಪಡೆದಿದ್ದಾರೆ. ಆಗಾಗ, ಕಾಡಿಗೆ ತೆರಳಿ ಫೋಟೊಗ್ರಫಿ ಕೂಡ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಅದೇ ಥೀಮ್​ಮೇಲೆ ಕಾಮನ್​ ಡಿಪಿ ಸಿದ್ಧಪಡಿಸಲಾಗಿದೆ. ವಾಟ್ಸಾಪ್​, ಫೇಸ್​ಬುಕ್​ನಲ್ಲಿ, ಟ್ವಿಟ್ಟರ್​​ನಲ್ಲಿ ಕಾಮನ್​ ಡಿಪಿ ರಾರಾಜಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ದರ್ಶನ್​ಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಅವರ ಹೆಸರು ಟ್ವಿಟ್ಟರ್​ನಲ್ಲಿ ಟ್ರೆಂಡ್ ಕೂಡ ಆಗುತ್ತಿದೆ.

Published On - 11:01 am, Tue, 16 February 21