ನಿರ್ಮಾಪಕರೊಟ್ಟಿಗೆ ಜಗಳ, ಜೂ ಎನ್ಟಿಆರ್ ಸಿನಿಮಾದಿಂದ ಹೊರಬಂದ ಡ್ಯೂಪ್
Jr NTR: ಸಿನಿಮಾಗಳಲ್ಲಿ ಬಾಡಿ ಡಬಲ್ ಅಥವಾ ಡ್ಯೂಪ್ಗಳು ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಆಕ್ಷನ್ ಸಿನಿಮಾಗಳಲ್ಲಿ ಡ್ಯೂಪ್ಗಳು ಇಲ್ಲದಿದ್ದರೆ ಕತೆ ಮುಗಿದಂತೆ. ಇತ್ತೀಚೆಗೆ ಭಾರತದ ಎಲ್ಲ ಸ್ಟಾರ್ ನಟರಿಗೂ ಅವರದ್ದೇ ಆದ ಬಾಡಿ ಡಬಲ್ ಇದ್ದಾರೆ. ಆದರೆ ಜೂ ಎನ್ಟಿಆರ್ ಅವರ ಬಾಡಿ ಡಬಲ್ ಅವರಿಂದ ದೂರಾಗಿದ್ದಾರೆ ಎನ್ನಲಾಗುತ್ತಿದೆ. ಕಾರಣ?

ಸ್ಟಾರ್ ನಟರುಗಳಿಗೆ ಡ್ಯೂಪ್ಗಳು ಇರುವುದು ಸಹಜ. ಆಕ್ಷನ್ ಸೀನ್ಗಳನ್ನು ನಟರ ಬದಲಿಗೆ ಡ್ಯೂಪ್ಗಳು (Dupe) ಮಾಡುತ್ತಾರೆ, ನಟರು ಕೇವಲ ಫೋಸು ಕೊಡುತ್ತಾರೆ. ಸಿನಿಮಾ ನಿರ್ಮಾಣದಲ್ಲಿ ವಿಶೇಷವಾಗಿ ಆಕ್ಷನ್ ಸೀನ್ ಶೂಟಿಂಗ್ ವೇಳೆ ಡ್ಯೂಪ್ಗಳ ಅಗತ್ಯತೆ ಬಹಳ ಇರುತ್ತದೆ. ಭಾರತದ ಬಹುತೇಕ ಸ್ಟಾರ್ ನಟರಿಗೆ ಅವರದ್ದೇ ಆದ ಖಾಸಗಿ ಡ್ಯೂಪ್ಗಳಿದ್ದಾರೆ. ಈ ಡ್ಯೂಪ್ಗಳು ತಮ್ಮ ನಟರ ಹೊರತಾಗಿ ಇತರರಿಗೆ ಡ್ಯೂಪ್ ಮಾಡುವುದಿಲ್ಲ. ನಟರ ದೇಹದ ಆಕಾರ, ಹೈಟ್, ಮುಖಚಹರೆ ಬಹುತೇಕ ಹೊಂದುವವರನ್ನೇ ಡ್ಯೂಪ್ಗಳನ್ನಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಈ ಡ್ಯೂಪ್ಗಳು ಹೊರಗೆ ಕಾಣಿಸಿಕೊಳ್ಳುವುದಿಲ್ಲ. ನಟ ಜೂ ಎನ್ಟಿಆರ್ಗೂ (Jr NTR) ಸಹ ಒಬ್ಬ ಡ್ಯೂಪ್ ಇದ್ದಾರೆ. ಆದರೆ ಇದೀಗ ಈ ಡ್ಯೂಪ್, ಜೂ ಎನ್ಟಿಆರ್ ಇಂದ ದೂರಾಗಿದ್ದಾರೆ ಎನ್ನಲಾಗುತ್ತಿದೆ.
ಜೂ ಎನ್ಟಿಆರ್ ಅವರ ಡ್ಯೂಪ್ ಅಥವಾ ಬಾಡಿ ಡಬಲ್ ಹೆಸರು ಈಶ್ವರ್ ಹ್ಯಾರಿಸ್. ಹಲವು ವರ್ಷಗಳಿಂದಲೂ ಇವರು ಜೂ ಎನ್ಟಿಆರ್ ಅವರ ಡ್ಯೂಪ್ ಕೆಲಸ ಮಾಡುತ್ತಿದ್ದಾರೆ. ಜೂ ಎನ್ಟಿಆರ್ಗೆ ಮಾಡಲಾಗದ ಅಥವಾ ರಿಸ್ಕಿ ಆಗಿರುವ ಸ್ಟಂಟ್ಗಳನ್ನು ಈಶ್ವರ್ ಹ್ಯಾರಿಸ್ ಮಾಡುತ್ತಾರೆ. ‘RRR’ ಸಿನಿಮಾದಲ್ಲಿಯೂ ಸಹ ಈಶ್ವರ್ ಹ್ಯಾರಿಸ್ ಡ್ಯೂಪ್ ಮಾಡಿದ್ದಾರೆ. ಆದರೆ ಇದೀಗ ನಿರ್ಮಾಪಕರೊಬ್ಬರ ಕಾರಣದಿಂದಾಗಿ ಜೂ ಎನ್ಟಿಆರ್ ಅವರ ಹೊಸ ಸಿನಿಮಾಕ್ಕೆ ಅವರು ಕೆಲಸ ಮಾಡಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಈಶ್ವರ್ ಹ್ಯಾರಿಸ್, ‘ನನಗೆ ‘ವಾರ್ 2’ ಸಿನಿಮಾದಲ್ಲಿ ಕೆಲಸ ಮಾಡಲು ಕರೆ ಬಂತು. ಹೃತಿಕ್ ರೋಷನ್ ಎದುರು ಜೂ ಎನ್ಟಿಆರ್ ಬಹಳ ತೆಳ್ಳಗೆ ಕಾಣುತ್ತಿದ್ದಾರೆ ಎಂಬ ಕಾರಣಕ್ಕೆ ನನ್ನನ್ನು ಕರೆದಿದ್ದರು. ಆದರೆ ಅವರು ಕೊಡುತ್ತಿದ್ದ ಹಣ ಬಹಳ ಕಡಿಮೆ ಇತ್ತು. ಅಲ್ಲದೆ ಇಲ್ಲಿಂದ ಮುಂಬೈಗೆ ಹೋಗುವ ಖರ್ಚನ್ನು ಅವರು ಕೊಡುವುದಿಲ್ಲ ಎಂದರು. ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನೂ ಮಾಡುವುದಿಲ್ಲ ಎಂದರು. ಸಂಭಾವನೆ ಕಡಿಮೆ ಆದ ಕಾರಣಕ್ಕೆ ನಾನು ‘ವಾರ್ 2’ ಸಿನಿಮಾಕ್ಕೆ ಕೆಲಸ ಮಾಡಲಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ:ಮುಂದಿನ ಮೂರು ಹೊಸ ಸಿನಿಮಾಗಳ ಬಗ್ಗೆ ಸುಳಿವು ಕೊಟ್ಟ ಜೂ ಎನ್ಟಿಆರ್
‘ವಾರ್ 2’ ಸಿನಿಮಾ ಆಕ್ಷನ್ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದಲ್ಲಿ ಆಕ್ಷನ್ ಜೊತೆಗೆ ಡ್ಯಾನ್ಸ್ ಸಹ ಇದೆ. ಸಿನಿಮಾದ ಬಿಡುಗಡೆ ಆಗಸ್ಟ್ 14ಕ್ಕೆ ಆಗಲಿದೆ. ಇದರ ನಿರ್ದೇಶನವನ್ನು ಅಯಾನ್ ಮುಖರ್ಜಿ ಮಾಡುತ್ತಿದ್ದಾರೆ. ‘ವಾರ್ 2’ ಮುಗಿಸಿರುವ ನಟ ಜೂ ಎನ್ಟಿಆರ್, ಮಂಗಳೂರಿಗೆ ಬಂದಿದ್ದು ಇಲ್ಲಿ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಶೂಟಿಂಗ್ನಲ್ಲಿ ಭಾಗಿ ಆಗುತ್ತಿದ್ದಾರೆ. ಈ ಸಿನಿಮಾದ ಬಳಿಕ ‘ದೇವರ 2’ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ. ಅದರ ಬಳಿಕ ತಮಿಳಿನ ನಿರ್ದೇಶಕರ ಸಿನಿಮಾದಲ್ಲಿ ಜೂ ಎನ್ಟಿಆರ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




