ಶ್ರೀದೇವಿನ ಕನ್ನಡಕ್ಕೆ ಕರೆತರಲು ಹೋಗಿದ್ದ ರವಿಚಂದ್ರನ್; ಆಮೇಲೆ ಆಗಿದ್ದೇನು?
ವಿ. ರವಿಚಂದ್ರನ್ ಅವರು ಶ್ರೀದೇವಿ ಮತ್ತು ಐಶ್ವರ್ಯಾ ರೈ ಜೊತೆ ಕೆಲಸ ಮಾಡಲು ಪ್ರಯತ್ನಿಸಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಶ್ರೀದೇವಿಯೊಂದಿಗೆ "ಚೆಲುವ" ಚಿತ್ರಕ್ಕೆ ಒಪ್ಪಂದವೂ ಆಗಿತ್ತು ಆದರೆ ಚಿತ್ರ ನಿರ್ಮಾಣ ಆಗಲಿಲ್ಲ. ಐಶ್ವರ್ಯಾ ರೈ ಅವರಿಗೆ ಮಿಸ್ ವರ್ಲ್ಡ್ ಆಗುವ ಮೊದಲೇ ಅವರು ನಟನೆಯಲ್ಲಿ ಭವಿಷ್ಯವಿದೆ ಎಂದು ತಿಳಿದು ಪತ್ರ ಬರೆದಿದ್ದರು.

ವಿ. ರವಿಚಂದ್ರನ್ (V Ravichandran) ಅವರು ನಟನೆಯ ಜೊತೆಗೆ ಅನೇಕ ಸಿನಿಮಾಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಅವರ ಖ್ಯಾತಿ ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಅವರು ಕನ್ನಡ ಚಿತ್ರರಂಗಕ್ಕೆ ಖುಷ್ಬೂ ಸುಂದರ್, ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕ ಹೀರೋಯಿನ್ಗಳನ್ನು ಪರಿಚಯಿಸಿದ್ದರು. ಅವರಿಗೆ ಶ್ರೀದೇವಿಯನ್ನು ಕನ್ನಡ ಚಿತ್ರರಂಗಕ್ಕೆ ಕರೆಸೋ ಪ್ಲ್ಯಾನ್ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈ ಬಗ್ಗೆ ರವಿಚಂದ್ರನ್ ಅವರು ಮಾತನಾಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಅಲ್ಲದೆ, ಐಶ್ವರ್ಯಾ ರೈ ಬಗ್ಗೆಯೂ ಮಾತನಾಡಿದ್ದಾರೆ.
ರವಿಚಂದ್ರನ್ ಅವರು ಚಿತ್ರರಂಗದ ಜೊತೆ ಕಿರುತೆರೆ ಲೋಕದಲ್ಲೂ ಬ್ಯುಸಿ ಇದ್ದಾರೆ. ಅವರು ರಿಯಾಲಿಟಿ ಶೋಗಳಿಗೆ ಜಡ್ಡ್ ಆಗುತ್ತಿದ್ದಾರೆ. ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಇವರ ಜೊತೆ ರಚಿತಾ ರಾಮ್ ಕೂಡ ಇದ್ದರು. ಅವರ ಎದುರು ರವಿಚಂದ್ರನ್ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.
‘ಅವರ ಸಿನಿಮಾದಲ್ಲಿ ಎಲ್ಲಾ ಭಾಷೆಯ ಹೀರೋಯಿನ್ಗಳನ್ನು ನೋಡಿದ್ದೇನೆ. ಶ್ರೀದೇವಿ, ಐಶ್ವರ್ಯಾ ರೈ ಜೊತೆ ನೀವು ನಟಿಸಬೇಕಿತ್ತು. ಅವರನ್ನು ಕರೆತರೋ ತಾಕತ್ತು ಇವರಿಗೆ ಮಾತ್ರ ಇತ್ತು’ ಎಂದಿದ್ದಾರೆ ರಚಿತಾ ರಾಮ್. ಇದಕ್ಕೆ ರವಿಚಂದ್ರನ್ ಅವರು ಒಂದು ಅಚ್ಚರಿ ವಿಚಾರ ರಿವೀಲ್ ಮಾಡಿದ್ದಾರೆ.
View this post on Instagram
‘ಚೆಲುವ ಸಿನಿಮಾ ಮಾಡಿದೆವು. ಅದಕ್ಕೆ ಚೆಲುವೆ ಅಂತಾನೇ ಹಸರು ಇಟ್ಟಿದ್ದೆವು. ಅದಕ್ಕೆ ಶ್ರೀದೇವಿ ನಟಿಯಾಗಿತ್ತು. ಅವರನ್ನು ಕರೆದುಕೊಂಡು ಬಂದರೆ ನನಗೆ ಸಂಭಾವನೆಯೇ ಬೇಡ ಎಂದೆ. ಈ ಚಿತ್ರ ಸಹಿ ಕೂಡ ಆಯ್ತು. ಅದನ್ನು ನಾನೇ ಡೈರೆಕ್ಟ್ ಮಾಡಬೇಕಿತ್ತು. ಆದರೆ, ಸಿನಿಮಾ ಸೆಟ್ಟೇರಿಲ್ಲ’ ಎಂದರು ರವಿಚಂದ್ರನ್.
ಇದನ್ನೂ ಓದಿ: ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ
‘ಮಿಸ್ ವರ್ಲ್ಡ್ ಆಗುವುದಕ್ಕೂ ಮೊದಲೇ ಐಶ್ವರ್ಯಾ ರೈಗೆ ನಾನು ಪತ್ರ ಬರೆದಿದ್ದೆ. ನೀವು ನಟನೆಗೆ ಬರಬೇಕು ಎಂದಿದ್ದೆ. ಎಲ್ಲಿಯೋ ಅವರ ಫೋಟೋ ನೋಡಿ ಅವರಿಗೆ ನಟನೆಯಲ್ಲಿ ಭವಿಷ್ಯ ಇದೆ ಎಂದು ನನಗೆ ಅನಿಸಿತ್ತು. ಆದರೆ, ಆ ಸಂದರ್ಭದಲ್ಲಿ ಅವರಿಗೆ ನಟನೆಯ ಬಗ್ಗೆ ಆಸಕ್ತಿಯೇ ಇರಲಿಲ್ಲ. ಅವರು ಕರ್ನಾಟಕಕ್ಕೆ ಮಿಸ್ ವರ್ಲ್ಡ್ ಕ್ರೌನ್ ತಂದಾಗ ಅದನ್ನು ಮೊದಲು ಅವರಿಗೆ ಹಾಕಿದ್ದು ನಾನೇ’ ಎಂದಿದ್ದಾರೆ ರವಿಚಂದ್ರನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:53 am, Tue, 22 April 25