AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ಕುಟುಂಬ ಸೇರುತ್ತಿರುವ ಈ ನಯಾನಿಕಾ ಯಾರು? ಇದೆ ದೊಡ್ಡ ಉದ್ಯಮ

ನಟ ಅಲ್ಲು ಸಿರಿಶ್ ಉದ್ಯಮಿ ನಯಾನಿಕಾ ರೆಡ್ಡಿಯವರನ್ನು ವಿವಾಹವಾಗುತ್ತಿದ್ದಾರೆ. ಅಲ್ಲು ಅರ್ಜುನ್ ಕುಟುಂಬಕ್ಕೆ ಸೇರುತ್ತಿರುವ ನಯಾನಿಕಾ, ಚಿತ್ರರಂಗದಿಂದ ಹೊರತಾಗಿ ದೊಡ್ಡ ವ್ಯಾಪಾರ ಕುಟುಂಬದವರು. ವರುಣ್ ತೇಜ್ ಪಾರ್ಟಿಯಲ್ಲಿ ಭೇಟಿಯಾಗಿ, ಸ್ನೇಹ ಪ್ರೀತಿಯಾಗಿ ಅಕ್ಟೋಬರ್ 31ರಂದು ನಿಶ್ಚಿತಾರ್ಥ ಮಾಡಿಕೊಂಡರು. ಮಾರ್ಚ್ 6ರಂದು ಹೈದರಾಬಾದ್‌ನಲ್ಲಿ ವಿವಾಹ ಜರುಗಲಿದ್ದು, ಈ ನೂತನ ಜೋಡಿಯ ಪ್ರೇಮ ಕಥೆ, ಕುಟುಂಬದ ಹಿನ್ನೆಲೆಯ ಮಾಹಿತಿ ಇಲ್ಲಿದೆ.

ಅಲ್ಲು ಅರ್ಜುನ್ ಕುಟುಂಬ ಸೇರುತ್ತಿರುವ ಈ ನಯಾನಿಕಾ ಯಾರು? ಇದೆ ದೊಡ್ಡ ಉದ್ಯಮ
ಅಲ್ಲು ಸಿರಿಶ್ ಹಾಗೂ ನಯಾನಿಕಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 05, 2026 | 7:50 AM

Share

ದಕ್ಷಿಣ ಭಾರತದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ (Allu Sirish) ವಿವಾಹವಾಗುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಭಾವಿ ಅತ್ತಿಗೆ ನಯಾನಿಕಾ ರೆಡ್ಡಿ ಯಾರು ಎಂದು ಎಲ್ಲರೂ ಹುಡುಕುತ್ತಿದ್ದಾರೆ. ಅಲ್ಲು ಅರ್ಜುನ್ ಕುಟುಂಬ ತುಂಬಾನೇ ದೊಡ್ಡದು. ಹೀಗಾಗಿ, ಇವರ ವಿವಾಹ ಆಗುತ್ತಿರುವ ಹುಡುಗಿ ಕೂಡ ದೊಡ್ಡ ಕುಟುಂಬದವರೇ ಆಗಿರುತ್ತಾರೆ ಎಂಬ ಬಗ್ಗೆ ಅನುಮಾನ ಬೇಡ. ಈ ಮದುವೆಗಾಗಿ ಅಲ್ಲು ಅರ್ಜುನ್ ಕುಟುಂಬ ಸಾಕಷ್ಟು ಹಣವನ್ನು ಖರ್ಚು ಮಾಡಿದೆ.

ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ವಿವಾಹವಾಗುತ್ತಿದ್ದು, ಅವರ ವಿವಾಹಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ಆರಂಭವಾಗಿವೆ. ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಮಾರ್ಚ್ 6ರಂದು ವಿವಾಹವಾಗಲಿದ್ದಾರೆ. ಹೈದರಾಬಾದ್​ ಅಲ್ಲಿ ಈ ವಿವಾಹ ಜರುಗಲಿದೆ.

ಅಲ್ಲು ಅರ್ಜುನ್ ಅವರ ಅತ್ತಿಗೆ ನಯಾನಿಕಾ ರೆಡ್ಡಿ ಹೈದರಾಬಾದ್‌ನವರಾಗಿದ್ದು, ಉದ್ಯಮಿಯಾಗಿದ್ದಾರೆ. ನಯಾನಿಕಾ ಅವರ ಕುಟುಂಬವೂ ದೊಡ್ಡ ವ್ಯವಹಾರವನ್ನು ಹೊಂದಿದೆ. ಅವರಿಗೆ ಚಿತ್ರರಂಗದೊಂದಿಗೆ ಯಾವುದೇ ಸಂಬಂಧವಿಲ್ಲ. ಅದೇ ರೀತಿ, ಅವರು ಹೆಚ್ಚು ಸುದ್ದಿಯಲ್ಲಿರಲು ಇಷ್ಟಪಡುವುದಿಲ್ಲ.

ನಯಾನಿಕಾ ತನ್ನ ಕುಟುಂಬ ವ್ಯವಹಾರವನ್ನು ನಡೆಸುತ್ತಾ ಇದ್ದಾರೆ. ಅಲ್ಲು ಸಿರೀಶ್ ಜೊತೆ ವಿವಾಹವಾಗುವ ಮೊದಲು ಅವರು ಹೆಚ್ಚು ಪರಿಚಿತರಾಗಿರಲಿಲ್ಲ. ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ಹೆಚ್ಚು ಸಕ್ರಿಯರಾಗಿಲ್ಲ. ತೆಲುಗು ನಟರಾದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ವಿವಾಹ ಪೂರ್ವ ಪಾರ್ಟಿಯಲ್ಲಿ ನಯಾನಿಕಾ ಮತ್ತು ಅಲ್ಲು ಸಿರೀಶ್ ಮೊದಲು ಭೇಟಿಯಾದರು ಎನ್ನಲಾಗಿದೆ.

ಇದನ್ನೂ ಓದಿ: ಕೊರಿಯಾಕ್ಕೆ ಹೋಗಿ ಶಾಕ್ ಆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್

ವಿವಾಹ ಪೂರ್ವ ಪಾರ್ಟಿಯ ನಂತರ, ನಯಾನಿಕಾ ಮತ್ತು ಅಲ್ಲು ಸಿರೀಶ್ ಕ್ರಮೇಣ ಒಳ್ಳೆಯ ಸ್ನೇಹಿತರಾದರು ಮತ್ತು ಈ ಸ್ನೇಹ ಪ್ರೀತಿಗೆ ತಿರುಗಿತು. 2025ರಲ್ಲಿ, ಅಲ್ಲು ಸಿರೀಶ್ ನಯಾನಿಕಾ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದರು. ಅಂದಿನಿಂದ, ಇವರ ನಿಶ್ಚಿತಾರ್ಥದ ವದಂತಿಗಳು ಹಬ್ಬಿದವು. ಇಬ್ಬರೂ ಕಳೆದ ವರ್ಷ ಅಕ್ಟೋಬರ್ 31ರಂದು ನಿಶ್ಚಿತಾರ್ಥ ಮಾಡಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಂಡರು. ನಯಾನಿಕಾ ಮತ್ತು ಅಲ್ಲು ಸಿರೀಶ್ ಹೊಸ ಜೀವನವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ