ಕರ್ನಾಟಕದ ಮುಖ್ಯ ಮಂತ್ರಿಯಾದ ನಟ ದರ್ಶನ್, ಪಕ್ಷ ಯಾವುದು ಗೊತ್ತೆ?
Darshan Thoogudeepa: ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಪ್ರತಿ ತಿಂಗಳೂ ಸಹ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ. ಅದಕ್ಕೆ ಹಿಂದೆ ಹೆಂಡತಿಯನ್ನು ಹೊಡೆದ ಕೇಸಿನಲ್ಲಿಯೂ ಜೈಲು ಪಾಲಾಗಿದ್ದರು. ಆದರೆ ಈಗ ಹಠಾತ್ತನೆ ದರ್ಶನ್ ಕರ್ನಾಟಕದ ಸಿಎಂ ಆಗಿಬಿಟ್ಟಿದ್ದಾರೆ. ಅದೂ ಯಾವ ಪಕ್ಷದಿಂದ ಗೊತ್ತೆ?

ಜೈಲಿಗೆ ಹೋಗಿ ಬಂದವರಿಗೆ ಅದೃಷ್ಟ ಖುಲಾಯಿಸುತ್ತದಂತೆ. ಜೈಲು ವಾಸ ಅನುಭವಿಸಿ ಬಂದ ಹಲವು ಮಹನೀಯರು ಮುಖ್ಯ ಮಂತ್ರಿ, ಪ್ರಧಾನ ಮಂತ್ರಿ ಆದ ಉದಾಹರಣೆಗಳೂ ಭಾರತದಲ್ಲಿ ಇವೆ. ಇದೀಗ ರೇಣುಕಾ ಸ್ವಾಮಿ (Renuka swamy) ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಬಂದಿರುವ ನಟ ದರ್ಶನ್ (Darshan Thoogudeepa) ಏಕಾ ಏಕಿ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಆಗಿಬಿಟ್ಟಿದ್ದಾರೆ! ಆದರೆ ನಿಜ ಜೀವನದಲ್ಲಿ ಅಲ್ಲ ಬದಲಿಗೆ ಸಿನಿಮಾದಲ್ಲಿ.
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ನಾಲ್ಕನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಸಿನಿಮಾ ಚಿತ್ರೀಕರಣದ ಕೆಲ ಚಿತ್ರಗಳು ಲೀಕ್ ಆಗಿವೆ. ಲೀಕ್ ಆದ ಚಿತ್ರವೊಂದರಲ್ಲಿ ದರ್ಶನ್ ಫೋಟೊ ಕಟೌಟ್ ಹಾಕಿದ್ದು ಅದರಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಎಂದು ಬರೆದಿದೆ. ಕಟೌಟ್ನಲ್ಲಿ ದರ್ಶನ್ ಕೈಮುಗಿಯುತ್ತಿರುವ ಚಿತ್ರವಿದೆ. ಅದೇ ಕಟೌಟ್ನಲ್ಲಿ ಕರುನಾಡ ಪ್ರಜಾ ಪಕ್ಷ ಎಂಬ ಹೆಸರಿದೆ.
‘ಡೆವಿಲ್’ ಸಿನಿಮಾ ಡಾನ್ ಒಬ್ಬನ ಕತೆಯನ್ನು ಒಳಗೊಂಡಿದೆ ಎಂದು ಟೀಸರ್ ನೋಡಿದವರು ಅಂದುಕೊಂಡಿದ್ದರು. ಆದರೆ ಈಗ ಲೀಕ್ ಆಗಿರುವ ಫೋಟೊ ನೋಡಿದರೆ ಸಿನಿಮಾದಲ್ಲಿ ರಾಜಕೀಯದ ಕತೆಯೂ ಇದ್ದಂತಿದೆ. ಅಥವಾ ಸಮಾಜ ಘಾತುಕ ಶಕ್ತಿ ಆಗಿದ್ದವನೇ ಹಣ ಬಲದಿಂದ ಸಿಎಂ ಆಗುವ ಕತೆ ಇರಬಹುದೇ ಎಂಬ ಅನುಮಾನವೂ ಇದೆ. ಏನೇ ಆಗಲಿ, ಕೊಲೆ ಪ್ರಕರಣದ ಆರೋಪಿ ದರ್ಶನ್, ಸಿನಿಮಾದಲ್ಲಿ ಕರ್ನಾಟಕದ ಸಿಎಂ ಆಗಿದ್ದಾರೆ.
ಇದನ್ನೂ ಓದಿ:ದರ್ಶನ್, ಉಪೇಂದ್ರ, ಸುದೀಪ್ಗೆ ನನ್ನ ನೆನಪಿಲ್ಲ; ಬೇಸರ ಹೊರಹಾಕಿದ್ದ ಬ್ಯಾಂಕ್ ಜನಾರ್ಧನ್
‘ಡೆವಿಲ್’ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುವ ಸಂದರ್ಭದಲ್ಲಿಯೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಆಗಿತ್ತು. ಚಿತ್ರೀಕರಣ ನಿಂತು ಹೋಗಿ ಸುಮಾರು ಒಂಬತ್ತು ತಿಂಗಳ ಬಳಿಕ ಮರು ಪ್ರಾರಂಭ ಆಗಿದ್ದು ಈಗ ಬಲು ವೇಗವಾಗಿ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗಷ್ಟೆ ನಟ ದರ್ಶನ್, ರಾಜಸ್ಥಾನಕ್ಕೆ ಹೋಗಿ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಈಗ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಇದೇ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ