AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸರ್, ಈ ಬಸ್ ದುಬೈಗೆ ಹೋಗುತ್ತಾ? ಇಲ್ಲ ಇದು ಮೆಜೆಸ್ಟಿಕ್ ಮಾತ್ರ

Video: ಸರ್, ಈ ಬಸ್ ದುಬೈಗೆ ಹೋಗುತ್ತಾ? ಇಲ್ಲ ಇದು ಮೆಜೆಸ್ಟಿಕ್ ಮಾತ್ರ

ಅಕ್ಷಯ್​ ಪಲ್ಲಮಜಲು​​
|

Updated on:Mar 05, 2026 | 11:57 AM

Share

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ದುಬೈಗೆ ಬಸ್ ಹೋಗುತ್ತಾ ಎಂದು ಯುವತಿಯೊಬ್ಬಳು ಕೇಳಿದ ವಿಡಿಯೋ ವೈರಲ್ ಆಗಿದೆ. ಈ ತಮಾಷೆಯ ಸಂಭಾಷಣೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ನಗು ಹರಿಸಿದೆ. ಪ್ರಯಾಣಿಕರ ಪ್ರಶ್ನೆಗೆ ಕಂಡಕ್ಟರ್ ಗೊಂದಲಗೊಂಡಿದ್ದು, ಈ ಘಟನೆಯು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಸೊಶೀಯಲ್​​ ಮೀಡಿಯಾದಲ್ಲಿ ಇಂತಹ ತಮಾಷೆಯ ವಿಡಿಯೋ ಆಗ್ಗಾಗೆ ವೈರಲ್​​ ಆಗುತ್ತ ಇರುತ್ತದೆ. ಇದೀಗ ಇಲ್ಲೊಂದು ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ. ಸರ್, ಈ ಬಸ್ ದುಬೈಗೆ ಹೋಗುತ್ತಾ? ಅಲ್ಲಿ ಸಿಂಗಾಪುರ್ ಅವರೇ ಹೇಳಿದ್ದು ದುಬೈಗೆ ಹೋಗುತ್ತೆ ಅಂತ…” – ಹೀಗೆ ಕೇಳುತ್ತಾ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಯುವತಿಯೊಬ್ಬಳು ನಡೆಸಿದ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ನಗು ಹರಿಸುತ್ತಿದೆ. ನಮ್ಮ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊಸೂರು, ಮೈಸೂರು ಅಥವಾ ಮಂಗಳೂರಿಗೆ ಬಸ್ ಹೋಗುವುದು ಗೊತ್ತು. ಆದರೆ, ಸಮುದ್ರ ದಾಟಿ ದುಬೈಗೆ ಬಸ್ ಹೋಗುತ್ತೆ ಎಂದು ಪ್ರಯಾಣಿಕರೊಬ್ಬರು ಕಂಡಕ್ಟರ್ ಮತ್ತು ಸಾರ್ವಜನಿಕರ ಬಳಿ ವಿಚಾರಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. “ಇದು ಬಸ್ ಅಲ್ವಾ? ಹೋಗಲ್ವಾ ದುಬೈಗೆ?” ಎಂದು ಆ ವ್ಯಕ್ತಿ ಮಗುವಿನಂತೆ ಪ್ರಶ್ನಿಸುತ್ತಿದ್ದರೆ, ಏನು ಹೇಳಬೇಕೆಂದು ತಿಳಿಯದೆ ಕಂಡಕ್ಟರ್ ಗೊಂದಲಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Mar 05, 2026 11:57 AM
Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More