ರಾವಣನಾಗಿ ‘ರಾಮಾಯಣ’ ಆರಂಭಿಸುವುದಕ್ಕೂ ಮೊದಲು ಮಹತ್ವದ ಕೆಲಸ ಮಾಡಿದ ಯಶ್
ನಿತೇಶ್ ತಿವಾರಿ ನಿರ್ದೇಶನದ ಮಹಾಕಾವ್ಯ ರಾಮಾಯಣ ಚಿತ್ರದಲ್ಲಿ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ರಾಮನಾಗಿ, ಸನ್ನಿ ದಿಯೋಲ್ ಹನುಮಂತನಾಗಿ, ಮತ್ತು ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ, ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರಲ್ಲಿ ತೆರೆಗೆ ಬರಲಿದೆ.

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ (Ramayana Movie) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇದು ಭಾರತ ಚಿತ್ರರಂಗದಲ್ಲೇ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಯಶ್, ರಣಬೀರ್ ಕಪೂರ್, ಸನ್ನಿ ಡಿಯೋಲ್, ಸಾಯಿ ಪಲ್ಲವಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ, ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಯಶ್ ಅವರು ಈ ಚಿತ್ರದ ಶೂಟ್ನ ಮುಂಬೈನಲ್ಲಿ ಪೂರ್ಣಗೊಳಿಸಲಿದ್ದಾರೆ. ಅದಕ್ಕೂ ಮೊದಲು ಅವರು ಒಂದು ಮಹತ್ವದ ಕೆಲಸ ಮಾಡಿದ್ದಾರೆ.
ಯಶ್ ಅವರು ದೈವ ಭಕ್ತ. ಅವರಿಗೆ ದೇವರ ಮೇಲೆ ಸಾಕಷ್ಟು ನಂಬಿಕೆ ಇದೆ. ಹೀಗಾಗಿ, ‘ರಾಮಾಯಣ’ ಸಿನಿಮಾದ ಶೂಟ್ಗೂ ಮೊದಲು ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ರಾವಣನು ಶಿವನ ಭಕ್ತನಾಗಿದ್ದ. ಅವನಿಗೆ ಶಿವನ ಮೇಲೆ ಅಪಾರವಾದ ಭಕ್ತಿ. ಈಗ ಯಶ್ ಅವರು ಈ ಪಾತ್ರ ಮಾಡುತ್ತಿದ್ದಾರೆ. ಹೀಗಾಗಿ, ಶಿವನ ದರ್ಶನ ಪಡೆದಿದ್ದಾರೆ.
ಈ ವಾರ ಯಶ್ ಅವರು ಮುಂಬೈನಲ್ಲಿ ಶೂಟ್ ಮಾಡಲಿದ್ದಾರೆ. ಕೆಲವು ಸೋಲೋ ದೃಶ್ಯಗಳ ಶೂಟ್ ನಡೆಯಲಿದೆ. ಯಶ್ ಅವರು ರಾವಣನಾಗಿ ಮಿಂಚಲು ರೆಡಿ ಆಗಿದ್ದಾರೆ. ಅವರು ಈ ಚಿತ್ರದಲ್ಲಿ ಕೇವಲ ಹೀರೋ ಮಾತ್ರವಲ್ಲ. ಅವರು ನಿರ್ಮಾಪಕ ಕೂಡ ಹೌದು. ಯಶ್ ಅವರು ಕೇವಲ ನಟನಾಗಿ ಸೆಟ್ಗೆ ಬರುತ್ತಿಲ್ಲ. ಅವರು ದೃಶ್ಯಗಳ ಕಾಂಬಿನೇಷನ್ ಬಗ್ಗೆ, ಯಾವ ದೃಶ್ಯ ಹೇಗೆ ಮೂಡಿ ಬರಬೇಕು ಎಂಬ ವಿಚಾರದ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ.
ಇದನ್ನೂ ಓದಿ: ಮೇ ಟು ಅಕ್ಟೋಬರ್.. ‘ರಾಮಾಯಣ 2’ ಶೂಟ್ನಲ್ಲಿ ಬ್ಯುಸಿ ಆಗಲಿದ್ದಾರೆ ಯಶ್
‘ರಾಮಾಯಣ’ ಸಿನಿಮಾ ಎರಡು ಭಾಗದಲ್ಲಿ ಬರಲಿದೆ. 2026ರ ದೀಪಾವಳಿಗೆ ಮೊದಲ ಭಾಗ ರಿಲೀಸ್ ಆದರೆ, 2027ರಲ್ಲಿ ಎರಡನೇ ಭಾಗದ ಶೂಟ್ ನಡೆಯಲಿದೆ. ರಣಬೀರ್ ಕಪೂರ್ ರಾಮನ ಪಾತ್ರ ಮಾಡಿದರೆ, ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಅವರದ್ದು ಸೀತೆಯ ಪಾತ್ರ. ಶೀಘ್ರವೇ ತಂಡ ಎರಡನೇ ಪಾರ್ಟ್ಗೆ ಶೂಟ್ ಆರಂಭಿಸಲಿದೆ ಎನ್ನಲಾಗಿದೆ. ಇನ್ನು, ಯಶ್ ಅವರ ‘ಟಾಕ್ಸಿಕ್’ ಸಿನಿಮಾ ವಿಚಾರಕ್ಕೆ ಬರೋದಾದರೆ ಈ ಚಿತ್ರದ ಕೆಲವು ಪ್ರಮುಖ ದೃಶ್ಯಗಳ ಶೂಟ್ ಪೂರ್ಣಗೊಂಡಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.