AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಪ್ರಮೋದ್​ ಸಾವಂತ್​​ ವಿರುದ್ಧ ಡಿಕೆ ಶಿವಕುಮಾರ್​​ ವಾಗ್ದಾಳಿ​

ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸಿಎಂ ಪ್ರಮೋದ್​ ಸಾವಂತ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಡಿಕೆ ಶಿವಕುಮಾರ್​, ಪ್ರಮೋದ್​ ಸಾವಂತ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜೊತೆಗೆ ಮಹದಾಯಿ ಯೋಜನೆ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದ್ದಾರೆ.

ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಪ್ರಮೋದ್​ ಸಾವಂತ್​​ ವಿರುದ್ಧ ಡಿಕೆ ಶಿವಕುಮಾರ್​​ ವಾಗ್ದಾಳಿ​
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೋವಾ ಸಿಎಂ ಪ್ರಮೋದ್​ ಸಾವಂತ್
ಗಂಗಾಧರ​ ಬ. ಸಾಬೋಜಿ
|

Updated on:Jul 24, 2025 | 2:54 PM

Share

ಬೆಂಗಳೂರು, ಜುಲೈ 24: ಮಹದಾಯಿ (Mahadayi) ಯೋಜನೆ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಡಬೇಕು. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ, 28 ಸಂಸದರು ಇದ್ದೇವೆ. ಇಂತಹ ಸಂದರ್ಭದಲ್ಲಿ ಬಾಯಿ ಮುಚ್ಚಿ ಕುಳಿತುಕೊಳ್ಳುವುದು ತಪ್ಪು. ಕರ್ನಾಟಕದ ಪರವಾಗಿ ಗೌರವ ಉಳಿಸಿಕೊಳ್ಳೋಕೆ ಒಂದಾಗಬೇಕು. ಒಂದು ಎಂಪಿಗಾಗಿ ನಾವು ರಾಜ್ಯವನ್ನು ಮಾರಿಕೊಳ್ಳಲು ಸಿದ್ಧವಿಲ್ಲ. ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar)​ ವಾಗ್ದಾಳಿ ಮಾಡಿದ್ದಾರೆ.

ಈ ವಿಚಾರದಲ್ಲಿ ಗೋವಾ ರಾಜಕೀಯ ಮಾಡುತ್ತಿದೆ ಎಂದ ಡಿಕೆ ಶಿವಕುಮಾರ್​​ 

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ಮಹದಾಯಿ ಯೋಜನೆ ವಿಚಾರವಾಗಿ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಿಗೆ ಮನವಿ ಮಾಡುತ್ತೇವೆ. ಫಾರೆಸ್ಟ್ ಕ್ಲಿಯರನ್ಸ್​ ಬಗ್ಗೆ ಕೇಂದ್ರ ಸಚಿವರ ಜೊತೆ ಮಾತಾಡುವೆ. ಈ ವಿಚಾರದಲ್ಲಿ ಕೇಂದ್ರ ಜಲಶಕ್ತಿ, ಅರಣ್ಯ ಸಚಿವರು ರಾಜಕೀಯ ಮಾಡಲ್ಲ. ಈ ವಿಚಾರದಲ್ಲಿ ಗೋವಾ ರಾಜಕೀಯ ಮಾಡುತ್ತಿದೆ ಎಂದರು.

ಗೋವಾ ಸಿಎಂ ಪ್ರಮೋದ್​ ಸಾವಂತ್​​ ವಿರುದ್ಧ ಡಿಕೆ ಶಿವಕುಮಾರ್​​ ವಾಗ್ದಾಳಿ

ಇನ್ನು ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸಿಎಂ ಪ್ರಮೋದ್​ ಸಾವಂತ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್​, ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಒಕ್ಕೂಟ ವ್ಯವಸ್ಥೆ ಬಗ್ಗೆ ಅರಿವು ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಗೋವಾ ಸಿಎಂ ಸಾವಂತ್ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಿದೆ: ಡಿಕೆ ಶಿವಕುಮಾರ್

ಈಗಾಗಲೇ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಟೆಂಡರ್ ಕರೆದಿದ್ದೇವೆ. ಯೋಜನೆ ಸಂಬಂಧ ನಮಗೆ ಫಾರೆಸ್ಟ್ ಕ್ಲಿಯರೆನ್ಸ್ ಬೇಕಾಗಿದೆ. ಅವರು ನೋಟಿಸ್​ ಆದರೂ ನೀಡಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ನಾವು ಸುಪ್ರೀಂಕೋರ್ಟ್​ನಲ್ಲಿ ಹಾಕಿದ ಅರ್ಜಿ ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ.

ಸಿಎಂ ಪ್ರಮೋದ್ ಸಾವಂತ್​ ಹೇಳಿದ್ದೇನು?

ಮಹದಾಯಿ ಯೋಜನೆ ಸಂಬಂಧ ಕರ್ನಾಟಕ ಸರ್ಕಾರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್​ ಹಾಕುತ್ತೇವೆ ಎಂದು ಗೋವಾ ವಿಧಾನಸಭೆಯಲ್ಲಿ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ. ಕರ್ನಾಟಕ ವ್ಯಾಪ್ತಿಯಲ್ಲಿ ಯೋಜನೆಗೆ ಸಂಬಂಧಿಸಿದ ಕಾರ್ಯ ನಡೆದಿದೆ. ನಾವು ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ಕಾರ್ಯವನ್ನು ತಡೆಯಲಾಗಲ್ಲ. ಯೋಜನೆಯ ಕಾರ್ಯಕ್ಕೆ ಕೇಂದ್ರ ಅರಣ್ಯ, ಪರಿಸರ ಇಲಾಖೆ ನೀಡಲ್ಲ. ಹೀಗಾಗಿ ಕರ್ನಾಟಕಕ್ಕೆ ಯೋಜನೆಯ ಕಾರ್ಯಕ್ಕೆ ಅವಕಾಶ ಸಿಗುವುದಿಲ್ಲ ಎಂದಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:52 pm, Thu, 24 July 25

‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು