ಈಗ ಪತ್ನಿಯೇ ಸರ್ವಸ್ವ; ವಿಜಯಲಕ್ಷ್ಮೀ ಜೊತೆ ಭರನಾಟ್ಯ ನೋಡಲು ಬಂದ ದರ್ಶನ್
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜಾಮೀನಿನ ಮೇಲೆ ಬಿಡುಗಡೆಯಾದರು. ಪತ್ನಿ ವಿಜಯಲಕ್ಷ್ಮೀ ಬೆಂಬಲದ ಬಗ್ಗೆ ಅವರಿಗೆ ತುಂಬಾನೇ ಖುಷಿ ಇದೆ. ಇಬ್ಬರೂ ಇತ್ತೀಚೆಗೆ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಕುಟುಂಬದ ಒಟ್ಟುಗೂಡುವಿಕೆ ದರ್ಶನ್ ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ .

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆದ ಬಳಿಕ ಅವರ ಪತ್ನಿ ವಿಜಯಲಕ್ಷ್ಮೀ ಅವರು ಸಾಕಷ್ಟು ಸಂಕಟಪಟ್ಟರು. ಪತಿಯನ್ನು ಹೊರಕ್ಕೆ ಕರೆದುಕೊಂಡು ಬರಲು ಸಾಕಷ್ಟು ಹರಸಾಹಸಪಟ್ಟರು. ಕೊನೆಗೂ ಅವರ ಪ್ರಯತ್ನ ಫಲ ಕೊಟ್ಟಿತು. ದರ್ಶನ್ ಜಾಮೀನು ಪಡೆದು ಹೊರಕ್ಕೆ ಬಂದಿದ್ದಾರೆ. ಈಗ ಅವರು ಪತ್ನಿಯ ಜೊತೆಯೇ ಇರುತ್ತಿದ್ದಾರೆ. ಅವರ ಜೊತೆಯೇ ಸುತ್ತಾಡುತ್ತಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಕೂಡ ಖುಷಿಯಾಗಿದ್ದಾರೆ. ಇತ್ತೀಚೆಗೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರು ಒಟ್ಟಾಗಿ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ನಟ, ನಿರ್ಮಾಪಕ ಬಿ. ಸುರೇಶ್ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ದಂಪತಿ ಜೊತೆ ದರ್ಶನ್ ಅವರಿಗೆ ಒಳ್ಳೆಯ ಒಡನಾಟ ಇದೆ. ಶೈಲಜಾ ಹಾಗೂ ಸುರೇಶ್ ಪುತ್ರಿ ಚಂದನಾ ಎಸ್. ನಾಗ್ ಏಪ್ರಿಲ್ 20ರಂದು ಭರತನಾಟ್ಯ ರಂಗಪ್ರವೇಶ ಮಾಡಿದ್ದಾರೆ. ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆದಿದೆ. ಇದಕ್ಕೆ ದರ್ಶನ್ ಅವರು ಪತ್ನಿ ಜೊತೆ ಆಗಮಿಸಿದ್ದಾರೆ.
ಶೈಲಜಾ ಹಾಗೂ ಸುರೇಶ್ ಅವರ ಆಹ್ವಾನದ ಮೇಲೆ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ ಒಟ್ಟಾಗಿ ಆಗಮಿಸಿದ್ದಾರೆ. ಸಾಮಾನ್ಯವಾಗಿ ಸಿನಿಮಾ ರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ದರ್ಶನ್ ಒಂಟಿಯಾಗಿ ಬರುತ್ತಾರೆ ಅಥವಾ ಗೆಳೆಯರ ಗ್ಯಾಂಗ್ ಜೊತೆ ಬರುತ್ತಾರೆ. ಅವರು ಈ ರೀತಿ ಫ್ಯಾಮಿಲಿ ಜೊತೆ ಬಂದಿದ್ದು ಕಡಿಮೆ. ಆದರೆ, ಈಗ ದರ್ಶನ್ ಅವರು ವಿಜಯಲಕ್ಷ್ಮೀ ಜೊತೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ದಂಪತಿ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮುಖ್ಯ ಮಂತ್ರಿಯಾದ ನಟ ದರ್ಶನ್, ಪಕ್ಷ ಯಾವುದು ಗೊತ್ತೆ?
ಡೆವಿಲ್ ಶೂಟಿಂಗ್
ದರ್ಶನ್ ಅವರು ಡೆವಿಲ್ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈಗಾಗಲೇ ರಾಜಸ್ಥಾನದಲ್ಲಿ ಕೆಲವು ಪ್ರಮುಖ ಹಂತದ ಶೂಟ್ ಮುಗಿಸಿ ಮರಳಿದ್ದಾರೆ. ಈಗ ನಮ್ಮ ರಾಜ್ಯದಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆ ಬಳಿಕ ತಂಡದವರು ಹೈದರಾಬಾದ್ಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಇತ್ತೀಚೆಗೆ ಚಿತ್ರದ ಸೆಟ್ನ ಫೋಟೋ ವೈರಲ್ ಆಗಿತ್ತು. ಇದರಲ್ಲಿ ದರ್ಶನ್ ಅವರು ಮುಖ್ಯಮಂತ್ರಿ ಪಾತ್ರ ಮಾಡುತ್ತಿದ್ದಾರೆ ಎಂಬ ವಿಚಾರ ರಿವೀಲ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:36 am, Mon, 21 April 25