‘ಅವರನ್ನು ಕಳಿಸು’; ವೀರಪ್ಪನ್ ಬಳಿ ಅಂಗಲಾಚಿದ್ದ ರಾಜ್ಕುಮಾರ್
ರಾಜ್ಕುಮಾರ್ ಅವರು ಈ ಮೊದಲು ವೀರಪ್ಪನ್ನ ಕಿಡ್ನ್ಯಾಪ್ ಮಾಡಿದ್ದರು. ಅವರ ಜೊತೆ ಹಲವರು ಬಂಧನಕ್ಕೆ ಒಳಗಾಗಿದ್ದರು. ಈ ವೇಳೆ ರಾಜ್ಕುಮಾರ್ ಅವರು ವೀರಪ್ಪನ್ ಬಳಿ ಒಂದು ದೊಡ್ಡ ಮನವಿ ಮಾಡಿಕೊಂಡಿದ್ದರು. ಆ ಮನವಿ ಏನು ಎಂಬುದನ್ನು ವಿವರಿಸಿದ್ದಾರೆ ಗೋವಿಂದ ರಾಜು. ಆ ಬಗ್ಗೆ ಇಲ್ಲಿದೆ ವಿವರ.
2000ನೇ ಇಸ್ವಿಯಲ್ಲಿ ರಾಜ್ ಕುಮಾರ್ (Rajkumar), ನಾಗಪ್ಪ, ಎಸ್ಎ ಗೋವಿಂದರಾಜು, ನಾಗೇಶ್ ಅವರುಗಳನ್ನು ಅಪಹರಿಸಿ ಕರೆದುಕೊಂಡು ಹೋಗಲಾಯಿತು. ಅಂದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ರಾಜ್ಕುಮಾರ್ ಅಳಿಯ ಗೋವಿಂದರಾಜು ಅವರು ವಿವರಿಸಿದ್ದಾರೆ. ‘ನನಗೆ ವಯಸ್ಸಾಗಿದೆ ಸರಿ. ಆದರೆ, ಇವರೆಲ್ಲ ಬದುಕಿ ಬಾಳಬೇಕಾಗಿರುವವರು. ಅವರನ್ನು ಬಿಟ್ಟುಬಿಡಿ ಎಂದು ರಾಜ್ಕುಮಾರ್ ಕೇಳಿಕೊಳ್ಳುತ್ತಲೇ ಇದ್ದರು’ ಎಂದಿದ್ದಾರೆ ಗೋವಿಂದರಾಜು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.