AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು; ಕರ್ನಾಟಕವೇ ನಂಬರ್​​ 1

ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು; ಕರ್ನಾಟಕವೇ ನಂಬರ್​​ 1

ಹರೀಶ್ ಜಿ.ಆರ್​.
| Edited By: |

Updated on: Feb 20, 2026 | 7:02 AM

Share

ದೇಶದ ಹೋಟೆಲ್ ಉದ್ಯಮದಲ್ಲಿ 70 ಸಾವಿರ ಕೋಟಿ ರೂ.ಗೂ ಹೆಚ್ಚು ತೆರಿಗೆ ವಂಚನೆ ಬೆಳಕಿಗೆ ಬಂದಿದೆ. 2019-2026ರ ಬಿಲ್ಲಿಂಗ್ ಡೇಟಾ ವಿಶ್ಲೇಷಣೆಯಲ್ಲಿ ಅಕ್ರಮ ವಹಿವಾಟು ಪತ್ತೆಯಾಗಿದ್ದು, ಐಟಿ ಇಲಾಖೆ ಎಐ ತಂತ್ರಜ್ಞಾನ ಬಳಸಿ ಇದನ್ನು ಬಯಲಿಗೆಳೆದಿದೆ. ತೆರಿಗೆ ವಂಚನೆಯಲ್ಲಿ ಕರ್ನಾಟಕ ರಾಜ್ಯ ಅಗ್ರಸ್ಥಾನದಲ್ಲಿದೆ.

ಬೆಂಗಳೂರು, ಫೆಬ್ರವರಿ 20: ದೇಶಾದ್ಯಂತ ಹೋಟೆಲ್ ಉದ್ಯಮದಿಂದ ಬರೋಬ್ಬರಿ 70 ಸಾವಿರ ಕೋಟಿ ರೂಪಾಯಿಗಳ ಭಾರಿ ತೆರಿಗೆ ವಂಚನೆ ಬಹಿರಂಗವಾಗಿದೆ. ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿದ ದಾಳಿಗಳಲ್ಲಿ ಈ ಬೃಹತ್ ಅಕ್ರಮ ವಹಿವಾಟು ಪತ್ತೆಯಾಗಿದೆ. ಹೋಟೆಲ್ ಮಾಲೀಕರು 2019ರಿಂದ 2026ರವರೆಗಿನ ಬಿಲ್ಲಿಂಗ್ ಡೇಟಾದಲ್ಲಿ ಗ್ರಾಹಕರಿಂದ ಪಡೆದ ಹಣದ ವಿವರಗಳನ್ನು ಅಳಿಸಿಹಾಕಿ, ಕಡಿಮೆ ಆದಾಯವನ್ನು ತೋರಿಸುವ ಮೂಲಕ ತೆರಿಗೆ ತಪ್ಪಿಸುತ್ತಿದ್ದರು. ಐಟಿ ಅಧಿಕಾರಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಫೋರೆನ್ಸಿಕ್ ತಪಾಸಣೆಯ ಮೂಲಕ ಈ ವಂಚನೆಯನ್ನು ಪತ್ತೆಹಚ್ಚಿದ್ದಾರೆ. ಹೈದರಾಬಾದ್‌ನ ಐಟಿ ಡಿಜಿಟಲ್ ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆಯಿಂದ ಈ ಸ್ಫೋಟಕ ಮಾಹಿತಿ ಬಯಲಾಗಿದೆ. ತೆರಿಗೆ ವಂಚನೆ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದು, 2,000 ಕೋಟಿಗೂ ಹೆಚ್ಚು ಮೌಲ್ಯದ ಡೇಟಾ ಇಲ್ಲಿ ಡಿಲೀಟ್ ಮಾಡಲಾಗಿದೆ. ತೆಲಂಗಾಣದಲ್ಲಿ 1,500 ಕೋಟಿ ರೂ. ಮತ್ತು ತಮಿಳುನಾಡಿನಲ್ಲಿ 1,200 ಕೋಟಿ ರೂ. ಮೌಲ್ಯದ ಡೇಟಾ ಅಳಿಸಲಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲೂ ಭಾರಿ ವಂಚನೆ ನಡೆದಿದೆ. ದೇಶದ ಒಂದು ಲಕ್ಷಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಈ ರೀತಿಯ ಬಿಲ್ಲಿಂಗ್ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಹರೀಶ್ ಜಿ.ಆರ್​.
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More