AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್‌ ಇಂದಿರಾ ಬಳಿ ಕ್ಷಮೆ ಕೇಳಿದ ‘ಸ್ಪಾರ್ಕ್‌’ ನಿರ್ದೇಶಕ; ಪೋಸ್ಟರ್‌ ವಿವಾದ ಅಂತ್ಯ

‘ಸ್ಪಾರ್ಕ್‌’ ಸಿನಿಮಾದ ಪೋಸ್ಟರ್ ನೋಡಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಚಿತ್ರತಂಡ ಹಾಗೂ ಪ್ರೇಮ್‌ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಚಿತ್ರತಂಡದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರು. ಅನುಮತಿ ಪಡೆಯದೇ ಫೋಟೋ ಬಳಸಿದ್ದಕ್ಕೆ ರಮೇಶ್‌ ಇಂದಿರಾ ಪರವಾಗಿ ಕಾನೂನು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಈಗ ವಿವಾದ ಅಂತ್ಯವಾಗಿದೆ.

ರಮೇಶ್‌ ಇಂದಿರಾ ಬಳಿ ಕ್ಷಮೆ ಕೇಳಿದ ‘ಸ್ಪಾರ್ಕ್‌’ ನಿರ್ದೇಶಕ; ಪೋಸ್ಟರ್‌ ವಿವಾದ ಅಂತ್ಯ
Nenapirali Prem
ಮದನ್​ ಕುಮಾರ್​
|

Updated on: Apr 19, 2025 | 6:57 PM

Share

ಇತ್ತೀಚೆಗೆ ‘ಸ್ಪಾರ್ಕ್‌’ ಸಿನಿಮಾ (Spark Movie) ಬಗ್ಗೆ ಒಂದು ವಿವಾದ ಶುರುವಾಗಿತ್ತು. ಈಗ ಆ ಕಾಂಟ್ರವರ್ಸಿಗೆ ಪೂರ್ಣವಿರಾಮ ಬಿದ್ದಿದೆ. ನಟ ‘ನೆನಪಿರಲಿ’ ಪ್ರೇಮ್‌ (Nenapirali Prem) ಅವರ ಜನ್ಮದಿನದ ಪ್ರಯುಕ್ತ ‘ಸ್ಪಾರ್ಕ್‌’ ಸಿನಿಮಾ ತಂಡದಿಂದ ಹೊಸ ಪೋಸ್ಟರ್‌ ಅನಾವರಣ ಮಾಡಲಾಗಿತ್ತು. ಈ ಸಿನಿಮಾದಲ್ಲಿ ನಿರಂಜನ್‌ ಸುಧೀಂದ್ರ ಅವರು ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಪ್ರೇಮ್‌ ಅವರು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೊಸ ಪೋಸ್ಟರ್‌ ವಿರುದ್ಧ ನಟಿ, ನಿರ್ಮಾಪಕಿ ಶೃತಿ ನಾಯ್ಡು ಗರಂ ಆಗಿದ್ದರು. ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆ ವಿವಾದಕ್ಕೆ ಈಗ ಫುಲ್ ಸ್ಟಾಪ್ ಬಿದ್ದಿದೆ. ‘ಸ್ಪಾರ್ಕ್‌’ ನಿರ್ದೇಶಕರು ಈಗ ರಮೇಶ್‌ ಇಂದಿರಾ (Ramesh Indira) ಬಳಿ ಕ್ಷಮೆ ಕೇಳಿದ್ದಾರೆ.

ಹೊಸ ಡೈರೆಕ್ಟರ್ ಮಹಾಂತೇಶ್ ಹಂದ್ರಾಳ್ ಅವರು ‘ಸ್ಪಾರ್ಕ್‌’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದು ಇವರಿಗೆ ನಿರ್ದೇಶನದಲ್ಲಿ ಮೊದಲ ಅನುಭವ. ಹೀಗಾಗಿ ಚಿತ್ರತಂಡದಿಂದ ಸಣ್ಣ ತಪ್ಪು ನಡೆದಿದೆ. ಆ ತಪ್ಪನ್ನು ನಿರ್ದೇಶಕ ಮಹಾಂತೇಶ್ ಹಂದ್ರಾಳ್ ತಿದ್ದಿಕೊಂಡಿದ್ದಾರೆ. ‘ರಮೇಶ್‌ ಇಂದಿರಾ ಅವರ ಬಳಿ ಕ್ಷಮೆ ಕೇಳಿದ್ದೇವೆ. ನಿಮ್ಮಿಂದ ಅನುಮತಿ ತೆಗೆದುಕೊಂಡು ಮಾಡಬೇಕಿತ್ತು. ಮ್ಯಾನೇಜರ್‌ ಹೇಳಿದ್ದಾರೆಂದು ಫೋಟೋ ಬಳಸಲಾಗಿದೆ. ಆದರೆ ಅದು ಮಿಸ್‌ ಕಮ್ಯೂನಿಕೇಷನ್‌ ಆಗಿದೆ ಕ್ಷಮಿಸಿ’ ಎಂದು ನಿರ್ದೇಶಕರು ಕೇಳಿಕೊಂಡಿದ್ದಾರೆ. ‘ಹೊಸ ನಿರ್ದೇಶಕರಿಗೆ ಒಳ್ಳೆದಾಗಲಿ. ತೊಂದರೆ ಇಲ್ಲ, ಸಿನಿಮಾ ಮಾಡಿ. ಮೊದಲೇ ನೀವು ಒಮ್ಮೆ ತಿಳಿಸಬೇಕಿತ್ತು. ಆದರೆ ಅದು ನಡೆದು ಹೋಗಿದೆ. ಮುಂದೆ ಇಂಥ ತಪ್ಪು ಆಗದಂತೆ ನೋಡಿಕೊಳ್ಳಿ’ ಅಂತ ರಮೇಶ್‌ ಇಂದಿರಾ ಹೇಳಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.

‘ಸ್ಪಾರ್ಕ್‌’ ಸಿನಿಮಾದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ಸುಧೀಂದ್ರ ಅವರು ಪತ್ರಕರ್ತನ ಪಾತ್ರ ಮಾಡುತ್ತಿದ್ದಾರೆ. ರಚನಾ ಇಂದರ್‌ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಆಕ್ಷನ್-ಥ್ರಿಲ್ಲರ್ ಕಥಾಹಂದರ ಇರುವ ಈ ಸಿನಿಮಾಗೆ ಡಾ. ಗರಿಮಾ ಅವಿನಾಶ್ ವಸಿಷ್ಠ ಅವರು ಬಂಡವಾಳ ಹೂಡಿದ್ದಾರೆ. ಅಶ್ವಿನ್ ಕೆನಡಿ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಅವರು ಸಂಗೀತ‌ ನೀಡುತ್ತಿದ್ದಾರೆ. ಮಧು ಸಂಕಲನ ಅವರ ಈ ಸಿನಿಮಾಗಿದೆ.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಇದನ್ನೂ ಓದಿ: ಪೋಸ್ಟರ್ ವಿವಾದ, ಶ್ರುತಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನೆನಪಿರಲಿ ಪ್ರೇಮ್

ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಅದರ ನಡುವೆ ವಿವಾದ ಕೂಡ ಸೃಷ್ಟಿ ಆಯಿತು. ಪ್ರೇಮ್‌ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ‘ಸ್ಪಾರ್ಕ್’ ಪೋಸ್ಟರ್​ನಲ್ಲಿ ಒಬ್ಬ ರಾಜಕಾರಣಿಯ ಫೋಟೋವನ್ನು ಹಿಡಿದುಕೊಂಡು ಅದಕ್ಕೆ ಸಿಗಾರಿನಿಂದ ಬೆಂಕಿ ಹಚ್ಚುವ ಪೋಸ್ಟರ್ ಅದಾಗಿತ್ತು. ಆ ರಾಜಕಾರಣಿಯ ಫೋಟೋ ರಮೇಶ್ ಇಂದಿರಾ ಅವರದ್ದಾಗಿತ್ತು. ಈ ಪೋಸ್ಟರ್‌ ರಮೇಶ್ ಇಂದಿರಾ ಅವರ ಚಿತ್ರ ‘ಭೀಮಾ’ ಸಿನಿಮಾದ್ದಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.