ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವ ಶಿವಮೊಗ್ಗದ ಮಂಜುನಾಥ್ ಅವರ ತಾಯಿಗೆ ವಿಷಯವಿನ್ನೂ ಗೊತ್ತಿಲ್ಲ
ಪಲ್ಲವಿ ಅವರೊಂದಿಗೆ ಮಹೇಶ್ ಹಾಗೂ ಇತರರು ಫೋನಲ್ಲಿ ಮಾತಾಡಿದ್ದಾರೆ. ಅವರು ತೀವ್ರ ಸ್ವರೂಪದ ಆಘಾತಕ್ಕೊಳಗಾಗಿದ್ದರೂ ಅಧೀರರಾಗಿಲ್ಲ, ಪತಿಯ ದೇಹವನ್ನು ತರುವ ಬಗ್ಗೆ ಮಾತಾಡಿದ್ದಾರಂತೆ. ಏತನ್ಮಧ್ಯೆ, ಮಹೇಶ್ ಮತ್ತು ಮ್ಯಾಮ್ಕೋಸ್ ಸಂಸ್ಥೆಯ ಬೇರೆ ಉದ್ಯೋಗಿಗಳು ಶಿವಮೊಗ್ಗ ಜಿಲ್ಲಾಧಿಕಾರಿ, ಸಂಸದರೊಂದಿಗೆ ಮಾತಾಡಿ ಮಂಜುನಾಥ್ ಅವರ ದೇಹವನ್ನು ತರುವ ಏರ್ಪಾಟು ಮಾಡಲು ವಿನಂತಿಸಿಕೊಂಡಿದ್ದಾರೆ. ಈಗಾಗಲೇ ಗೃಹ ಸಚಿವ ಅಮಿತ್ ಶಾ ಅವರು ಸ್ಥಳಕ್ಕೆ ಧಾವಿಸಿರುವರೆಂದು ಮಹೇಶ್ ಹೇಳಿದರು.
ಶಿವಮೊಗ್ಗ, ಏಪ್ರಿಲ್ 22: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಭೀಕರ ದಾಳಿಗೆ ಕನ್ನಡಿಗ ಮಂಜುನಾಥ್ (Kannadiga Manjunath) ಬಲಿಯಾಗಿದ್ದಾರೆ. ಏಪ್ರಿ;ಲ್ 19ರಂದು ಇವರು ತಮ್ಮ ಪತ್ನಿ ಪಲ್ಲವಿ ಮತ್ತು ಮಗನೊಂದಿಗೆ ಕಾಶ್ಮೀರ ಪ್ರವಾಸ ತೆರಳಿದ್ದರು ಮತ್ತು 24 ರಂದು ಶಿವಮೊಗ್ಗಗೆ ವಾಪಸ್ಸಾಗುವವರಿದ್ದರು. ಪಲ್ಲವಿ ಅವರು ಮ್ಯಾನೇಜರ್ ಆಗಿ ಕೆಲಸ ಮಾಡುವ ಕೆಲಸ ಮಾಡುವ ಮ್ಯಾಮ್ಕೋಸ್ (ಮಲ್ನಾಡ್ ಅಡಕೆ ಮಾರ್ಕೆಟಿಂಗ್ ಕೋ-ಆಪರೇಟಿವ್ ಸೊಸೈಟಿ ಲಿ.) ಸಂಸ್ಥೆಯ ಉಪಾಧ್ಯಕ್ಷರಾಗಿರುವ ಮಹೇಶ್ ಅವರು ಹೇಳುವ ಪ್ರಕಾರ ಮಂಜುನಾಥ್ ಅವರ ತಾಯಿಗೆ ಮಗ ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವ ಸಂಗತಿ ಇನ್ನೂ ಗೊತ್ತಿಲ್ಲ ಮತ್ತು ಹೇಳುವ ಧೈರ್ಯ ಕೂಡ ಇವರ್ಯಾರಿಗೂ ಆಗಿಲ್ಲ.
ಇದನ್ನೂ ಓದಿ: Pahelgam Attack: ಪಹಲ್ಗಾಮ್ನಲ್ಲಿ ದಾಳಿ ನಡೆಸಿದವರನ್ನು ಸುಮ್ಮನೆ ಬಿಡೋ ಮಾತೇ ಇಲ್ಲ; ಅಮಿತ್ ಶಾ ಖಡಕ್ ಎಚ್ಚರಿಕೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ