Kichcha Sudeep: ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರದ ಟೀಸರ್​ಗೆ ಟ್ವೀಟ್​ ಮಾಡಿ ಶುಭಕೋರಿದ ಕಿಚ್ಚ ಸುದೀಪ್

Hostel Hudugaru Bekagiddare: ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್​ ರೋಣ ಸಿನಿಮಾದ ಟೀಸರ್ ಬುರ್ಜ್​ ಖಲೀಫಾದಲ್ಲಿ ಬಿಡುಗಡೆಯಾಗಿದ್ದರೆ, ನಾವು ಅಂತರಿಕ್ಷದಲ್ಲಿ ಬಿಡುಗಡೆ ಮಾಡ್ತೀವಿ ಎಂಬಂತೆ ಕ್ರಿಯಾತ್ಮಕ ಮತ್ತು ನವಿರು ಹಾಸ್ಯದ ವಿಡಿಯೋ ತಯಾರಿಸಿದ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ತಂಡದ ಪ್ರಯತ್ನ ನೋಡಿ ಕಿಚ್ಚ ಸುದೀಪ್ ಖುಷಿಯಾಗಿದ್ದಾರೆ.

Kichcha Sudeep: ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರದ ಟೀಸರ್​ಗೆ ಟ್ವೀಟ್​ ಮಾಡಿ ಶುಭಕೋರಿದ ಕಿಚ್ಚ ಸುದೀಪ್
ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ
Follow us
Skanda
|

Updated on: Feb 16, 2021 | 2:48 PM

ಚಂದನವನದಲ್ಲಿ (Sandalwood) ಕ್ರಿಯಾಶೀಲ ಯುವಕರು ಆಗಾಗ ಹೊಸ ಪ್ರಯತ್ನಗಳ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಏಕತಾನತೆಯನ್ನು ಮುರಿಯಲೆಂದೇ ಬಂದಂತೆ ಕಾಣುವ ಹೊಸಬರಿಗೆ ಸ್ಯಾಂಡಲ್​ವುಡ್​ನ ಹಿರಿಯರು ಸಹ ಪ್ರೋತ್ಸಾಹ  ನೀಡುತ್ತಲೇ ಬಂದಿದ್ದಾರೆ. ಸದ್ಯ ತಮ್ಮ ವಿಭಿನ್ನ ಆಲೋಚನೆ ಮತ್ತು ಪ್ರಮೋಶನಲ್​ ಟೀಸರ್ (Promotional Teaser) ಮೂಲಕ ಗಮನ ಸೆಳೆದಿರುವ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ತಂಡಕ್ಕೆ ಕಿಚ್ಚ ಸುದೀಪ್​ ಟ್ವೀಟ್​ ಮಾಡಿ ಶುಭ ಕೋರಿದ್ದಾರೆ.

ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್​ ರೋಣ ಸಿನಿಮಾದ ಟೀಸರ್ ಬುರ್ಜ್​ ಖಲೀಫಾದಲ್ಲಿ ಬಿಡುಗಡೆಯಾಗಿದ್ದರೆ, ನಾವು ಅಂತರಿಕ್ಷದಲ್ಲಿ ಬಿಡುಗಡೆ ಮಾಡ್ತೀವಿ ಎಂಬಂತೆ ಕ್ರಿಯಾತ್ಮಕ ಮತ್ತು ನವಿರು ಹಾಸ್ಯದ ವಿಡಿಯೋ ತಯಾರಿಸಿದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ತಂಡದ ಪ್ರಯತ್ನ ನೋಡಿ ಕಿಚ್ಚ ಸುದೀಪ್ ಖುಷಿಯಾಗಿದ್ದಾರೆ. ಇಂತಹ ಪ್ರಯತ್ನದ ಮೂಲಕವೇ ಹೊಸತನ ಮೂಡುವುದು ಎಂದು ಬೆನ್ನು ತಟ್ಟಿದ್ದಾರೆ.

HOSTEL HUDUGARU BEKAGIDDARE

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ

‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಚಿತ್ರಕಥೆ ಮತ್ತು ನಿರ್ದೇಶನವನ್ನು ನಿತಿನ್ ಕೃಷ್ಣಮೂರ್ತಿ ಮಾಡಿದ್ದು, ಅರವಿಂದ್ ಎಸ್​ ಕಶ್ಯಪ್​ ಅವರ ಛಾಯಾಗ್ರಹಣದಲ್ಲಿ ಸಿನಿಮಾ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಸಿನಿಮಾಕ್ಕೆ ಇರುವುದು ಮತ್ತಷ್ಟು ನಿರೀಕ್ಷೆಯನ್ನೂ ಮೂಡಿಸಿದೆ. ಈ ಚಿತ್ರದ ಟೀಸರ್ 50 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ವೀಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ 8 ಆರಂಭಕ್ಕೆ ಕಿಚ್ಚ ಜೋಯಿಸರು ಕೊನೆಗೂ ನೀಡಿದ್ರು ಮುಹೂರ್ತ!

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ