ಭಾಗೀದಾರ ನ್ಯಾಯ್ ಸಮಾವೇಶ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂದುವರಿದು ಮಾತಾಡಿದ ಸಿದ್ದರಾಮಯ್ಯ 2015 ರಲ್ಲಿ ತಾನು ಮಾಡಿಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದೇಶದಲ್ಲೇ ಪ್ರಥಮ, ಸಮೀಕ್ಷೆ ಕೆಲಸ ಮುಗಿದರೂ 2018ರಲ್ಲಿ ಹೆಚ್ ಡಿ ಕುಮಾರಸ್ವಾಮಿ ಮತ್ತು ನಂತರದ ಬಿಜೆಪಿ ಮುಖ್ಯಮಂತ್ರಿಗಳು ವರದಿಯನ್ನು ಸ್ವೀಕರಿಸಲಿಲ್ಲ, ಹಾಗಾಗಿ ಅದು 10 ವರ್ಷ ಹಳೆಯದಾದ ಕಾರಣ ಮತ್ತೊಮ್ಮೆ ಮಾಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಿದರು.
ದೆಹಲಿ, ಜುಲೈ 25: ಭಾಗೀದಾರ್ ನ್ಯಾಯ್ ಸಮ್ಮೇಳನದಲ್ಲಿ ಇಂದು ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಐಸಿಸಿಯ ಒಬಿಸಿ ಸೆಲ್ (AICC OBC Cell) ಮತ್ತು ಜಾತಿಗಣತಿಯ ಬಗ್ಗೆ ಮಾಧ್ಯಮದವರೊಂದಿಗೆ ಮಾತಾಡಿದರು. ಇವತ್ತು ನಡೆದಿದ್ದು ಎರಡನೇ ಸಭೆ ಅಥವಾ ಸಮಾವೇಶ, ಅನಿಲ್ ಜೈ ಹಿಂದ್ ಅಧ್ಯಕ್ಷರಾಗಿರುವ ಮತ್ತು ತಾನು ಸದಸ್ಯನಾಗಿರುವ ಎಐಸಿಸಿ ಒಬಿಸಿ ಸಲಹಾ ಸಮಿತಿಯ ಮೊದಲ ಸಭೆ ಜುಲೈ 15 ಮತ್ತು 16ರಂದು ಬೆಂಗಳೂರಲ್ಲಿ ನಡೆದಿತ್ತು, ಆ ಸಭೆಯಲ್ಲಿ ಬೆಂಗಳೂರು ಡಿಕ್ಲರೇಷನ್ ಸೇರಿದಂತೆ ಮೂರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು. ಈ ಸಮಿತಿಯಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಬೇರೆ ಬೇರೆ ರಾಜ್ಯಗಳ ಹಲವಾರು ಶಾಸಕರು ಮತ್ತು ಸಂಸದರು ಸದಸ್ಯರಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಒಬಿಸಿ ಕೌನ್ಸಿಲ್ ಸಾಧ್ಯವಾಗಿರುವ ಶ್ರೇಯಸ್ಸು ಅಸಲಿಗೆ ರಾಹುಲ್ ಗಾಂಧಿಯವರಿಗೆ ಸಲ್ಲಬೇಕು, ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಳೆದಿದ್ದು ಅವರಿಗೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಯೂರಿಯಾ ಗೊಬ್ಬರ ಅಭಾವ: ಜೆಪಿ ನಡ್ಡಾಗೆ ಸಿಎಂ ಸಿದ್ದರಾಮಯ್ಯ ಪತ್ರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

