ಮುಂದಿನ ಮೂರು ಹೊಸ ಸಿನಿಮಾಗಳ ಬಗ್ಗೆ ಸುಳಿವು ಕೊಟ್ಟ ಜೂ ಎನ್ಟಿಆರ್
Jr NTR movies: ಜೂ ಎನ್ಟಿಆರ್ ಪ್ರಸ್ತುತ ‘ವಾರ್ 2’ ಸಿನಿಮಾ ಮುಗಿಸಿ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾ ಶೂಟಿಂಗ್ ಪ್ರಾರಂಭಿಸಿದ್ದಾರೆ. ಇವುಗಳ ಜೊತೆಗೆ ಅವರು ನಟಿಸಲಿರುವ ಮುಂದಿನ ಕೆಲ ಸಿನಿಮಾಗಳ ಬಗ್ಗೆಯೂ ಗುಟ್ಟು ರಟ್ಟು ಮಾಡಿದ್ದಾರೆ. ಆಸಕ್ತಿಕರ ಲೈನ್ ಅಪ್ ಅನ್ನು ಇಟ್ಟುಕೊಂಡಿದ್ದಾರೆ ಜೂ ಎನ್ಟಿಆರ್.

ನಟ ಜೂ ಎನ್ಟಿಆರ್ (Jr NTR), ಜಪಾನ್ (Japan) ಇಂದ ವಾಪಸ್ಸಾಗಿದ್ದಾರೆ. ಸುಮಾರು ಎರಡು ವಾರಗಳ ಕಾಲ ಜಪಾನ್ ಪ್ರವಾಸದಲ್ಲಿದ್ದ ಜೂ ಎನ್ಟಿಆರ್ ಅಲ್ಲಿ ತಮ್ಮ ‘ದೇವರ’ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಜಪಾನ್ನಲ್ಲಿ ಭಾರಿ ಜನಪ್ರೀತಿ ಅವರಿಗೆ ಲಭಿಸಿತು. ಹೈದರಾಬಾದ್ಗೆ ಮರಳುತ್ತಿದ್ದಂತೆ ಮತ್ತೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿರುವ ಜೂ ಎನ್ಟಿಆರ್, ಇತ್ತೀಚೆಗೆ ಬಿಡುಗಡೆ ಆದ ‘ಮ್ಯಾಡ್ ಸ್ಕ್ವೇರ್’ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಸಮಯ ತಮ್ಮ ಮುಂದಿನ ಎರಡು ಸಿನಿಮಾಗಳ ಬಗ್ಗೆ ಅವರು ಸುಳಿವು ನೀಡಿದರು.
ಹಾಸ್ಯ ಪ್ರಧಾನವಾದ ಸಿನಿಮಾಗಳು ತಮ್ಮ ಫೇವರೇಟ್ ಎಂದ ಜೂ ಎನ್ಟಿಆರ್, ‘ತೆರೆ ಮೇಲೆ ಹಾಸ್ಯ ಮಾಡುವುದು ಬಹಳ ಕಷ್ಟದ ಕೆಲಸ. ಇದೇ ಕಾರಣಕ್ಕೆ ನಾನು ‘ಅದುರ್ಸ್ 2’ ಮಾಡಲು ಹಿಂದೇಟು ಹಾಕುತ್ತಿದ್ದೀನಿ. ಆದರೆ ಎಂದಾದರೂ ಅದನ್ನು ಮಾಡುವ ಆಸೆಯೂ ಇದೆ’ ಎಂದಿದ್ದಾರೆ. ‘ಅದುರ್ಸ್’ ಜೂ ಎನ್ಟಿಆರ್ ಮಾಡಿದ್ದ ಹಾಸ್ಯ ಪ್ರಧಾನ ಆಕ್ಷನ್ ಸಿನಿಮಾ ಆಗಿತ್ತು. ಆ ಸಿನಿಮಾದಲ್ಲಿ ಜೂ ಎನ್ಟಿಆರ್ ಅವರು ಬ್ರಾಹ್ಮಣ ಯುವಕನಾಗಿ ನೀಡಿದ್ದ ನಟನೆ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಜಮೌಳಿಗೆ ಜೂ ಎನ್ಟಿಆರ್ ಅವರ ಮೆಚ್ಚಿನ ಸಿನಿಮಾ ಎಂದರೆ ಅದು ‘ಅದುರ್ಸ್’.
‘ಮ್ಯಾಡ್ ಸ್ಕೇರ್’ ಸಿನಿಮಾದ ನಿರ್ಮಾಪಕ ನಾಗವಂಶಿ ಜೊತೆಗೂ ಒಂದು ಸಿನಿಮಾ ಮಾಡಲಿಕ್ಕಿದೆ. ಆದಷ್ಟು ಬೇಗವೇ ಆ ಸಿನಿಮಾ ಸೆಟ್ಟೇರಲಿದೆ ಎಂದು ಅದೇ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದರು ಜೂ ಎನ್ಟಿಆರ್. ‘ನನ್ನ ಅಭಿಮಾನಿಗಳನ್ನು ಸಂಭಾಳಿಸುವ ಜವಾಬ್ದಾರಿಯನ್ನು ಯುವ ನಿರ್ಮಾಪಕ ನಾಗ ವಂಶಿಗೆ ನಾನು ಬಿಟ್ಟು ಬಿಡುತ್ತೇನೆ’ ಎಂದು ಜೂ ಎನ್ಟಿಆರ್ ಹೇಳಿದ್ದಾರೆ. ‘ದೇವರ 2’ ಸಿನಿಮಾ ಸಹ ಶೀಘ್ರವೇ ಪ್ರಾರಂಭ ಆಗಲಿರುವ ಬಗ್ಗೆಯೂ ಅವರು ಹೇಳಿದ್ದಾರೆ. ಇದರ ಜೊತೆಗೆ ತಮಿಳಿನ ನಿರ್ದೇಶಕ ನೆಲ್ಸನ್ ನಿರ್ದೇಶಿಸಲಿರುವ ಸಿನಿಮಾದಲ್ಲಿಯೂ ನಟಿಸುತ್ತಿರುವುದಾಗಿ ಜೂ ಎನ್ಟಿಆರ್ ಹೇಳಿದ್ದಾರೆ.
ಇದನ್ನೂ ಓದಿ:ದೊಡ್ಡ ಸಿಗ್ನಲ್ ಕೊಟ್ಟ ಜೂ ಎನ್ಟಿಆರ್ ಅಣ್ಣ, ಎಲ್ಲವೂ ಸರಿಹೋಯ್ತಾ?
‘ಮ್ಯಾಡ್ ಸ್ಕೇರ್’ ಸಿನಿಮಾ ಅನ್ನು ಬಹುವಾಗಿ ಮೆಚ್ಚಿಕೊಂಡಿರುವುದಾಗಿ ಹೇಳಿದ ಜೂ ಎನ್ಟಿಆರ್. ಸಿನಿಮಾದಲ್ಲಿ ನಟಿಸಿರುವ ಎಲ್ಲರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೂ ಎನ್ಟಿಆರ್ ಅವರ ಪತ್ನಿಯ ಸಹೋದರ ಸಂಬಂಧಿ ನಾರ್ನೆ ನಿತಿನ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಜೂ ಎನ್ಟಿಆರ್, ‘ಮೊದಲಿನಿಂದಲೂ ಆತ ನನ್ನೊಟ್ಟಿಗೆ ಹೆಚ್ಚು ಮಾತನಾಡಲಿಲ್ಲ, ಆದರೆ ಮಾತನಾಡಿದ್ದು, ಆತ ನಟ ಆಗಬೇಕು ಎಂದು ಡಿಸೈಡ್ ಮಾಡಿದಾಗ ಮಾತ್ರ, ಆದರೆ ನಾನು ಆಗಲೇ ಹೇಳಿಬಿಟ್ಟಿದ್ದೆ, ನನ್ನಿಂದ ಯಾವ ಸಹಾಯವನ್ನೂ ನಿರೀಕ್ಷಿಸಬೇಡ ಸ್ವಂತವಾಗಿ ಬೆಳಿ ಎಂದು, ಹಾಗೆಯೇ ಮಾಡಿದ್ದಾನೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Sat, 5 April 25