AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು

DK Shivakumar: ಕರ್ನಾಟಕ ರಾಜ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಚಿತ್ರರಂಗದೊಂದಿಗೆ ಹತ್ತಿರದ ಬಂಧವಿದೆ. ಈ ಹಿಂದೆ ಅವರು ಕೆಲವು ಚಿತ್ರಮಂದಿರಗಳ ಮಾಲೀಕರಾಗಿದ್ದರು. ಊರಿನಲ್ಲಿ ಟೂರಿಂಗ್ ಟಾಕೀಸ್ ಸಹ ನಡೆಸುತ್ತಿದ್ದರು. ಈಗಲೂ ಸಹ ಡಿಕೆ ಶಿವಕುಮಾರ್, 23 ಸಿನಿಮಾ ಸ್ಕ್ರೀನ್​ಗಳ ಮಾಲೀಕ. ಸಿನಿಮಾ ರಂಗದೊಟ್ಟಿಗಿನ ತಮ್ಮ ಬಂಧವನ್ನು ಡಿಕೆ ಶಿವಕುಮಾರ್ ನೆನಪು ಮಾಡಿಕೊಂಡಿದ್ದಾರೆ.

4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Dk Shivakumar1
ಮಂಜುನಾಥ ಸಿ.
|

Updated on: Mar 01, 2025 | 10:03 PM

Share

ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಬಲು ಹತ್ತಿರದ ನಂಟು. ಕೆಲವು ರಾಜಕಾರಣಿಗಳು ಸಿನಿಮಾ ರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಈಗಲೂ ಸಹ ಚಿತ್ರರಂಗದೊಂದಿಗೆ ನಂಟು ಹೊಂದಿದ್ದಾರೆ. ಮಾತ್ರವಲ್ಲದೆ ಡಿಕೆ ಶಿವಕುಮಾರ್ ಅವರಿಗೂ ಚಿತ್ರರಂಗಕ್ಕೂ ಇರುವ ನಂಟು ಬಹಳ ಹಳೆಯದು. ಡಿಕೆ ಶಿವಕುಮಾರ್ ರಾಜಕಾರಣಿ ಆಗುವ ಮುಂಚೆಯೇ ಅವರು ಚಿತ್ರರಂಗದೊಟ್ಟಿಗೆ ನಂಟು ಹೊಂದಿದ್ದರು. ಇಂದು (ಮಾರ್ಚ್ 1) ವಿಧಾನಸೌಧದ ಆವರಣದಲ್ಲಿ ನಡೆದ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಹಳೆಯ ನೆನಪುಗಳನ್ನು ಡಿಕೆ ಶಿವಕುಮಾರ್ ಮೆಲುಕು ಹಾಕಿದರು.

ತಾವು ಸಿನಿಮಾ ಪ್ರದರ್ಶಕನಾಗಿ ಚಿತ್ರರಂಗದೊಟ್ಟಿಗೆ ನಂಟು ಬೆಳೆಸಿಕೊಂಡಿದ್ದಾಗಿ ನೆನಪು ಮಾಡಿಕೊಂಡ ಡಿಕೆ ಶಿವಕುಮಾರ್, ‘ನಾನು ಸಿನಿಮಾ ಪ್ರದರ್ಶಕನಾಗಿದ್ದೆ, ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಚಿತ್ರಮಂದಿರ ಇತ್ತು, ಒಟ್ಟಿಗೆ ನಾಲ್ಕು ಚಿತ್ರಮಂದಿರ ನಡೆಸುತ್ತಿದ್ದೆ, ಟೂರಿಂಗ್ ಟಾಕೀಸ್ ಸಹ ನಡೆಸಿದ್ದೆ. ಆ ನಂತರ ಎಲ್ಲ ಬಿಟ್ಟುಬಿಟ್ಟೆ’ ಎಂದರು ಡಿಕೆ ಶಿವಕುಮಾರ್. ‘ಈಗ 23 ಸಿನಿಮಾ ಸ್ಕ್ರೀನ್​ಗಳು ಇವೆ. ಆದರೆ ಒಂದು ಸ್ಕ್ರೀನ್​ನಲ್ಲೂ ಸಹ ಆರಾಮವಾಗಿ ಕೂತು ಒಂದು ಸಿನಿಮಾ ನೋಡುವಷ್ಟೆ ಸಮಯ ಸಿಗುತ್ತಿಲ್ಲ’ ಎಂದು ಬೇಸರದಿಂದ ನುಡಿದರು.

ಬೇಕಾದಷ್ಟು ರಾಜಕಾರಣಿಳಿಗೆ ಚಿತ್ರರಂಗಕ್ಕೆ ಹತ್ತಿರದ ನಂಟು ಇದೆ. ಎಷ್ಟೋ ಮಂದಿ ರಾಜಕಾರಣಿಗಳು ತಮ್ಮ ಮಕ್ಕಳನ್ನು ಸಿನಿಮಾ ನಟರನ್ನಾಗಿಸಿ ಪ್ರಚಾರ ಕೊಡಿಸಿ ಆ ನಂತರ ರಾಜಕಾರಣಿಗಳನ್ನಾಗಿ ಮಾಡುತ್ತಿದ್ದಾರೆ. ಕೆಲವರು ಯಶಸ್ವಿಯಾಗಿದ್ದಾರೆ, ಕೆಲವರು ವಿಫಲರಾಗಿದ್ದಾರೆ ಎಂದು ಕೆಲ ರಾಜಕಾರಣಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮಾತು ಮುಂದುವರೆಸಿ, ನೀವೆಲ್ಲ ಬಣ್ಣ ಹಾಕಿಕೊಂಡು ನಾಟಕ ಮಾಡುತ್ತೀರಿ, ನಾವು ಬಣ್ಣ ಹಾಕಿಕೊಳ್ಳದೆ ದಿನಾ ಸಿನಿಮಾ ಮಾಡುತ್ತಿದ್ದೀವಿ’ ಎಂದರು ಉಪ ಮುಖ್ಯಮಂತ್ರಿ.

ಇದನ್ನೂ ಓದಿ:‘ನಿಮ್ಮ ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆ ಶಿವಕುಮಾರ್

ತಮ್ಮ ಸಿನಿಮಾ ಪ್ರೇಮದ ಬಗ್ಗೆಯೂ ಮಾತನಾಡಿದ ಡಿಕೆ ಶಿವಕುಮಾರ್, ಡಾ ರಾಜ್​ಕುಮಾರ್ ನಟನೆಯ ‘ಸತ್ಯಹರೀಶ್ಚಂದ್ರ’ ಸಿನಿಮಾವನ್ನು ಹಲವು ಭಾರಿ ನೋಡಿದ್ದಾಗಿ ಹೇಳಿದರು. ‘ನಾನು ಟೂರಿಂಗ್ ಟಾಕೀಸ್ ನಡೆಸುವಾಗ, ಗಾಂಧಿ ನಗರಕ್ಕೆ ಹೋಗಿ ನಾನು ಸಿನಿಮಾ ನೋಡಿಯೇ ಆ ನಂತರ ಡಬ್ಬಾ ತೆಗೆದುಕೊಂಡು ಹೋಗಿ ಊರಿನಲ್ಲಿ ಸಿನಿಮಾ ಹಾಕುತ್ತಿದ್ದೆ. ರಾಜ್​ಕುಮಾರ್ ಅವರ ಸತ್ಯ ಹರೀಶ್ಚಂದ್ರ ಸಿನಿಮಾವನ್ನು 14-15 ಬಾರಿ ನೋಡಿದ್ದೀನಿ. ಮದುವೆ ಆದ ಮೇಲೆ ಮೈಸೂರಿಗೆ ಹೆಂಡತಿಯನ್ನು ಕರೆದುಕೊಂಡು ಹೋಗಿ ‘ಸತ್ಯ ಹರೀಶ್ಚಂದ್ರ’ ಸಿನಿಮಾ ತೋರಿಸಿದ್ದೆ’ ಎಂದು ಡಿಕೆಶಿ ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಮತ್ತೊಬ್ಬರ ಏಳಿಗೆಯನ್ನು ನೋಡಿ ಅಸೂಯೆ ಪಟ್ಟರೆ ಏನಾಗುತ್ತೆ?
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇಂದು ಈ ರಾಶಿಯವರಿಗೆ ಸಣ್ಣ ಪುಣ್ಣ ಆರೋಗ್ಯ ಸಮಸ್ಯೆ ಕಾಡಬಹುದು!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಇದ್ದಕ್ಕಿದ್ದಂತೆ ಹೈವೇಗೆ ಹಾರಿದ ಹಸು; ಕಾರಿನ ಸ್ಥಿತಿ ಏನಾಯ್ತು ನೋಡಿ!
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್