Jaggesh Controversy: ತಪ್ಪೊ, ಸರಿಯೋ ಜಗ್ಗೇಶ್ ಇರೋದೆ ಹೀಗೆ..!

Jaggesh Tweet: ಜಗ್ಗೇಶ್​​ರವರ ಹೇಳಿಕೆಯನ್ನ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಖಂಡಿಸಿದ್ದರು. ಸದ್ಯ ಪ್ಯಾನ್ ಇಂಡಿಯಾದಲ್ಲಿ ಹವಾ ಮಾಡುತ್ತಿರುವ ನಟ ಎಂದರೆ ಅದು ರಾಕಿಭಾಯ್. ಹೀಗಾಗಿ ಯಶ್ ಅಭಿಮಾನಿಗಳು ಜಗ್ಗೇಶ್ ಹೇಳಿಕೆ ವಿರುದ್ಧ ಮುಗಿಬಿದ್ದಿದ್ದರು. Jaggesh Controversy

  • TV9 Web Team
  • Published On - 12:27 PM, 23 Feb 2021
Jaggesh Controversy: ತಪ್ಪೊ, ಸರಿಯೋ ಜಗ್ಗೇಶ್ ಇರೋದೆ ಹೀಗೆ..!
ನಟ ಜಗ್ಗೇಶ್

ಬೆಂಗಳೂರು: ಸ್ಯಾಂಡಲ್‌ವುಡ್ ಕಾಮಿಡಿ ಕಿಂಗ್, ಹಿರಿಯ ನಟ ಜಗ್ಗೇಶ್ ತಾವಾಯ್ತು, ತಮ್ಮ ಸಿನಿಮಾಗಳಾಯ್ತು ಅಂತಾ ಇರುತ್ತಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಟ್ವೀಟ್ ಮಾಡಿ ವಿವಾದವನ್ನ ಮೈ ಮೇಲೆ ಎಳೆದುಕೊಂಡು ರಾಡಿ ಮಾಡಿಕೊಳ್ಳುತ್ತಾರೆ ಅಂತಾ ಗಾಂಧಿನಗರದವರು ಹೇಳುವ ಮಾತು. ಈ ಹಿಂದೆ ನಟಿ ರಮ್ಯಾ ಬಗ್ಗೆ ಟ್ವಿಟ್ ಮಾಡಿ ಕಾಂಟ್ರೋವರ್ಸಿಗೆ ಗುರಿಯಾಗಿದ್ದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಆಗಿದ್ದ ರಮ್ಯಾ, ಮೋದಿ ಆಳ್ವಿಕೆ ಬಗ್ಗೆ ಟಾಂಟ್ ಮಾಡುತ್ತಿದ್ದರು. ಮೋಹಕ ತಾರೆ ರಾಜಕೀಯದ ಬಗ್ಗೆ ಟ್ವಿಟ್ ಮಾಡಿದ್ದೇ ತಡ, ಬಿಜೆಪಿಯಲ್ಲಿರುವ ಜಗ್ಗಣ್ಣ ಅದರ ವಿರುದ್ಧ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದರು. ಹೀಗೆ ಇವರಿಬ್ಬರ ನಡುವೆ ಸದಾ ಒಂದಲ್ಲ ಒಂದು ವಾಕ್ಸಮರ ನಡೆಯುತ್ತಲೇ ಇರುತ್ತಿತ್ತು.

ರಮ್ಯಾ ಮಾನಸಿಕ ಅಸ್ವಸ್ಥೆ. ಎಸ್ಕೆಪ್ ಸುಂದರಿ. ಶ್ರಮವಿಲ್ಲದೇ ಪಲ್ಲಂಗ ಏರಿದೋರು ಅಂತೆಲ್ಲಾ ವಿವಾದಾತ್ಮಕ ಟ್ವಿಟ್ ಗಳನ್ನ ಮಾಡಿ ಎಲ್ಲರ ಕೆಂಗಣ್ಣಿಗೆ ಜಗ್ಗೇಶ್ ಗುರಿಯಾಗಿದ್ದರು. ನೀರ್ ದೋಸೆ ಸಿನಿಮಾದಿಂದ ಮೋಹಕ ತಾರೆ ಹಿಂದೆ ಸರಿದರೋ ಅಲ್ಲಿಂದ ಜಗ್ಗೇಶ್ ರಮ್ಯಾ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳುತ್ತಾರೆ. ರಮ್ಯಾ ಟ್ವೀಟ್ ಮಾಡುವುದೇ ತಡ ಜಗ್ಗೇಶ್ ತಮ್ಮ ಪ್ರತಿ ಟ್ವಿಟ್ಟಾಸ್ತ್ರವನ್ನ ಬಿಡುತ್ತಿದ್ದರು. ಹೀಗೆ ಇವರಿಬ್ಬರ ನಡುವೆ ಟ್ವೀಟ್ ವಾರ್ ನಡೆಯುತ್ತಲೇ ಇರುತ್ತಿತ್ತು.

ಯಶ್ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದ ಜಗ್ಗೇಶ್
ಇದಾದ ನಂತರ ಜಗ್ಗೇಶ್ ಮಾಡಿಕೊಂಡ ರಗಳೆ ಯಾವುದೆಂದರೆ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾಡಿದ ಟ್ವೀಟ್ ಸ್ಯಾಂಡಲ್‌ವುಡ್​ನಲ್ಲಿ ಕಿಚ್ಚು ಹೊತ್ತಿಸಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ಧಾರ ಮಾಡುವುದಿಲ್ಲ. ಪ್ಯಾನ್ ಇಂಡಿಯಾದಿಂದ ನಮ್ಮ ಕನ್ನಡಿಗರಿಗೆ ಕೆಲಸ ಇಲ್ಲ. ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹಾಗಿದೆ. ಇದರಿಂದ ನಮ್ಮ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ ಎಂದು ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸಿದ್ದರು.

ಜಗ್ಗೇಶ್​​ರವರ ಈ ಹೇಳಿಕೆಯನ್ನ ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಖಂಡಿಸಿದ್ದರು. ಸದ್ಯ ಪ್ಯಾನ್ ಇಂಡಿಯಾದಲ್ಲಿ ಹವಾ ಮಾಡುತ್ತಿರುವ ನಟ ಎಂದರೆ ಅದು ರಾಕಿಭಾಯ್. ಹೀಗಾಗಿ ಯಶ್ ಅಭಿಮಾನಿಗಳು ಜಗ್ಗೇಶ್ ಹೇಳಿಕೆ ವಿರುದ್ಧ ಮುಗಿಬಿದ್ದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವ ಮೂಲಕ ಕೀಡಿಕಾರಿದ್ದರು. ಈ ಬೆಳವಣಿಗೆ ಕಂಡು ಜಗ್ಗಣ್ಣ ಸರಣಿ ಟ್ವಿಟ್​ಗಳ ಮೂಲಕ ತಮ್ಮ ಅಸಮಾಧಾನವನ್ನ ಹೊರಹಾಕಿ ಕೆಲವರ ಟ್ವೀಟ್​ಗೆ  ಟಾಂಗ್ ನೀಡಿದ್ದರು.

ಇದೀಗ ದರ್ಶನ್ ಅಭಿಮಾನಿಗಳೂ ಜಗ್ಗೇಶ್ ವಿರುದ್ಧ ಕಿಡಿಕಾರಿದ್ದಾರೆ. ಮೊಬೈಲ್ ಸಂಭಾಷಣೆಯಲ್ಲಿ ದಚ್ಚು ಫ್ಯಾನ್ಸ್ ಬಗ್ಗೆ ಅವಹೇಳನಕಾರಿ ಆಗಿ ಮಾತನಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಜಗ್ಗೇಶ್​ಗೆ ಧಿಕ್ಕಾರ ಕೂಗಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ತೋತಾಪುರಿ ಚಿತ್ರೀಕರಣದ ಸೆಟ್​ಗೆ ಹೋಗಿ ಜಗ್ಗೇಶ್​ಗೆ ಕ್ಷಮೆ ಕೇಳಬೇಕೆಂದು ಅಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ಆ ಧ್ವನಿ ನಂದಲ್ಲ. ನಾನು ಹೇಳಿರುವುದು ವೆಬ್​ಸೈಟ್​  ಪ್ರತಿನಿಧಿ ದರ್ಶನ್ ಬಗ್ಗೆ ಎಂದು ಸಮಜಾಯಿಸಿ ನೀಡಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ಸದ್ಯ ಕ್ಷಮೆ ಕೇಳುವ ಮೂಲಕ ವಿವಾದ ತಣ್ಣಗಾಗಿದೆ. ತಪ್ಪೊ, ಸರಿಯೋ, ಜಗ್ಗೇಶ್ ಇರೋದೆ ಹೀಗೆ.!

 

 

ಇದನ್ನೂ ಓದಿ

Jaggesh: ದರ್ಶನ್ ಅಭಿಮಾನಿಗಳ ವರ್ತನೆಗೆ ಬೇಸತ್ತು ಮುಂದಿನ ನಡೆ ತಿಳಿಸಿದ ಹಿರಿಯ ನಟ ಜಗ್ಗೇಶ್

Jaggesh – Darshan: ಜಗ್ಗೇಶ್ ಚಿತ್ರೀಕರಣದ ಸ್ಥಳಕ್ಕೆ ತೆರಳಿ ದರ್ಶನ್ ಫ್ಯಾನ್ಸ್ ಮುತ್ತಿಗೆ; ಸ್ಯಾಂಡಲ್​ವುಡ್​ನಲ್ಲಿ ಶುರುವಾಯಿತು ಫ್ಯಾನ್ಸ್ ವಾರ್?