ಬೆಳಗಾವಿಯಲ್ಲಿ ಗೃಹಿಣಿಯ ಹತ್ಯೆ, ಕೊಲೆಗಡುಕರ ಬಗ್ಗೆ ಸುಳಿವಿದೆ ಎನ್ನುತ್ತಾರೆ ಡಿಸಿಪಿ ನಿರಂಜನ ರಾಜೇ ಅರಸ್
ಅಂಜನಾ ಅವರ ಕೊಲೆ ನಗರದ ಗಣೇಶಪುರದಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಅವರ ಪತಿ ಸಾಯಂಕಾಲ 7.30 ಕ್ಕೆ ಮನೆಗೆ ಬಂದಾಗ ಆಕೆ ಅಡುಗೆ ಮನೇಲಿ ಬಿದ್ದಿರೋದನ್ನು ನೋಡುತ್ತಾರೆ, ಸುಮಾರು 11 ಗಂಟೆಗೆ ಅವರು ಠಾಣೆಗೆ ಬಂದು ದೂರು ಕೊಟ್ಟ ಬಳಿಕ ಪೊಲೀಸರು ಇಲ್ಲಿಗೆ ಬಂದಿದ್ದಾರೆ, ಹಂತಕರ ಬಗ್ಗೆ ಸುಳಿವಿದೆ ಎಂದು ಪೊಲೀಸ್ ಅಧಿಕಾರಿ ನಿರಂಜನ್ ಹೇಳುತ್ತಾರೆ.
ಬೆಳಗಾವಿ, ಏಪ್ರಿಲ್ 22: ಬೆಳಗಾವಿಯಲ್ಲೊಬ್ಬ ಮಹಿಳೆಯ ಕೊಲೆ ನಡೆದಿದ್ದು ಹಂತಕರು ಅವರ ಮೈಮೇಲಿದ್ದ ಚಿನ್ನಾಭರಣಗಳನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ನಗರದ ಡಿಸಿಪಿ ನಿರಂಜನ ರಾಜೇ ಅರಸ್ (DCP Niranjan Raje Urs) ಹೇಳುತ್ತಾರೆ. ಘಟನೆ ನಡೆದ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅರಸ್, ಕೊಲೆಯಾಗಿರುವ ಮಹಿಳೆ ಹೆಸರು 53-ವರ್ಷದ ಅಂಜನಾ ದಡ್ಡೀಕರ್ ಅಗಿದ್ದು ಅವರು ಗೃಹಿಣಿಯಾಗಿದ್ದರು ಎನ್ನುತ್ತಾರೆ. ಅಂಜನಾ ಅವರನ್ನು ಕತ್ತು ಹಿಸುಕಿ ಸಾಯಿಸಲಾಗಿದೆ, ಅವರ ಮಾಂಗಲ್ಯ ಸರ, ಕಿವಿಯೋಲೆ, ಕೈ ಬೆರಳುಗಳಲ್ಲಿದ್ದ ಉಂಗುರಗಳ ಕಳ್ಳತನವಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಜೈಪುರದ ಮಹಿಳೆಯಿಂದ ಪತಿಯ ಕೊಲೆ; ಬೈಕ್‌ನಲ್ಲಿ ಶವ ಸಾಗಿಸುವ ವಿಡಿಯೋ ವೈರಲ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos