Yash: ಮೇ ಟು ಅಕ್ಟೋಬರ್.. ‘ರಾಮಾಯಣ 2’ ಶೂಟ್ನಲ್ಲಿ ಬ್ಯುಸಿ ಆಗಲಿದ್ದಾರೆ ಯಶ್
ಯಶ್ ಅವರು ಮೇ ತಿಂಗಳಿಂದ ಅಕ್ಟೋಬರ್ವರೆಗೆ ‘ರಾಮಾಯಣ 2’ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಜೊತೆ ಅವರ ಕೆಲಸದ ವೇಳಾಪಟ್ಟಿ ಹೊಂದಾಣಿಕೆಯಾಗಿದೆ. ಚಿತ್ರದ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ರಾಕಿಂಗ್ ಸ್ಟಾರ್ ಯಶ್ (Yash) ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಮುಂದಿನ ವರ್ಷ ಮಾರ್ಚ್ನಲ್ಲಿ ಬಿಡುಗಡೆ ಕಾಣಲಿದೆ. ಈ ಚಿತ್ರದ ಶೂಟ್ನಲ್ಲಿ ಯಶ್ ತೊಡಗಿಕೊಂಡಿದ್ದಾರೆ. ವಿಶೇಷ ಎಂದರೆ ಯಶ್ ಅವರು ಮೇ ತಿಂಗಳಿಂದ ಅಕ್ಟೋಬರ್ವರೆಗೆ ‘ರಾಮಾಯಣ’ (Ramayana Movie) ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ಅವರು ಬಹುತೇಕ ಸಮಯವನ್ನು ಮುಂಬೈನಲ್ಲೇ ಕಳೆಯಲಿದ್ದಾರೆ ಎಂದು ವರದಿ ಆಗಿದೆ.
ರಣಬೀರ್ ಕಪೂರ್ ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾ ಹಾಗೂ ‘ರಾಮಾಯಣ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದು, ‘ರಾಮಾಯಣ’ ಚಿತ್ರದ ಡೇಟ್ಸ್ನ ಮ್ಯಾನೇಜ್ ಮಾಡಬೇಕಿದೆ. ಸೀತೆ ಪಾತ್ರ ಮಾಡುತ್ತಿರುವ ಸಾಯಿ ಪಲ್ಲವಿ ಹೆಚ್ಚಿನ ಗಮನ ‘ರಾಮಾಯಣ’ ಸಿನಿಮಾದ ಮೇಲೆ ಇದೆ. ಈ ಮೂವರ ಡೇಟ್ಸ್ ಹೊಂದಾಣಿಕೆ ಆಗಿದ್ದು ಮೇನಿಂದ ಶೂಟ್ ಆರಂಭ ಆಗಲಿದೆ.
‘ರಾಮಾಯಣ’ ಒಟ್ಟೂ ಎರಡು ಪಾರ್ಟ್ನಲ್ಲಿ ಬರಲಿದೆ. ಮೊದಲ ಪಾರ್ಟ್ ಕೊನೆಯಲ್ಲಿ ಯಶ್ ಅವರ ಆಗಮನ ಆಗಲಿದೆ. ಈಗಾಗಲೇ ಇದರ ಶೂಟ್ ಪೂರ್ಣಗೊಂಡಿದೆ ಎನ್ನಲಾಗಿದೆ. ಎರಡನೇ ಪಾರ್ಟ್ನಲ್ಲಿ ಯಶ್ ಅವರ ಪಾತ್ರ ಹೆಚ್ಚಿರಲಿದೆ. ಮೇ ತಿಂಗಳಿಂದ ಆರಂಭ ಆಗೋದು ‘ರಾಮಾಯಣ 2’ ಚಿತ್ರದ ಶೂಟ್ ಎಂದು ಹೇಳಲಾಗುತ್ತಿದೆ. ಯಶ್ ಅವರು ಆರು ತಿಂಗಳ ಕಾಲ ಬಾಲಿವುಡ್ನಲ್ಲಿ ಬ್ಯುಸಿ ಇರಲಿದ್ದಾರೆ
ಸಾಯಿ ಪಲ್ಲವಿ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಶೋಕ್ ವಾಟಿಕ ಪ್ರೋಷನ್ನ ಶೂಟ್ ಕೂಡ ಇದರಲ್ಲೇ ನಡೆಯಲಿದೆ. ರಾವಣನು ಸೀತಾಳ ಬಂಧಿಸಿಟ್ಟ ಜಾಗ ಇದಾಗಿದೆ. ಹೀಗಾಗಿ, ಯಶ್ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್ನಲ್ಲಿ ಸಾಕಷ್ಟು ದೃಶ್ಯಗಳು ಇದರಲ್ಲಿ ಬರಲಿವೆ.
ಇದನ್ನೂ ಓದಿ: ‘ಕೆಜಿಎಫ್ 3’ ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ ಫಿಲ್ಮ್ಸ್: ಯಶ್ ಅಭಿಮಾನಿಗಳಿಗೆ ಖುಷಿ
ತಂಡ ನೀಡಿರುವ ಮಾಹಿತಿ ಪ್ರಕಾರ ಮೊದಲ ಪಾರ್ಟ್ 2026ರ ದೀಪಾವಳಿಗೆ ರಿಲೀಸ್ ಆಗಲಿದೆ. 2027ರ ದೀಪಾವಳಿಗೆ ಎರಡನೇ ಭಾಗದಲ್ಲಿ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:47 pm, Fri, 18 April 25