AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಎರಡು ಕ್ಯಾಚ್​ಗಳು..!

VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಎರಡು ಕ್ಯಾಚ್​ಗಳು..!

ಝಾಹಿರ್ ಯೂಸುಫ್
|

Updated on: Mar 06, 2026 | 12:52 PM

Share

Axar patel catches: ಚೆಂಡು ಇನ್ನೇನು ಬೌಂಡರಿ ಗೆರೆ ದಾಟಲಿದೆ ಅನ್ನುವಷ್ಟರಲ್ಲಿ ಮಿಂಚಿನ ವೇಗದಲ್ಲಿ ಓಡಿ ಬಂದ ಅಕ್ಷರ್ ಪಟೇಲ್ ಅತ್ಯದ್ಭುತವಾಗಿ ಚೆಂಡನ್ನು ಹಿಡಿದರು. ಆದರೆ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ದಾಟುವ ಮುನ್ನ ಚೆಂಡನ್ನು ಶಿವಂ ದುಬೆ ಕೈಗಿತ್ತರು. ಈ ಮೂಲಕ ನಿರ್ಣಾಯಕ ಹಂತದಲ್ಲಿ ಟೀಮ್ ಇಂಡಿಯಾ ಮಹತ್ವದ ಯಶಸ್ಸು ತಂದುಕೊಡುವಲ್ಲಿ ಅಕ್ಷರ್ ಪಟೇಲ್ ಪ್ರಮುಖ ಪಾತ್ರವಹಿಸಿದರು.

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಈ ಗೆಲುವಿಗೆ ಪ್ರಮುಖ ಕಾರಣ ಸಂಜು ಸ್ಯಾಮ್ಸನ್ ಆರ್ಭಟ, ಜಸ್​ಪ್ರೀತ್ ಬುಮ್ರಾ ಅವರ ನಿಖರ ದಾಳಿ ಮತ್ತು ಅಕ್ಷರ್ ಪಟೇಲ್ ಅವರ ಮಿಂಚಿನ ಫೀಲ್ಡಿಂಗ್. ಅದರಲ್ಲೂ ಅಕ್ಷರ್ ಪಟೇಲ್ ಹಿಡಿದ ಎರಡು ಕ್ಯಾಚ್​ಗಳು ಇಡೀ ಪಂದ್ಯದ ಚಿತ್ರಣ ಬದಲಿಸಿತು ಎಂದರೆ ತಪ್ಪಾಗಲಾರದು.

ಏಕೆಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಸ್ಫೋಟಕ ದಾಂಡಿಗ ಹ್ಯಾರಿ ಬ್ರೂಕ್ ವಿಕೆಟ್ ನಿರ್ಣಾಯಕವಾಗಿತ್ತು. 5ನೇ ಓವರ್​ನ ಮೊದಲ ಎಸೆತವನ್ನು ಬುಮ್ರಾ ನಿಧಾನಗತಿಯಲ್ಲಿ ಎಸೆದರು, ಅತ್ತ ಚೆಂಡಿನ ವೇಗವನ್ನು ಗುರುತಿಸುವಲ್ಲಿ ಎಡವಿ ಬ್ರೂಕ್ ಬ್ಯಾಟ್ ನೀಡಿದ್ದರು.

ಇದಾಗ್ಯೂ ಚೆಂಡು ಬೌಂಡರಿಯತ್ತ ಚಿಮ್ಮಿತ್ತು. ಆದರೆ ವೇಳೆ ಹಿಮ್ಮುಖವಾಗಿ ಓಡಿದ ಅಕ್ಷರ್ ಪಟೇಲ್ ಅದ್ಭುತ ಡೈವಿಂಗ್ ಮೂಲಕ ಚೆಂಡನ್ನು ಹಿಡಿದರು. ಈ ಮೂಲಕ ಭಾರತ ತಂಡಕ್ಕೆ 2ನೇ ವಿಕೆಟ್ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇದಾದ ಬಳಿಕ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ವಿಲ್ ಜ್ಯಾಕ್ಸ್ ಕ್ಯಾಚ್ ಹಿಡಿಯುವಲ್ಲಿಯೂ ಅಕ್ಷರ್ ಪಟೇಲ್ ಯಶಸ್ವಿಯಾದರು. ಈ ಬಾರಿ ಹಿಡಿದದ್ದು ಅತ್ಯದ್ಭುತ ಕ್ಯಾಚ್ ಎಂಬುದು ವಿಶೇಷ. ಅರ್ಷದೀಪ್ ಎಸೆತದಲ್ಲಿ ಜ್ಯಾಕ್ಸ್ ಆಫ್ ಸೈಡ್​ನತ್ತ ಭರ್ಜರಿಯಾಗಿ ಬಾರಿಸಿದ್ದರು.

ಚೆಂಡು ಇನ್ನೇನು ಬೌಂಡರಿ ಗೆರೆ ದಾಟಲಿದೆ ಅನ್ನುವಷ್ಟರಲ್ಲಿ ಮಿಂಚಿನ ವೇಗದಲ್ಲಿ ಓಡಿ ಬಂದ ಅಕ್ಷರ್ ಪಟೇಲ್ ಅತ್ಯದ್ಭುತವಾಗಿ ಚೆಂಡನ್ನು ಹಿಡಿದರು. ಆದರೆ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ದಾಟುವ ಮುನ್ನ ಚೆಂಡನ್ನು ಶಿವಂ ದುಬೆ ಕೈಗಿತ್ತರು. ಈ ಮೂಲಕ ನಿರ್ಣಾಯಕ ಹಂತದಲ್ಲಿ ಟೀಮ್ ಇಂಡಿಯಾ ಮಹತ್ವದ ಯಶಸ್ಸು ತಂದುಕೊಡುವಲ್ಲಿ ಅಕ್ಷರ್ ಪಟೇಲ್ ಪ್ರಮುಖ ಪಾತ್ರವಹಿಸಿದರು. ಇದೀಗ ಈ ಎರಡು ಕ್ಯಾಚ್​ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್​ಗಳಿಸಿದರೆ, ಇಂಗ್ಲೆಂಡ್ 246 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 7 ರನ್​ಗಳ ಜಯದೊಂದಿಗೆ ಫೈನಲ್​ ಫೈಟ್​ಗೆ ಅರ್ಹತೆ ಪಡೆದುಕೊಂಡಿದೆ.

Follow Us