ಇದೇ ವರ್ಷ ಪ್ರಾರಂಭವಾಗಲಿದೆ ‘ಮಹಾಭಾರತ’: ನಿರ್ದೇಶಕ ರಾಜಮೌಳಿ ಅಲ್ಲ, ಮತ್ಯಾರು?
Mahabharat: ಮಹಾಭಾರತದ ಕತೆ ಆಧರಿಸಿ ಹಲವು ಸಿನಿಮಾಗಳು ಹಲವು ಭಾಷೆಗಳಲ್ಲಿ ಬಂದಿವೆ. ಆದರೆ ಇಡೀ ಕತೆ ಒಟ್ಟಿಗೆ ಸಿನಿಮಾ ಆಗಿ ತೆರೆಗೆ ಬಂದಿದ್ದಿಲ್ಲ. ‘ಮಹಾಭಾರತ’ ಕತೆಯನ್ನು ಸಿನಿಮಾ ಮಾಡುವುದಾಗಿ ಈ ಹಿಂದೆ ರಾಜಮೌಳಿ ಹೇಳಿದ್ದರು. ಆದರೆ ಇದೀಗ ಸ್ಟಾರ್ ನಟರೊಬ್ಬರು ‘ಮಹಾಭಾರತ’ ಸಿನಿಮಾ ಇದೇ ವರ್ಷ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ.

ಮಹಾಭಾರತ (Mahabarat) ಕತೆಯನ್ನು ಸಿನಿಮಾ (Cinema) ಮಾಡುವುದು ಭಾರತದ ಹಲವು ಟಾಪ್ ನಿರ್ದೇಶಕರ ಕನಸು. ‘ಮಹಾಭಾರತ’ ಕತೆಯ ಆಧಾರದ ಮೇಲೆ ಹಲವು ಭಾಷೆಗಳಲ್ಲಿ ಸಿನಿಮಾಗಳು ಬಂದಿವೆ. ಆದರೆ ಇಡೀ ‘ಮಹಾಭಾರತ’ವನ್ನು ಸಿನಿಮಾ ಆಗಿ ಯಾರಿಗೂ ತೆರೆಯ ಮೇಲೆ ತರಲು ಸಾಧ್ಯವಾಗಿಲ್ಲ. ಪೌರಾಣಿಕ ಕತೆಗಳನ್ನು ತೆರೆಯ ಮೇಲೆ ತರುವ ಪ್ರತಿಭೆ, ಧೈರ್ಯ ಇರುವ ಏಕೈಕ ನಿರ್ದೇಶಕ ರಾಜಮೌಳಿಗೂ ಸಹ ಈ ವರೆಗೆ ಮಹಾಭಾರತ ಯೋಜನೆಯಾಗಿಯೇ ಉಳಿದಿದೆ. ಆದರೆ ಇದೀಗ ಸ್ಟಾರ್ ನಟರೊಬ್ಬರು ‘ಮಹಾಭಾರತ’ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಇದೇ ವರ್ಷ ಸಿನಿಮಾ ಪ್ರಾರಂಭ ಆಗಲಿದೆ. ಆದರೆ ನಿರ್ದೇಶಕ ರಾಜಮೌಳಿ ಅಲ್ಲ.
‘ಮಹಾಭಾರತ’ ಕತೆಯನ್ನು ಸಿನಿಮಾ ಮಾಡಬೇಕು ಎಂಬುದು ನಟ ಆಮಿರ್ ಖಾನ್ ಅವರ ಜೀವಮಾನದ ಆಸೆಯಂತೆ. ಈ ಹಿಂದೆಯೂ ಹಲವು ಬಾರಿ ಈ ಬಗ್ಗೆ ಮಾತನಾಡಿದ್ದಿದೆ. ಒಮ್ಮೆಯಂತೂ ಮಣಿರತ್ನಂ ನಿರ್ದೇಶನದಲ್ಲಿ ಮಹಾಭಾರತ ಕತೆ ಸಿನಿಮಾ ಆಗಲಿದೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಆದರೆ ಅದು ಸುದ್ದಿಯಾಗಿಯೇ ಉಳಿಯಿತು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಮಿರ್ ಖಾನ್, ತಾವು ಇದೇ ವರ್ಷ ಮಹಾಭಾರತ ಸಿನಿಮಾ ಪ್ರಾರಂಭ ಮಾಡಲಿರುವುದಾಗಿ ಹೇಳಿದ್ದಾರೆ.
‘ಮಹಾಭಾರತ ಸಿನಿಮಾ ಮಾಡುವುದು ನನ್ನ ಜೀವಮಾನದ ಕನಸು. ಪ್ರಯತ್ನಗಳು ತೆರೆ ಮರೆಯಲ್ಲಿ ನಡೆಯುತ್ತಲೇ ಇದ್ದವು. ಕೊನೆಗೆ ಇದೇ ವರ್ಷ ಸಿನಿಮಾ ಪ್ರಾರಂಭ ಆಗುವ ಸಾಧ್ಯತೆ ಇದೆ. ಸಿನಿಮಾದ ನಟರು, ತಂತ್ರಜ್ಞರ ಘೋಷಣೆ ಸಮಯ ಕಳೆದಂತೆ ಆಗಲಿದೆ’ ಎಂದಿದ್ದಾರೆ. ಅಲ್ಲದೆ ಈ ಸಿನಿಮಾ ಹಲವು ಪಾರ್ಟ್ಗಳಲ್ಲಿ ಬರಲಿದೆ ಎಂದು ಸಹ ಹೇಳಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ರನ್ನು ಮಹಾಭಾರತದ ಪಾತ್ರಕ್ಕೆ ಹೋಲಿಸಿದ ಉಪೇಂದ್ರ
‘ನನಗೆ ಕತೆಗಳೆಂದರೆ ಪ್ರಾಣ, ನನಗೆ ಕತೆಗಳ ಮೇಲೆ ನಂಬಿಕೆ ಇದೆ. ಜನರ ಹೃದಯಗಳನ್ನು ತಟ್ಟುವಂಥಹಾ ಕತೆಗಳನ್ನು ಹೇಳುವುದನ್ನು ನಾನು ಮುಂದುವರೆಸಲಿದ್ದೇನೆ. ನನ್ನ ಜೀವಮಾನದ ಆಸೆಗಳಲ್ಲಿ ಮಹಾಭಾರತ ಕತೆಯನ್ನು ಸಿನಿಮಾ ರೂಪದಲ್ಲಿ ಹೇಳುವುದು ಒಂದು. ಆ ಬಗ್ಗೆ ಕೆಲಸ ಚಾಲ್ತಿಯಲ್ಲಿದ್ದು, ಇದೇ ವರ್ಷ ಪ್ರಾರಂಭ ಆಗುವ ಸಾಧ್ಯತೆ ಇದೆ. ಇದು ಸುಲಭದ ಕೆಲಸವಲ್ಲ, ಬರವಣಿಗೆ ಕೆಲಸವೇ ಕೆಲವು ವರ್ಷಗಳ ಕಾಲ ನಡೆಯಲಿದೆ’ ಎಂದಿದ್ದಾರೆ ಆಮಿರ್ ಖಾನ್.
‘ಮಹಾಭಾರತ ಕತೆಯನ್ನು ಒಂದು ಭಾಗದಲ್ಲಿ ಹೇಳಲು ಸಾಧ್ಯವೇ ಇಲ್ಲ. ಹಲವು ಪಾರ್ಟ್ಗಳಲ್ಲಿಯೇ ನಾವು ಸಿನಿಮಾ ಮಾಡಬೇಕಿರುತ್ತದೆ. ಅದು ಮಾತ್ರವೇ ಅಲ್ಲದೆ, ಸಿನಿಮಾಕ್ಕೆ ಹಲವು ನಿರ್ದೇಶಕರನ್ನು ಒಟ್ಟಿಗೆ ಕೆಲಸ ಮಾಡಿಸುವ ಯೋಜನೆಯೂ ಇದೆ. ಇಂಗ್ಲೀಷ್ನ ಲಾರ್ಡ್ ಆಫ್ ದಿ ರಿಂಗ್ಸ್ ರೀತಿ ಒಂದೇ ಬಾರಿಗೆ ಹಲವು ಪಾರ್ಟ್ಗಳ ಚಿತ್ರೀಕರಣ ಮಾಡಿ ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುವುದು ಸೂಕ್ತ. ಒಂದು ಮುಗಿದ ಬಳಿಕ ಇನ್ನೊಂದು ಶುರು ಮಾಡಿದರೆ ಬಹಳ ಸಮಯ ಹಿಡಿಯಲಿದೆ. ಸಿನಿಮಾದ ಪಾತ್ರವರ್ಗವನ್ನು ಇನ್ನೂ ಆಯ್ಕೆ ಮಾಡಬೇಕಿದೆ. ನಾನು ನಿರ್ಮಾಪಕನ ರೀತಿಯೇ ಯೋಚಿಸಿ ಸಿನಿಮಾ ಮಾಡಲಿದ್ದೇನೆ’ ಎಂದಿದ್ದಾರೆ ಆಮಿರ್ ಖಾನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ