ರೋಹಿತ್ ಶೆಟ್ಟಿ-ಶಾರುಖ್ ಮಧ್ಯೆ ಯಾವುದೂ ಸರಿ ಇಲ್ಲ? ನಿರ್ದೇಶಕನ ಸ್ಪಷ್ಟನೆ
ರೋಹಿತ್ ಶೆಟ್ಟಿ ಮತ್ತು ಶಾರುಖ್ ಖಾನ್ ಅವರ ನಡುವಿನ ಜಗಳದ ಸುದ್ದಿಗಳಿಗೆ ರೋಹಿತ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. 2015ರ ದಿಲ್ವಾಲೆ ಚಿತ್ರದ ಬಾಕ್ಸ್ ಆಫೀಸ್ ಸೋಲು ಇಬ್ಬರ ನಡುವಿನ ಕಿರಿಕ್‌ಗೆ ಕಾರಣವಲ್ಲ ಎಂದು ಹೇಳಿದ್ದಾರೆ. ಅವರ ನಡುವೆ ಗೌರವದ ಸಂಬಂಧವಿದೆ ಎಂದೂ ಹೇಳಿದ್ದಾರೆ. ದಿಲ್ವಾಲೆ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿತ್ತು ಎಂದೂ ತಿಳಿಸಿದ್ದಾರೆ.

‘ಬಾಲಿವುಡ್ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ (Rohit Shetty) ಹಾಗೂ ಶಾರುಖ್ ಖಾನ್ ಮಧ್ಯೆ ಯಾವುದೂ ಸರಿ ಇಲ್ಲ’- ಹೀಗೊಂದು ಸುದ್ದಿ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಇದಕ್ಕೆ ರೋಹಿತ್ ಶೆಟ್ಟಿ ಅವರು ಈಗ ಸ್ಪಷ್ಟನೆ ನೀಡಿದ್ದಾರೆ. 2015ರಲ್ಲಿ ರಿಲೀಸ್ ಆದ ‘ದಿಲ್ವಾಲೆ’ ಸಿನಿಮಾದ ಬಾಕ್ಸ್ ಆಫೀಸ್ ಹೀನಾಯ ಸೋಲು ಇವರ ಮಧ್ಯೆ ಕಿರಿಕ್ ಆಗಲು ಪ್ರಮುಖ ಕಾರಣ ಎಂದು ಹೇಳಲಾಗಿತ್ತು. ಆದರೆ ಆ ರೀತಿ ಇಲ್ಲ ಎಂದಿದ್ದಾರೆ ಅವರು.
2015ರಲ್ಲಿ ‘ದಿಲ್ವಾಲೆ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ್ದರು. ರೋಹಿತ್ ಶೆಟ್ಟಿ ಚಿತ್ರಗಳಲ್ಲಿ ಮಲ್ಟಿ ಸ್ಟಾರರ್ಗಳು ಸಾಮಾನ್ಯವಾಗಿದ್ದವು. ಅದೇ ರೀತಿ ಈ ಚಿತ್ರದಲ್ಲಿ ಶಾರುಖ್ ಖಾನ್, ಕಾಜೋಲ್, ವರುಣ್ ಧವನ್ ಮೊದಲಾದವರು ನಟಿಸಿದ್ದರು. ಆದರೆ, ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿತು. ಇದು ಇಬ್ಬರ ಮಧ್ಯೆ ಕಿರಿಕ್ ಆಗಲು ಕಾರಣ ಆಯಿತು ಎನ್ನುವ ಮಾತಿದೆ.
ಆದರೆ, ಇದನ್ನು ರೋಹಿತ್ ಶೆಟ್ಟಿ ಅವರು ನೇರವಾಗಿ ಅಲ್ಲಗಳೆಯುತ್ತಾರೆ. ‘ಆ ರೀತಿ ಏನೂ ಇಲ್ಲ’ ಎಂದಿದ್ದಾರೆ ರೋಹಿತ್ ಶೆಟ್ಟಿ. ‘ನಮ್ಮಿಬ್ಬರ ಮಧ್ಯೆ ಒಂದು ಗೌರವ ಇದೆ. ದಿಲ್ವಾಲೇ ಸಿನಿಮಾ ಬಳಿಕ ನಾನು ನನ್ನದೇ ಪ್ರೊಡಕ್ಷನ್ ಹೌಸ್ ಆರಂಭಿಸಿದೆ. ಈ ಮೂಲಕ ಬೇರೆ ಸಿನಿಮಾಗಳ ನಿರ್ಮಾಣ ಮಾಡಿದೆ’ ಎಂದಿದ್ದಾರೆ ಅವರು. ‘ದಿಲ್ವಾಲೆ’ ಸಿನಿಮಾ ವಿದೇಶಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ ಎಂದು ಅವರು ಹೇಳಿದ್ದಾರೆ. ಚಿತ್ರದ ನಿರ್ಮಾಪಕ ಶಾರುಖ್ ಖಾನ್ಗೆ ಯಾವುದೇ ನಷ್ಟ ಆಗಿಲ್ಲ ಎನ್ನಬಹುದು.
ಇದನ್ನೂ ಓದಿ: ಬ್ಲಾಕ್ಬಸ್ಟರ್ ಲವ್ಸ್ಟೋರಿಯಲ್ಲಿ ಸಾರಾ-ರಣವೀರ್: ರೋಹಿತ್ ಶೆಟ್ಟಿ ನಿರ್ದೇಶನ
ರೋಹಿತ್ ಶೆಟ್ಟಿ ಅವರು ಮಲ್ಟಿ ಸ್ಟಾರರ್ ಸಿನಿಮಾ ಮಾಡುತ್ತಾರೆ. ಅದರಲ್ಲೂ ಪೊಲೀಸ್ ಪಾತ್ರಗಳನ್ನು ಆಧರಿಸಿ ಅವರು ಸಿನಿಮಾ ಮಾಡುತ್ತಾರೆ. ಈ ರೀತಿಯ ಪಾತ್ರಗಳಿಗೆ ಶಾರುಖ್ ಖಾನ್ ಅವರನ್ನು ಕೂಡ ಸೇರ್ಪಡೆ ಮಾಡಿಕೊಳ್ಳಬೇಕು ಎಂಬುದು ಅನೇಕರ ಕೋರಿಕೆ. ಈಗಾಗಲೇ ಅವರು ಕಾಪ್ ಯೂನಿವರ್ಸ್ ಮಾಡಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಅವರಿಗೂ ಅವಕಾಶ ನೀಡಿ ಎಂದು ಅನೇಕರು ಕೋರಿದ್ದಾರೆ. ಈ ಯೂನಿವರ್ಸ್ನಲ್ಲಿ ಅಜಯ್ ದೇವಗನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ ಮೊದಲಾದವರು ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.