AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್ ಕುಮಾರ್ ಸಿನಿಮಾಗೆ ನೀರಸ ಕಲೆಕ್ಷನ್; ಮತ್ತೆ ಆಸ್ತಿ ಮಾರಿಕೊಂಡ ನಟ

ಒಂದೆಡೆ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಗೆಲ್ಲುತ್ತಿಲ್ಲ, ಇನ್ನೊಂದೆಡೆ ಅವರು ಆಸ್ತಿ ಮಾರಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಇರುವ ಆಸ್ತಿಯನ್ನು ಅವರು 8 ಕೋಟಿ ರೂಪಾಯಿಗೆ ಸೇಲ್ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ‘ಕೇಸರಿ: ಚಾಪ್ಟರ್ 2’ ಸಿನಿಮಾ ಬಿಡುಗಡೆ ಆದ ಬಳಿಕ ಅವರು ಆಸ್ತಿ ಮಾರಿದ್ದಾರೆ.

ಅಕ್ಷಯ್ ಕುಮಾರ್ ಸಿನಿಮಾಗೆ ನೀರಸ ಕಲೆಕ್ಷನ್; ಮತ್ತೆ ಆಸ್ತಿ ಮಾರಿಕೊಂಡ ನಟ
Akshay Kumar
ಮದನ್​ ಕುಮಾರ್​
|

Updated on: Apr 22, 2025 | 8:49 PM

Share

ನಟ ಅಕ್ಷಯ್ ಕುಮಾರ್ (Akshay Kumar) ಅವರ ಸಿನಿಮಾಗಳು ಸಾಲು ಸಾಲಾಗಿ ಸೋಲುತ್ತಿವೆ. ನಿರೀಕ್ಷಿತ ಮಟ್ಟದ ಗೆಲುವು ಅವರಿಗೆ ಸಿಗುತ್ತಲೇ ಇಲ್ಲ. ಅವರು ಬಹಳ ಪ್ರೀತಿಯಿಂದ ಮಾಡಿದ್ದ ‘ಕೇಸರಿ: ಚಾಪ್ಟರ್ 2’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ ಭಾರಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಸುಳ್ಳಾಗಿದೆ. ಪಾಸಿಟಿವ್ ವಿಮರ್ಶೆ ಸಿಕ್ಕರೂ ಕೂಡ ಹೆಚ್ಚು ಹಣ ಗಳಿಸಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ‘ಕೇಸರಿ: ಚಾಪ್ಟರ್ 2’ (Kesari: Chapter 2) ಸಿನಿಮಾ ಸಾಧಾರಣ ಕಲೆಕ್ಷನ್ ಮಾಡಿದ ಬೆನ್ನಲ್ಲೇ ಅಕ್ಷಯ್ ಕುಮಾರ್ ಅವರು ಆಸ್ತಿ (Akshay Kumar Property) ಮಾರಿಕೊಂಡಿರುವ ಬಗ್ಗೆ ಸುದ್ದಿ ಕೇಳಿಬಂದಿದೆ.

ಮುಂಬೈನ ಹಲವು ಕಡೆಗಳಲ್ಲಿ ಅಕ್ಷಯ್ ಕುಮಾರ್ ಅವರು ಆಸ್ತಿ ಹೊಂದಿದ್ದಾರೆ. ಸಾಕಷ್ಟು ಅಪಾರ್ಟ್​ಮೆಂಟ್​ಗಳು ಅವರ ಹೆಸರಲ್ಲಿ ಇವೆ. ಈ ಮೊದಲು ಅವರು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದರು. ಈಗ ಅವರು ಒಂದು ಆಫೀಸ್ ಯುನಿಟ್ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. 8 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಹಾಗಂತ ಅವರಿಗೆ ನಷ್ಟ ಆಗಿಲ್ಲ. ಈ ವ್ಯವಹಾರದಿಂದ ಲಾಭ ಕಂಡಿದ್ದಾರೆ.

ಈ ಆಸ್ತಿಯನ್ನು ಅಕ್ಷಯ್ ಕುಮಾರ್ ಅವರು 2020ರಲ್ಲಿ ಖರೀದಿ ಮಾಡಿದ್ದರು. ಆಗ ಅವರು 4.85 ಕೋಟಿ ರೂಪಾಯಿಗೆ ಖರೀದಿಸಿದ್ದರು. ಈಗ ಅದೇ ಪ್ರಾಪರ್ಟಿಯನ್ನು 8 ಕೋಟಿ ರೂಪಾಯಿಗೆ ಮಾರಾಟ ಮಾಡಿ, ಶೇಕಡ 65ರಷ್ಟು ಲಾಭ ಕಂಡಿದ್ದಾರೆ. ಆದರೂ ಕೂಡ ಅವರಿಗೆ ಆಸ್ತಿ ಮಾರುವ ಅನಿವಾರ್ಯತೆ ಬಂದಿರುವ ಬಗ್ಗೆ ಅಭಿಮಾನಿಗಳಿಗೆ ಬೇಸರ ಆಗಿದೆ.

ಇದನ್ನೂ ಓದಿ
Image
80 ಕೋಟಿ ರೂಪಾಯಿಗೆ ಅಪಾರ್ಟ್​ಮೆಂಟ್ ಮಾರಿಕೊಂಡ ಅಕ್ಷಯ್ ಕುಮಾರ್
Image
ಮೋದಿ ಫಿಟ್ ಇಂಡಿಯಾ ಕರೆಗೆ ಅಕ್ಷಯ್ ಕುಮಾರ್, ವೈದ್ಯರು,ಕ್ರೀಡಾಪಟುಗಳ ಬೆಂಬಲ
Image
ರಾಜಮೌಳಿ ಅಂಥ ನಿರ್ದೇಶಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರಾ ಅಕ್ಷಯ್ ಕುಮಾರ್?
Image
57 ವರ್ಷಗಳಲ್ಲಿ ಅಕ್ಷಯ್ ಕುಮಾರ್ ಸಂಪಾದಿಸಿದ ಆಸ್ತಿ ಎಷ್ಟು?

ಇದನ್ನೂ ಓದಿ: ರೇಟಿಂಗ್ ಸಿಕ್ಕರೂ ಅಕ್ಷಯ್ ಕುಮಾರ್ ಚಿತ್ರಕ್ಕಿಲ್ಲ ಗೆಲುವು; ಕುಸಿಯಿತು ಮಾರುಕಟ್ಟೆ

ಕಳೆದ ಕೆಲವು ತಿಂಗಳುಗಳಿಂದ ಅಕ್ಷಯ್ ಕುಮಾರ್ ಅವರು ಮುಂಬೈನಲ್ಲಿ ಅಂದಾಜು 100 ಕೋಟಿ ರೂಪಾಯಿ ಬೆಲೆ ಬಾಳುವಷ್ಟು ಆಸ್ತಿಯನ್ನು ಮಾರಿಕೊಂಡಿದ್ದಾರೆ. ಅವರ ಸಿನಿಮಾಗಳು ಸೋಲುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

‘ಕೇಸರಿ: ಚಾಪ್ಟರ್ 2’ ಸಿನಿಮಾ ಏಪ್ರಿಲ್ 18ರಂದು ಬಿಡುಗಡೆ ಆಯಿತು. ಐತಿಹಾಸಿಕ ಕಥಾಹಂದರ ಹೊಂದಿದ್ದ ಆ ಚಿತ್ರ ಮೊದಲ ದಿನ 7.84 ಕೋಟಿ ರೂಪಾಯಿ ಗಳಿಸಿತು. 2ನೇ ದಿನ 10.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಮೂರನೇ ದಿನ 11.70 ಕೋಟಿ ರೂಪಾಯಿ ಕಮಾಯಿ ಆಯಿತು. ನಾಲ್ಕನೇ ದಿನ 4.50 ಕೋಟಿ ರೂಪಾಯಿಗೆ ಕಲೆಕ್ಷನ್ ಕುಸಿದಿದೆ. ಈವರೆಗೂ ಆಗಿರುವುದು 34.12 ಕೋಟಿ ರೂಪಾಯಿ ಮಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.