ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್ನಿಂದ ಬರ್ತಿರೋ ಹಣ ಎಷ್ಟು? ರಿವೀಲ್ ಮಾಡಿದ ರಾಮ್
ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನೆಲ್ ಬಗ್ಗೆ ಅನೇಕರಿಗೆ ತಿಳಿದಿದೆ. ಮಹಾಬಲ ರಾಮ್ ಅವರು ಇದನ್ನು ನಡೆಸುತ್ತಿದ್ದಾರೆ. ಅವರಿಗೆ ಯೂಟ್ಯೂಬ್ನಿಂದ ಎಷ್ಟು ಹಣ ಬರುತ್ತಿದೆ? ಈ ಪ್ರಶ್ನೆಗೆ ಅವರ ಕಡೆಯಿಂದಲೇ ಉತ್ತರ ಬಂದಿದೆ. ಅವರು ಒಂದು ಅಚ್ಚರಿಯ ಸಂಖ್ಯೆಯನ್ನು ರಿವೀಲ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಯೂಟ್ಯೂಬ್ ಮಾಡಿದರೆ ಸಾಕಷ್ಟು ಹಣ ಬರುತ್ತದೆ ಅನ್ನೋದು ಅನೇಕರ ನಂಬಿಕೆ. ಆದರೆ, ಇದಕ್ಕೆ ಸಾಕಷ್ಟು ಬದ್ಧತೆ ಬೇಕು. ಬಂದಂತೆ ಸ್ವೀಕರಿಸಿ ನಡೆಯುವ ತಾಕತ್ತು ಬೇಕು. ಗ್ಲೋಬಲ್ ಕನ್ನಡಿಗ (Global Kannadiga) ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿರೋ ಮಹಾಬಲ ರಾಮ್ ಅವರು ಈಗ ತಮ್ಮ ಯೂಟ್ಯೂಬ್ ಗಳಿಕೆ ಬಗ್ಗೆ ಮಾತನಾಡಿದ್ದಾರೆ. ಪಾಕಿಸ್ತಾನ ರೀತಿಯ ದೇಷಗಳನ್ನು ಅನ್ವೇಷಿಸಿದ ಅವರು, ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ‘ಟ್ರಾವೆಲ್ ವ್ಲಾಗ್ ಅತ್ಯಂತ ಕಷ್ಟ ಮತ್ತು ದುಬಾರಿ. ನನ್ನ ಗಳಿಕೆಗಿಂತ ಖರ್ಚು ಹೆಚ್ಚಿದೆ’ ಎಂದು ಅವರು ರಿವೀಲ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Apr 05, 2025 12:44 PM
Latest Videos