IND vs ENG: ನೋವಿನಲ್ಲೂ ಬ್ಯಾಟಿಂಗ್‌ಗೆ ಬಂದ ಪಂತ್ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ
Rishabh Pant's Miraculous Comeback: ಮ್ಯಾಂಚೆಸ್ಟರ್ ಪಂದ್ಯದಲ್ಲಿ ಗಾಯಗೊಂಡ ರಿಷಭ್ ಪಂತ್ ಅವರು ಆರಂಭದಲ್ಲಿ 6 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಅಚ್ಚರಿಯ ಸಂಗತಿಯೆಂದರೆ, ಎರಡನೇ ದಿನದ ಆಟದಲ್ಲಿ ಅವರು ಮತ್ತೆ ಬ್ಯಾಟಿಂಗ್‌ಗೆ ಬಂದರು. ಇದರಿಂದ ಅಭಿಮಾನಿಗಳು ಮತ್ತು ತಂಡದ ಸದಸ್ಯರು ಆಶ್ಚರ್ಯಚಕಿತರಾದರು. ಪಂತ್ ಅವರ ಧೈರ್ಯ ಮತ್ತು ನಿರ್ಣಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ದಿನದಂದು ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಗಾಯಗೊಂಡಿದ್ದರು. ಇದರಿಂದಾಗಿ ಪಂತ್ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದಿದ್ದರು. ಆ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಮೊದಲು ವರದಿಯಾದಂತೆ ಪಂತ್ ಅವರ ಬಲಗಾಲಿನಲ್ಲಿ ಮುರಿತವಿದ್ದು, ಇದರಿಂದಾಗಿ ಅವರು ಸುಮಾರು 6 ವಾರಗಳ ಕಾಲ ಮೈದಾನದಿಂದ ಹೊರಗುಳಿಯುತ್ತಾರೆ ಎಂದು ಹೇಳಲಾಗುತ್ತಿತ್ತು. ಇದು ಟೀಂ ಇಂಡಿಯಾದ ಉದ್ವಿಗ್ನತೆಯನ್ನು ಹೆಚ್ಚಿಸಿತು. ಆದರೆ ಇದರ ಹೊರತಾಗಿಯೂ ಪಂದ್ಯದ ಎರಡನೇ ದಿನದಂದು ಇಡೀ ಮೈದಾನವೇ ಅಚ್ಚರಿ ಪಡುವಂತ ಘಟನೆ ನಡೆಯಿತು. ಇಂಜುರಿಂದಾಗಿ ಮೈದಾನ ತೊರೆದಿದ್ದ ಪಂತ್, ಬ್ಯಾಟ್ ಹಿಡಿದು ಅಖಾಡಕ್ಕಿಳಿದರು.
ಎರಡನೇ ದಿನದಾಟದ ಮೊದಲ ಸೆಷನ್ನಲ್ಲಿ ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಔಟಾದ ನಂತರ ರಿಷಭ್ ಪಂತ್ ಅಂತಿಮವಾಗಿ ಮತ್ತೆ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದರು. ಪಂತ್ ತನ್ನ ಗಾಯ ಮತ್ತು ನೋವನ್ನು ಮರೆತು ಮೈದಾನಕ್ಕೆ ಬರಲು ನಿರ್ಧರಿಸಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿತು. ಪಂತ್ ನಿಧಾನವಾಗಿ ಮೆಟ್ಟಿಲುಗಳಿಂದ ಇಳಿದು ಬರುತ್ತಿದ್ದನ್ನು ನೋಡಿದ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಹಾಜರಿದ್ದ ಪ್ರತಿಯೊಬ್ಬ ಅಭಿಮಾನಿಯೂ ಆಶ್ಚರ್ಯಚಕಿತರಾದರು. ಎಲ್ಲರೂ ತಮ್ಮ ತಮ್ಮ ಸ್ಥಳಗಳಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟತ್ತ ಪಂತ್ರನ್ನು ಸ್ವಾಗತಿಸಿದರು.

