Dboss Darshan Birthday: ಇಂದು ಡಿ ಬಾಸ್​ ದರ್ಶನ್​ ಜನ್ಮದಿನ: ದಾಸನಿಗೆ ಸಿಕ್ಕ ಉಡುಗೊರೆಗಳೆಷ್ಟು ಗೊತ್ತಾ?

Happy Birthday Darshan: ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ದರ್ಶನ್​ಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

Dboss Darshan Birthday: ಇಂದು ಡಿ ಬಾಸ್​ ದರ್ಶನ್​ ಜನ್ಮದಿನ: ದಾಸನಿಗೆ ಸಿಕ್ಕ ಉಡುಗೊರೆಗಳೆಷ್ಟು ಗೊತ್ತಾ?
ದರ್ಶನ್​
Follow us
ರಾಜೇಶ್ ದುಗ್ಗುಮನೆ
| Updated By: ಆಯೇಷಾ ಬಾನು

Updated on:Feb 16, 2021 | 7:02 AM

ಇಂದು ದರ್ಶನ್​ ಅಭಿಮಾನಿಗಳಿಗೆ ಅಕ್ಷರಶಃ ಹಬ್ಬ. ಏಕೆಂದರೆ ಇಂದು ದರ್ಶನ್​ ಹುಟ್ಟುಹಬ್ಬ. ಡಿಬಾಸ್​ ಇಂದು (ಫೆ.16) 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನೆಚ್ಚಿನ ನಟನಿಗೆ​ ಅವರ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಅಷ್ಟೇ ಅಲ್ಲ, ಜನ್ಮದಿನದ ಪ್ರಯುಕ್ತ ಡಿ ಬಾಸ್​ಗೆ ಉಡುಗೊರೆಯ ಮಹಾಪೂರ ಹರಿದು ಬಂದಿದೆ. ಪ್ರತಿವರ್ಷ ಮಧ್ಯರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್​ ಮನೆ ಸಮೀಪ ಅಭಿಮಾನಿಗಳು ತೆರಳಿ ಕೇಕ್​ ಕತ್ತರಿಸಿ, ಅವರಿಗೆ ಶುಭ ಹಾರೈಸುತ್ತಿದ್ದರು. ಅವರ ಜನ್ಮದಿನದಂದು ದೊಡ್ಡ ಜನ ಸಾಗರವೇ ಸೇರುತ್ತಿತ್ತು. ಆದರೆ, ಕೊರೊನಾ ಕಾರಣ ನೀಡಿ ದರ್ಶನ್​ ಮಧ್ಯರಾತ್ರಿ ಅಭಿಮಾನಿಗಳ ಬಳಿ ಬರದಂತೆ ಕೋರಿದ್ದರು.

ಇನ್ನು, ದರ್ಶನ್​ಗೆ ಉಡುಗೊರೆಯ ಮೇಲೆ ಉಡುಗೊರೆ ಸಿಕ್ಕಿದೆ ಮತ್ತು ಸಿಗುತ್ತಿದೆ. ಜನ್ಮದಿನದ ಪ್ರಯುಕ್ತ ಅವರ ಮುಂದಿನ ಚಿತ್ರ ರಾಬರ್ಟ್​​ ಸಿನಿಮಾದ ಟ್ರೈಲರ್​ ರಿಲೀಸ್​ ಆಗುತ್ತಿದೆ. ಈ ಟ್ರೈಲರ್​ಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಡಿ ಬಾಸ್​ ಜನ್ಮದಿನದ ಪ್ರಯುಕ್ತ ಚಿತ್ರತಂಡ ಅಭಿಮಾನಿಗಳಿಗೆ ನೀಡುತ್ತಿರುವ ಗಿಫ್ಟ್​.

ದರ್ಶನ್​ ಜನ್ಮದಿನಕ್ಕಾಗಿ ಅಭಿಮಾನಿಗಳಿಂದ ವಿಶೇಷ ಹಾಡೊಂದು ಗಿಫ್ಟ್​ ಸಿಕ್ಕಿದೆ. ದರ್ಶನ್​ ಅಭಿಮಾನಿ ಸುಪ್ರೀತ್​ ಗಾಂಧಾರ ಹಾಡೊಂದು ಹಾಡಿದ್ದಾರೆ. ದರ್ಶನ್ ಮುಂದಿನ ಸಿನಿಮಾ ರಾಬರ್ಟ್​ ಬಾಕ್ಸ್​ ಆಫೀಸ್​ಅನ್ನು ಧೂಳಿಪಟ ಮಾಡಲಿದೆ ಎಂದು ಹಾಡಿರುವ ಈ ಹಾಡು ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.

ಇನ್ನು ಟ್ವಿಟ್ಟರ್​ನಲ್ಲಿ ಕಾಮನ್​ ಡಿಪಿ ಅಭಿಯಾನ ಜೋರಾಗಿ ನಡೆಯುತ್ತಿದೆ. ನಟನೆಯಲ್ಲಿ ಮಾತ್ರವಲ್ಲದೇ, ಪ್ರಾಣಿಗಳ ರಕ್ಷಣೆ ಹಾಗೂ ಛಾಯಾಗ್ರಹಣದಲ್ಲಿ ದರ್ಶನ್​ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಮೈಸೂರಿನ ಝೂನಲ್ಲಿ ಹುಲಿಯನ್ನು ಕೂಡ ಅವರು ದತ್ತು ಪಡೆದಿದ್ದಾರೆ. ಆಗಾಗ, ಕಾಡಿಗೆ ತೆರಳಿ ಫೋಟೊಗ್ರಫಿ ಕೂಡ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಅದೇ ಥೀಮ್​ಮೇಲೆ ಕಾಮನ್​ ಡಿಪಿ ಸಿದ್ಧಪಡಿಸಲಾಗಿದೆ. ವಾಟ್ಸಾಪ್​, ಫೇಸ್​ಬುಕ್​ನಲ್ಲಿ, ಟ್ವಿಟ್ಟರ್​​ನಲ್ಲಿ ಕಾಮನ್​ ಡಿಪಿ ರಾರಾಜಿಸುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ದರ್ಶನ್​ಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಅವರ ಹೆಸರು ಟ್ವಿಟ್ಟರ್​ನಲ್ಲಿ ಟ್ರೆಂಡ್ ಕೂಡ ಆಗುತ್ತಿದೆ.

ಇದನ್ನೂ ಓದಿ: DBossBirthdayCDP: ಡಿ ಬಾಸ್ ದರ್ಶನ್​ ಜನ್ಮದಿನಕ್ಕೆ ಕಾಮನ್​ ಡಿಪಿ ಅಭಿಯಾನ ಆರಂಭಿಸಿದ ಅಭಿಮಾನಿಗಳು

Published On - 6:31 am, Tue, 16 February 21