ಫ್ಯಾನ್ಸಿ ಹೆಸರಲ್ಲ.. ಮಗನಿಗೆ ಪೌರಾಣಿಕ ಪಾತ್ರದ ಹೆಸರಿಟ್ಟ ಪ್ರಣಿತಾ ಸುಭಾಷ್; ಕಾರಣವೇನು?
ಪ್ರಣಿತಾ ಸುಭಾಷ್ ಮತ್ತು ನಿತಿನ್ ರಾಜು ದಂಪತಿಗಳು ತಮ್ಮ ಗಂಡು ಮಗುವಿಗೆ ನಾಮಕರಣ ಮಾಡಿದ್ದಾರೆ. ಮಹಾಭಾರತದಲ್ಲಿ ಬರೋ ಈ ಪಾತ್ರದ ಹೆಸರನ್ನು ಅವರು ಇಟ್ಟಿದ್ದಾರೆ. ತಮ್ಮ ಮಗುವಿಗೆ ಸಾಂಪ್ರದಾಯಿಕ ಹೆಸರಿಡುವ ಮೂಲಕ ಅವರು ಎಲ್ಲರಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ. ಈ ಹೆಸರಿನ ಹಿಂದಿನ ಕಾರಣಗಳನ್ನು ಅವರು ವಿವರಿಸಿದ್ದಾರೆ.

ನಟಿ ಪ್ರಣಿತಾ ಸುಭಾಷ್ (Pranitha Subhash) ಹಾಗೂ ನಿತಿನ್ ರಾಜು ದಂಪತಿಗೆ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಗಂಡು ಮಗು ಜನಿಸಿದೆ. ಈ ಮಗುವಿಗೆ ಈಗ ನಾಮಕರಣ ಶಾಸ್ತ್ರ ನಡೆದಿದೆ. ಎಲ್ಲರೂ ಫ್ಯಾನ್ಸಿ ಹೆಸರಿನ ಹಿಂದೆ ಓಡುತ್ತಿದ್ದರೆ ಪ್ರಣಿತಾ ಮಾತ್ರ ಮಹಾಭಾರತದಲ್ಲಿ ಬರೋ ಈ ಪ್ರಮುಖ ವ್ಯಕ್ತಿಯ ಹೆಸರು ಇಟ್ಟಿದ್ದಾರೆ. ಹೌದು, ತಮ್ಮ ಮಗುವಿಗೆ ಪ್ರಣಿತಾ ಅವರು ಜೈ ಕೃಷ್ಣ ಎಂದು ಹೆಸರು ಇಟ್ಟಿದ್ದಾರೆ. ಇಡೀ ಮಹಾಭಾರತದ ಸಾರಥಿ ಎನಿಸಿಕೊಂಡಿದ್ದಾರೆ ಕೃಷ್ಣ. ಇದೇ ಹೆಸರನ್ನು ಆಯ್ಕೆ ಮಾಡಿಕೊಳ್ಳಲು ಅವರು ಕಾರಣ ವಿವರಿಸಿದ್ದಾರೆ.
ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ತಮ್ಮ ಮಕ್ಕಳಿಗೆ ಫ್ಯಾನ್ಸಿ ಹೆಸರನ್ನು ಇಡಲು ಬಯಸುತ್ತಾರೆ. ಅದರಲ್ಲೂ ಪೌರಾಣಿಕ ಪಾತ್ರಗಳ ಹೆಸರನ್ನು ಇಡಬೇಕು ಎಂದು ಯಾರೂ ಬಯಸುವುದಿಲ್ಲ. ಆದರೆ, ಪ್ರಣಿತಾ ಅವರು ಈ ವಿಚಾರದಲ್ಲಿ ಭಿನ್ನ. ತಮ್ಮ ಮಗನಿಗೆ ಅವರು ಜೈ ಕೃಷ್ಣ ಎಂದು ನಾಮಕರಣ ಮಾಡಿದ್ದಾರೆ. ಅವರು ಸಾಂಪ್ರದಾಯಿಕ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ.
‘ನನ್ನ ತಂದೆಯ ತಂದೆ ಹೆಸರು ಬಾಲಕೃಷ್ಣ ಅಂತ. ನಮ್ಮ ಹಾಸ್ಪಿಟಲ್ ಹೆಸರು ಶ್ರೀಕೃಷ್ಣ. ನನ್ನ ಪತಿಯ ತಂದೆಯ ಹೆಸರು ವಾಸುದೇವ ಅಂತ. ಎಲ್ಲಾ ಒಟ್ಟಿಗೆ ಸೇರಿ ಜೈ ಕೃಷ್ಣ ಎಂದು ಹೆಸರು ಇಟ್ಟಿದ್ದೇವೆ’ ಎಂದಿದ್ದಾರೆ ಪ್ರಣಿತಾ.
View this post on Instagram
ಪ್ರಣಿತಾ ಹಾಗೂ ಉದ್ಯಮಿ ನಿತಿನ್ ಜೋಡಿ ಕೊವಿಡ್ ಸಂದರ್ಭದಲ್ಲಿ ಮದುವೆ ಆಗಿತ್ತು. ಈ ದಂಪತಿಗೆ 2022ರಲ್ಲಿ ಹೆಣ್ಣು ಮಗು ಜನಿಸಿತು. ಅವಳಿಗೆ ಅರ್ನಾ ಎಂದು ಹೆಸರು ಇಡಲಾಗಿದೆ. ಸೆಪ್ಟೆಂಬರ್ನಲ್ಲಿ ಪ್ರಣಿತಾ ಗಂಡು ಮಗುವನ್ನು ಬರಮಾಡಿಕೊಂಡಿದ್ದು, ಈಗ ನಾಮಕರಣ ಶಾಸ್ತ್ರ ನಡೆದಿದೆ.
ಪ್ರಣಿತಾ ಅವರು ಇತ್ತೀಚೆಗೆ ಬಣ್ಣದ ಲೋಕದಿಂದ ದೂರವೇ ಇದ್ದಾರೆ. ಸದ್ಯ ಅವರು ಎರಡನೇ ಮಗುವಿನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಆ ಬಳಿಕ ಅವರು ಹೊಸ ಸಿನಿಮಾ ಘೋಷಣೆ ಮಾಡೋ ಸಾಧ್ಯತೆ ಇದೆ.
ಇದನ್ನೂ ಓದಿ: ಎರಡನೇ ಮಗುವಿಗೆ ಜನ್ಮಕೊಟ್ಟ ಪ್ರಣಿತಾ ಸುಭಾಷ್; ಒಂದೇ ದಿನ ಎರಡು ನಟಿಯರಿಂದ ಗುಡ್ನ್ಯೂಸ್
ಮಿಲನಾಗೆ ಮಗು
ಪ್ರಣಿತಾ ಅವರಿಗೆ ಮಗು ಜನಿಸಿದ ದಿನವೇ ಮಿಲನಾ ನಾಗರಾಜ್ಗೆ ಮಗು ಜನಿಸಿತ್ತು. ಅವರಿಗೆ ಹೆಣ್ಣು ಮಗು ಜನಿಸಿದ್ದು, ಪರಿ ಎಂದು ಹೆಸರು ಇಡಲಾಗಿದೆ. ಕಳೆದ ವರ್ಷ ಬಾಲಿವುಡ್ನ ದೀಪಿಕಾ ಪಡುಕೋಣೆ, ಕನ್ನಡದ ಕಿರುತೆರೆ ನಟಿಯರಾದ ನೇಹಾ ಗೌಡ, ಕವಿತಾ ಗೌಡ ಅವರಿಗೂ ಮಗು ಜನಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.