ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ಮಟ್ಟದಲ್ಲಿ ಏನು ಚರ್ಚೆ ನಡೆಯುತ್ತಿದೆಯೋ ಗೊತ್ತಿಲ್ಲ. ಸಿದ್ದರಾಮಯ್ಯರೇನೋ ದೆಹಲಿಯಲ್ಲಿ ನಾನೇ 5 ವರ್ಷ ಮುಖ್ಯಮಂತ್ರಿ ಅಂತ 2-3 ಸಲ ಹೇಳಿದ್ದರು. ಅದರೆ ಅವರ ಹೇಳಿಕೆಯಲ್ಲಿ ಖಚಿತತೆಗಿಂತ ಡೆಸ್ಪರೇಷನ್ ಹೆಚ್ಚು ವೇದ್ಯವಾಗುತಿತ್ತು. ಹೈಕಮಾಂಡ್ ಮಧ್ಯಸ್ಥಿಕೆಯಲ್ಲಿ ಶಿವಕುಮಾರ್ ಜೊತೆ ಅಧಿಕಾರ ಹಂಚಿಕೊಳ್ಳುವ ಒಪ್ಪಂದವೇರ್ಪಟ್ಟಿದರೆ ಸಿದ್ದರಾಮಯ್ಯ ಅದನ್ನು ಹೇಳುವ ಅವಶ್ಯಕತೆಯಿರಲಿಲ್ಲ.
ಬೆಂಗಳೂರು, ಜುಲೈ 24: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ವಿಶೇಷ ಅದಲ್ಲ; ಅವರಿಬ್ಬರೂ ಜೊತೆಯಾಗಿ ಒಂದೇ ವಿಮಾನದಲ್ಲಿ ದೆಹಲಿಗೆ ಹಾರಿದ್ದು ಗಮನಾರ್ಹ ಸಂಗತಿ. ಇದಕ್ಕೂ ಮೊದಲು ಹಲವಾರು ಸಲ ಅವರು ಜೊತೆಯಾಗಿ ಪ್ರಯಾಣ ಬೆಳೆಸಿದ್ದಾರೆ, ಇದು ಹೊಸತೇನೂ ಅಲ್ಲ, ಆದರೆ ಈ ಸಲ ಪರಿಸ್ಥಿತಿ ಭಿನ್ನವಾಗಿದೆ. ಶಿವಕುಮಾರ್ ಅವರು ಮೈಸೂರಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಭಾಗಿಯಾಗಿರಲಿಲ್ಲ ಮತ್ತು ಅದಾದ ಮೂರು ದಿನಗಳ ಕಾಲ ಸಾರ್ವಜನಿಕ ಬದುಕಿನಿಂದ ದೂರವಿದ್ದರು. ಕಳೆದ ಬಾರಿ ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೋದಾಗ ರಾಹುಲ್ ಗಾಂಧಿ ಭೇಟಿಯಾಗಿರಲಿಲ್ಲ. ಅದು ಉದ್ದೇಶಪೂರ್ವಕವೋ ಅಥವಾ ಅವರು ಬೇರೆಲ್ಲಾದರೂ ಹೋಗಿದ್ದರೋ ಅನ್ನೋದು ಖಚಿತಪಟ್ಟಿಲ್ಲ. ಈ ಸಲ ಭೇಟಿಯಾಗಬಹುದೇ?
ಇದನ್ನೂ ಓದಿ: ದೆಹಲಿಗೆ ಇಂದು ಸಿಎಂ, ಡಿಸಿಎಂ: ಪ್ರವಾಸಕ್ಕೆ ಮುನ್ನಾ ದಿನ ರಹಸ್ಯವಾಗಿ ಹಾಸನಕ್ಕೆ ತೆರಳಿ ಡಿಕೆ ಶಿವಕುಮಾರ್ ಪೂಜೆ!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ