AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟೆಲ್ಲ ಆದ್ರೂ ಕೆವಿಎನ್​​ಗೆ ಇಲ್ಲ ಚಿಂತೆ; ಕೈಯಲ್ಲಿವೆ ಇನ್ನೂ ಹಲವು ಬಿಗ್ ಬಜೆಟ್ ಸಿನಿಮಾಗಳು

KVN Production Movies : ಕೆವಿಎನ್ ಪ್ರೊಡಕ್ಷನ್ಸ್ ದೊಡ್ಡ ಬಜೆಟ್ ಸಿನಿಮಾಗಳ ವಿಳಂಬದಿಂದ ಚಿಂತಿತವಾಗಿಲ್ಲ. ಸಂಸ್ಥೆಯು 'ಜನ ನಾಯಗನ್', 'ಟಾಕ್ಸಿಕ್' ಸೇರಿದಂತೆ ಹಲವು ಬಹುಕೋಟಿ ಯೋಜನೆಗಳನ್ನು ಒಟ್ಟಿಗೇ ನಿರ್ಮಿಸುತ್ತಿದೆ. ಅಕ್ಷಯ್ ಕುಮಾರ್, ಚಿರಂಜೀವಿ ಅವರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ಹೊಸ ಚಿತ್ರಗಳು ಅಂತಿಮ ಹಂತದಲ್ಲಿವೆ.

ಇಷ್ಟೆಲ್ಲ ಆದ್ರೂ ಕೆವಿಎನ್​​ಗೆ ಇಲ್ಲ ಚಿಂತೆ; ಕೈಯಲ್ಲಿವೆ ಇನ್ನೂ ಹಲವು ಬಿಗ್ ಬಜೆಟ್ ಸಿನಿಮಾಗಳು
ಕೆವಿಎನ್
ರಾಜೇಶ್ ದುಗ್ಗುಮನೆ
|

Updated on: Mar 05, 2026 | 7:35 AM

Share

ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂದರೆ ಅದು ಸುಲಭದ ಮಾತಲ್ಲ. ಸಾಕಷ್ಟು ರಿಸ್ಕ್ ಇರುತ್ತದೆ. ಒಂದು ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡುವಾಗಲೇ ಕೆಲವರು ಸುಸ್ತಾಗಿಬಿಡುತ್ತಾರೆ. ಆದರೆ, ಕನ್ನಡದ ‘ಕೆವಿಎನ್​ ಪ್ರೊಡಕ್ಷನ್ಸ್’ ಒಟ್ಟೊಟ್ಟಿಗೆ ಹಲವು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸುತ್ತಿದೆ. ಈ ನಿರ್ಮಾಣ ಸಂಸ್ಥೆಯ ಬತ್ತಳಿಕೆಯಲ್ಲಿ ಇನ್ನೂ ಕೆಲವು ಸಿನಿಮಾಗಳು ಇವೆ. ಹಾಗಾದರೆ ಯಾವುದು ಆ ಚಿತ್ರ? ಸಿನಿಮಾಗಳು ಮುಂದಕ್ಕೆ ಹೋಗಿದ್ದರಿಂದ ಸಂಸ್ಥೆಗೆ ಏನಾದರೂ ತೊಂದರೆ ಆಯಿತೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದಾಗ ಅಂದುಕೊಂಡ ದಿನಾಂಕದಂದು ಅದನ್ನು ರಿಲೀಸ್ ಮಾಡೋಕೆ ಸಾಧ್ಯ ಇಲ್ಲ ಎಂಬ ಐಡಿಯಾ ನಿರ್ಮಾಣ ಸಂಸ್ಥೆಗೆ ಇದ್ದೇ ಇರುತ್ತದೆ. ಅದರಲ್ಲೂ ‘ಜನ ನಾಯಗನ್’, ‘ಟಾಕ್ಸಿಕ್’ ರೀತಿಯ ಸಿನಿಮಾಗಳನ್ನು ಮಾಡುವಾಗ ಎದುರಾಗಬಹುದಾದ ಅಡೆತಡೆಗಳ ಬಗ್ಗೆ ನಿರ್ಮಾಣ ಸಂಸ್ಥೆ ಮೊದಲೇ ಆಲೋಚಿಸಿರುತ್ತದೆ. ಅದಕ್ಕೆ ತಕ್ಕಂತೆಯೇ ಉಳಿದೆಲ್ಲ ಸಿದ್ಧತೆಗಳು ನಡೆದಿರುತ್ತವೆ.

ಈಗಾಗಲೇ ಪ್ರೀ ಬಿಸ್ನೆಸ್​​ನಿಂದ ಸಾಕಷ್ಟು ಹಣ ಬಂದಿರುವುದರಿಂದ ನಿರ್ಮಾಣ ಸಂಸ್ಥೆ ಚಿಂತಿಸುತ್ತಿಲ್ಲ ಎನ್ನಲಾಗಿದೆ. ‘ಜನ ನಾಯಗನ್’ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸೆನ್ಸಾರ್ ಸಮಸ್ಯೆಯಿಂದ ಚಿತ್ರವನ್ನು ಮುಂದಕ್ಕೆ ಹಾಕಲಾಯಿತು. ಇದಕ್ಕೆ ರಾಜಕೀಯ ಶಕ್ತಿಗಳು ಕೆಲಸ ಮಾಡಿರಬಹುದು ಎಂದು ಊಹಿಸಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ವಿಳಂಬಕ್ಕೆ ವಿಶ್ವದಲ್ಲಿ ನಡೆಯುತ್ತಿರುವ ಯುದ್ಧಭೀತಿ ಕಾರಣ. ತರಾತುರಿ ಮಾಡುವ ಬದಲು ಸ್ವಲ್ಪ ಕಾದು ರಿಲೀಸ್ ಮಾಡೋಣ ಎಂಬ ತಂತ್ರ ತಂಡದ್ದು. ಸದ್ಯದ ಪ್ಲ್ಯಾನ್ ಪ್ರಕಾರ, ಏಪ್ರಿಲ್ ಅಲ್ಲಿ ‘ಕೆಡಿ’, ಮೇ ತಿಂಗಳಲ್ಲಿ ‘ಜನ ನಾಯಗನ್’ ಹಾಗೂ ಜೂನ್ ಅಲ್ಲಿ, ‘ಟಾಕ್ಸಿಕ್’ ರಿಲೀಸ್ ಮಾಡುವ ಆಲೋಚನೆಯಲ್ಲಿ ನಿರ್ಮಾಣ ಸಂಸ್ಥೆ ಇದೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಿಕೆ ನಿರ್ಧಾರಕ್ಕೆ ಕಾರಣವೇನು? ಈ ಮೂರು ಸಿನಿಮಾಗಳ ಹೊರತಾಗಿ ಇನ್ನೂ ಕೆಲವು ಚಿತ್ರಗಳು ನಿರ್ಮಾಣ ಸಂಸ್ಥೆ ಕೈಯಲ್ಲಿದೆ. ಬಾಲಿವುಡ್​​ನಲ್ಲಿ ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿದೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮಲಯಾಳಂನಲ್ಲಿ ‘ಮಂಜುಮೇಲ್​ ಬಾಯ್ಸ್’ ಟೀಂ ಜೊತೆ ಇವರು ಸಿನಿಮಾ ಮಾಡುತ್ತಿದ್ದು, ಕೆಲಸಗಳು ಸಾಗುತ್ತಿವೆ. ಇನ್ನು, ಟಾಲಿವುಡ್​​ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರದ ಕೆಲಸ ಕೂಡ ಇನ್ನಷ್ಟೇ ಆರಂಭ ಆಗಬೇಕಿದ್ದು, ಇದಕ್ಕೆ ಕೆವಿಎನ್ ಬಂಡವಾಳ ಹೂಡತ್ತಿದೆ. ಇನ್ನೂ ಕೆಲವು ಸಿನಿಮಾಗಳು ಮಾತುಕತೆ ಹಂತದಲ್ಲಿ ಇವೆಯಂತೆ. ಸಿನಿಮಾಗಳಿಗಾಗಿಯೇ ಸರಿ ಸುಮಾರು 2000 ಕೋಟಿ ರೂಪಾಯಿಯನ್ನು ಈ ಸಂಸ್ಥೆ ಹೂಡಿಕೆ ಮಾಡಿದೆ ಎಂಬುದು ನಿರ್ಮಾಣ ಸಂಸ್ಥೆಯ ಹೆಚ್ಚುಗಾರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us