AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ರಸ್ತೆಗಳಲ್ಲಿ ಸಿದ್ದರಾಮಯ್ಯ ಫ್ಲೆಕ್ಸ್​ಗಳು, ಭಾಗೀದಾರಿ ನ್ಯಾಯ್ ಸಮ್ಮೇಳನದಲ್ಲಿ ಸಿಎಂ ಮುಖ್ಯ ಭಾಷಣಕಾರ

ದೆಹಲಿ ರಸ್ತೆಗಳಲ್ಲಿ ಸಿದ್ದರಾಮಯ್ಯ ಫ್ಲೆಕ್ಸ್​ಗಳು, ಭಾಗೀದಾರಿ ನ್ಯಾಯ್ ಸಮ್ಮೇಳನದಲ್ಲಿ ಸಿಎಂ ಮುಖ್ಯ ಭಾಷಣಕಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 25, 2025 | 11:31 AM

Share

ಎರಡು ಹಕ್ಕಿಗಳನ್ನು ಹೊಡೆಯುವ ವಿಚಾರಕ್ಕೆ ಬಂದರೆ, ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಸೆಳೆಯುವಲ್ಲಿ ಎಐಸಿಸಿ ಸಫಲವಾದರೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಬೇಕಾಗುತ್ತದೆ. ಬಹಳ ವರ್ಷಗಳಿಂದ ಕುರ್ಚಿಗಾಗಿ ಕಾಯುತ್ತಿರುವ ಡಿಕೆ ಶಿವಕುಮಾರ್ ಹಾದಿ ಸುಗಮವಾಗುತ್ತದೆ. ಆದರೆ ಅದು ಸುಲಭವಲ್ಲ; ಯಾಕೆಂದರೆ ಸಿದ್ದರಾಮಯ್ಯಗೆ ಸಿಎಂ ಗಾದಿಯಿಂದ ಇಳಿಯುವುದು ಬೇಕಿಲ್ಲ ಮತ್ತು ಅವರು ಸರಿಯುವುದೂ ಇಲ್ಲ!

ದೆಹಲಿ, ಜುಲೈ 25: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ರಾಷ್ಟ್ರಮಟ್ಟದ ರಾಜಕಾರಣಕ್ಕೆ ಸೆಳೆದು ಒಂದೇ ಕಲ್ಲಿಂದ ಎರಡು ಹಕ್ಕಿಗಳನ್ನು ಹೊಡೆಯುವ ಪ್ಲ್ಯಾನ್ ಕಾಂಗ್ರೆಸ್ ಹೈಕಮಾಂಡ್ ಮಾಡಿಕೊಂಡಿರುವಂತಿದೆ. ಇವತ್ತು ದೆಹಲಿಯ ತಾಲ್ಕಠೋರಾ ಸ್ಟೇಡಿಯಂನಲ್ಲಿ (Talkatora Stadium,) ನಡೆಯುತ್ತಿರುವ ಭಾಗೀದಾರಿ ನ್ಯಾಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಮುಖ್ಯ ಭಾಷಣಕಾರರಾಗಿ ಭಾಗವಹಿಸುತ್ತಿದ್ದಾರೆ. ಕ್ರೀಡಾಂಗಣಕ್ಕೆ ತೆರಳುವ ರಸ್ತೆಯಲ್ಲಿ ತುಂಬುತುಂಬು ಫ್ಲೆಕ್ಸ್ ಗಳು ಮತ್ತು ಹೆಚ್ಚಿನವುಗಳಲ್ಲಿ ಸಿದ್ದರಾಮಯ್ಯ ಕಾಣಿಸುತ್ತಾರೆ. ಅಹಿಂದ ಸಂಘಟನೆಯನ್ನು ಹುಟ್ಟುಹಾಕಿದ ಸಿದ್ದರಾಮಯ್ಯ ಕರ್ನಾಟಕದ ಮಟ್ಟಿಗೆ ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಅವರ ಈ ಇಮೇಜ್ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಭರವಸೆ ಅಪ್ಪಟ ಸಿದ್ದರಾಮಯ್ಯ ಅಭಿಮಾನಿಗೂ ಇರಲಿಕ್ಕಿಲ್ಲ. ರಾಷ್ಟ್ರದ ಒಬಿಸಿ ಮತದಾರನ್ನು ಸೆಳೆಯುವ ಪ್ರಯತ್ನವನ್ನು ಎಐಸಿಸಿ ಈ ಮೂಲಕ ಮಾಡುತ್ತಿದೆ.

ಇದನ್ನೂ ಓದಿ:  ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ