ಚಾಕು ಇರಿತ ಪ್ರಕರಣ ನಡೆದ ಮೂರೇ ತಿಂಗಳಿಗೆ ಹೊಸ ಮನೆ ಖರೀದಿಸಿದ ಸೈಫ್ ಅಲಿ ಖಾನ್
ಮುಂಬೈನಲ್ಲಿ ಚಾಕು ಇರಿತದ ಘಟನೆ ನಡೆದ ಮೂರು ತಿಂಗಳ ನಂತರ, ನಟ ಸೈಫ್ ಅಲಿ ಖಾನ್ ಖತಾರ್‌ನ ಸೇಂಟ್ ರೆಗಿಸ್ ಮಾರ್ಸಾ ಅರೇಬಿಯನ್ ಐಸ್ಲ್ಯಾಂಡ್‌ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಸುರಕ್ಷತೆ ಮತ್ತು ರಜಾ ದಿನಗಳಲ್ಲಿ ವಾಸಿಸಲು ಸ್ಥಳವನ್ನು ಹೊಂದುವ ಆಸೆ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಈ ಖರೀದಿಯು ಅವರ ಹೆಚ್ಚುತ್ತಿರುವ ಪ್ರವಾಸದ ಆಸಕ್ತಿಯನ್ನು ಸಹ ಸೂಚಿಸುತ್ತದೆ.

ಸೈಫ್ ಅಲಿ ಖಾನ್ (Saif Ali Khan) ಅವರು ಪ್ರಾಪರ್ಟಿಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ. ಅವರ ಪೂರ್ವಜರ ಪಟೌಡಿ ಪ್ಯಾಲೇಸ್ ಹಾಗೂ ಬಾಂದ್ರಾ ಅಪಾರ್ಟ್ಮೆಂಟ್ ಅವರ ದುಬಾರಿ ಹೂಡಿಕೆಗಳಲ್ಲಿ ಒಂದು. ಇದೇ ಬಾಂದ್ರಾ ಅಪಾರ್ಟ್ಮೆಂಟ್ನಲ್ಲಿ ಇದ್ದಾಗ ಅವರ ಮೇಲೆ ಚಾಕು ಇರಿತ ಪ್ರಕರಣ ನಡೆದಿತ್ತು. ಈಗ ಈ ಘಟನೆ ನಡೆದ ಮೂರು ತಿಂಗಳ ಬಳಿಕ ಸೈಫ್ ಅಲಿ ಖಾನ್ ಅವರು ಹೊಸ ಮನೆ ಖರೀದಿ ಮಾಡಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಹಾಗಾದರೆ ಸೈಫ್ ಅಲಿ ಖಾನ್ ಅವರು ಮನೆ ಖರೀದಿಸಿದ್ದು ಮುಂಬೈನಲ್ಲಾ? ಅಲ್ಲ. ಅವರು ಐಷಾರಾಮಿ ಮನೆ ಖರೀದಿ ಮಾಡಿರೋದು ಖತಾರ್ನಲ್ಲಿ. ಸೇಂಟ್ ರೆಗಿಸ್ ಮಾರ್ಸಾ ಅರೇಬಿಯನ್ ಐಸ್ಲ್ಯಾಂಡ್‌ನಲ್ಲಿ ಅವರು ಮನೆ ಖರೀದಿ ಮಾಡಿದ್ದಾರೆ. ದ್ವೀಪ ಪ್ರದೇಶ ಇದಾಗಿದೆ.
ಸೈಫ್ ಅಲಿ ಖಾನ್ ಅವರು ಚಿತ್ರರಂಗದಿಂದ ಬಿಡುವು ಪಡೆದು ವರ್ಷಕ್ಕೆ 2-3 ಬಾರಿ ಆದರೂ ಪ್ರವಾಸ ತೆರಳುತ್ತಾರೆ. ಅವರು ಖತಾರ್ಗೂ ಆಗಾಗ ಭೇಟಿ ನೀಡುತ್ತಾರೆ. ಈಗ ಅವರು ಇಲ್ಲಿ ಮನೆ ಖರೀದಿ ಮಾಡಿದ್ದಾರೆ. ಪ್ರವಾಸಕ್ಕೆ ತೆರಳಲು ಹಾಗೂ ಹೂಡಿಕೆ ಉದ್ದೇಶವು ಈ ಖರೀದಿಯ ಹಿಂದಿದೆ.
‘ರಜೆಯ ಸಂದರ್ಭದಲ್ಲಿ ಹೋಗಲು ಅಥವಾ ಎರಡನೇ ಮನೆಯ ಬಗ್ಗೆ ಯೋಚಿಸಿ ನಾನು ಇಲ್ಲಿ ಮನೆ ಖರೀದಿ ಮಾಡಿದ್ದೇನೆ. ಇದು ತುಂಬಾ ದೂರ ಏನೂ ಇಲ್ಲ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದು ತುಂಬಾ ಸುರಕ್ಷಿತವಾಗಿದೆ ಮತ್ತು ಅಲ್ಲಿ ಸಮಯ ಸಿಕ್ಕಾಗ ಇರೋದು ತುಂಬಾನೇ ಒಳ್ಳೆಯದು’ ಎಂದು ಸೈಫ್ ಹೇಳಿದ್ದಾರೆ.
ಚಾಕು ಇರಿತ ಪ್ರಕರಣದ ಬಳಿಕ ಸೈಫ್ ಅಲಿ ಖಾನ್ ಅವರು ಎಚ್ಚೆತ್ತುಕೊಂಡಿದ್ದಾರೆ. ವಿದೇಶದಲ್ಲಿ ಹೋಗಿ ತಂಗಲು ಹೋಟೆಲ್ಗಳ ಬದಲು ತಮ್ಮದೇ ಮನೆ ಇದ್ದರೆ ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕಾರಣದಿಂದಲೇ ಅವರು ಈ ಮನೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಮೇಲೆ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು, ಮಹತ್ವದ ಅಂಶ ಬಹಿರಂಗ
ಜನವರಿಯಲ್ಲಿ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ಇರಿತ ಪ್ರಕರಣ ನಡೆಯಿತು. ಇದರಿಂದ ಅವರು ಸಾಕಷ್ಟು ಭಯಗೊಂಡಿದ್ದಾರೆ. ಅವರ ಬೆನ್ನಿನ ಭಾಗಕ್ಕೆ ಈಗಾಗಲೇ ಸರ್ಜರಿ ಮಾಡಲಾಗಿದೆ. ಸದ್ಯ ಅವರು ಮರಳಿ ಶೂಟಿಂಗ್ಗೆ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.