- Kannada News Photo gallery Upendra And Priyanka Celebrate their 17 year old Daughter Aishwarya's Birthday
ಉಪೇಂದ್ರ-ಪ್ರಿಯಾಂಕಾ ಮಗಳಿಗೆ ಹುಟ್ಟುಹಬ್ಬದ ಸಂಭ್ರಮ; ಐಶ್ವರ್ಯಾಗೆ ಈಗೆಷ್ಟು ವರ್ಷ?
ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಮಕ್ಕಳು ಕೂಡ ಅಲ್ಲಲ್ಲಿ ಕಾಣಿಸಿಕೊಂಡಿದ್ದು ಇದೆ. ಈಗ ಪ್ರಿಯಾಂಕಾ ಮಗಳು ಐಶ್ವರ್ಯಾಗೆ ಹುಟ್ಟುಹಬ್ಬದ ಸಂಭ್ರಮ. ಆ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ಆ ಬಗ್ಗೆ ಇಲ್ಲಿದೆ ವಿವರ.
Updated on:Apr 20, 2025 | 7:38 AM

ನಟ ಉಪೇಂದ್ರ ಹಾಗೂ ಅವರ ಪತ್ನಿ, ನಟಿ ಪ್ರಿಯಾಂಕಾ ದಂಪತಿಗೆ ಇಬ್ಬರು ಮಕ್ಕಳು. ಆ ಪೈಕಿ ಮಗಳು ಐಶ್ವರ್ಯಾಗೆ ಜನ್ಮದಿನದ ಸಂಭ್ರಮ. ಮಗಳ ಬರ್ತ್ಡೇನ ಅವರು ಅದ್ದೂರಿಯಾಗಿ ಆಚರಿಸಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.

ಪ್ರಿಯಾಂಕಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಸಂದರ್ಭದ ಫೋಟೋನ ಹಂಚಿಕೊಂಡಿದ್ದಾರೆ. ಮಗಳಿಗೆ ಅವರು ಕೇಕ್ ತಿನ್ನಿಸಿ ಶುಭಾಶಯ ಕೋರಿದ್ದಾರೆ. ಈ ಕ್ಯೂಟ್ ಫೋಟೋಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಫ್ಯಾನ್ಸ್ ಅವರಿಗೆ ಶುಭಾಶಯ ಕೋರುತ್ತಿದ್ದಾರೆ.

ಐಶ್ವರ್ಯಾ ಉಪೇಂದ್ರ ಅವರು ಜನಿಸಿದ್ದು 2008ರಲ್ಲಿ. ಈಗ ಅವರಿಗೆ 17 ವರ್ಷ ವಯಸ್ಸು. ಅವರು ಆಗಾಗ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿ ಇಲ್ಲ.

ಉಪೇಂದ್ರ ಅವರ ಮಗನ ಹೆಸರು ಆಯುಷ್. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರಿಗೆ ಬೈಕ್ ಬಗ್ಗೆ ತುಂಬಾನೇ ಕ್ರೇಜ್ ಇದೆ. ಅವರು ದೇಶ-ವಿದೇಶಗಳನ್ನು ಸುತ್ತುತ್ತಾ ಸಮಯ ಕಳೆಯುತ್ತಾರೆ.

ಉಪೇಂದ್ರ ಅವರ ಮಗನ ಹೆಸರು ಆಯುಷ್. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರಿಗೆ ಬೈಕ್ ಬಗ್ಗೆ ತುಂಬಾನೇ ಕ್ರೇಜ್ ಇದೆ. ಅವರು ದೇಶ-ವಿದೇಶಗಳನ್ನು ಸುತ್ತುತ್ತಾ ಸಮಯ ಕಳೆಯುತ್ತಾರೆ.
Published On - 7:35 am, Sun, 20 April 25



















