‘ಕೆಜಿಎಫ್ 3’ ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ ಫಿಲ್ಮ್ಸ್: ಯಶ್ ಅಭಿಮಾನಿಗಳಿಗೆ ಖುಷಿ
ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಿಡುಗಡೆಯಾಗಿ 3 ವರ್ಷಗಳು ಕಳೆದಿವೆ. ಈಗ ‘ಕೆಜಿಎಫ್ 3’ ಬಗ್ಗೆ ಸುಳಿವು ಸಿಕ್ಕಿದೆ. ‘ಸೀ ಯೂ ಸೂನ್’ ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಅಭಿಮಾನಿಗಳೆಲ್ಲರೂ ‘ಕೆಜಿಎಫ್: ಚಾಪ್ಟರ್ 3’ ಬಗ್ಗೆ ಸಖತ್ ಎಗ್ಸೈಟ್ ಆಗಿದ್ದಾರೆ.

ನಟ ಯಶ್ (Yash) ಅವರ ಬದುಕು ಬದಲಿಸಿದ ಸಿನಿಮಾ ‘ಕೆಜಿಎಫ್: ಚಾಪ್ಟರ್ 1’. ಆ ಸಿನಿಮಾ ಮೂಲಕ ಯಶ್ ಅವರು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದರು. ಬಳಿಕ ಬಂದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. 2022ರ ಏಪ್ರಿಲ್ 14ರಂದು ಬಿಡುಗಡೆ ಆದ ‘ಕೆಜಿಎಫ್ 2’ ಬಗ್ಗೆ ಸಿನಿಪ್ರಿಯರು ಎಂದಿಗೂ ಮಾತನಾಡುತ್ತಾರೆ. ಆ ಸಿನಿಮಾ ತೆರೆಕಂಡು 3 ವರ್ಷ ಕಳೆದಿದೆ. ಆ ಖುಷಿಯಲ್ಲಿ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ (Hombale Films) ಕಡೆಯಿಂದ ‘ಕೆಜಿಎಫ್ 3’ (KGF 3) ಬಗ್ಗೆ ಸುಳಿವು ನೀಡಲಾಗಿದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೂರು ವರ್ಷ ಪೂರೈಸಿದ್ದಕ್ಕೆ ಒಂದು ಪ್ರೋಮೋ ಹಂಚಿಕೊಳ್ಳಲಾಗಿದೆ. ‘ಕೆಜಿಎಫ್ 2’ ಚಿತ್ರದ ಎಲ್ಲ ಪ್ರಮುಖ ಘಟ್ಟಗಳು ಈ ಪ್ರೋಮೋದಲ್ಲಿದೆ. 2ನೇ ಪಾರ್ಟ್ನಲ್ಲಿ ಸ್ಕಿಪ್ ಆಗಿದ್ದ 1978ರಿಂದ 1981ರ ತನಕ ಏನಾಗಿತ್ತು ಎಂಬ ಕೌತುಕ ಮತ್ತೆ ಹೆಚ್ಚಾಗುವ ರೀತಿಯಲ್ಲಿ ಈ ಪ್ರೋಮೋ ಇದೆ. ಅಲ್ಲದೇ, ಕೊನೆಯಲ್ಲಿ ‘ಕೆಜಿಎಫ್: ಚಾಪ್ಟರ್ 3’ ಎಂಬ ಟೈಟಲ್ ಇದೆ. ‘ಸೀ ಯೂ ಸೂನ್’ ಎಂದು ಯಶ್ ಹಿನ್ನೆಲೆ ಧ್ವನಿ ಕೇಳಿಸಿದೆ. ಇದನ್ನೆಲ್ಲ ನೋಡಿದ ಬಳಿಕ ಯಶ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಯಶ್ ಪಾಲಿಗೆ ರಾಕಿ ಭಾಯ್ ಎಂಬ ಪಾತ್ರ ಸಖತ್ ಸ್ಪೆಷಲ್. ಯಶ್ ಪತ್ನಿ ರಾಧಿಕಾ ಪಂಡಿತ್ ಕೂಡ ಈ ಸಿನಿಮಾದ ವೈಭವವನ್ನು ನೆನಪಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಇದು ಹೊಸ ಫೋಟೋ ಅಲ್ಲ. ‘ಕೆಜಿಎಫ್: ಚಾಪ್ಟರ್ 2’ ಶೂಟಿಂಗ್ ಸಂದರ್ಭದಲ್ಲಿ ಯಶ್ ಜೊತೆ ರಾಧಿಕಾ ಪಂಡಿತ್ ತೆಗೆದುಕೊಂಡಿದ್ದ ಫೋಟೋ ಇದು.
He came… He saw… He conquered!
Celebrating 3 GLORIOUS YEARS of #KGFChapter2 and the Monster’s mayhem at the box office ❤️🔥
– https://t.co/atPSFXN1nA#3YearsOfKGF2Rampage@TheNameIsYash #PrashanthNeel @VKiragandur @hombalefilms @duttsanjay @TandonRaveena @SrinidhiShetty7… pic.twitter.com/HMYimSa35a
— Hombale Films (@hombalefilms) April 14, 2025
‘ಕೆಜಿಎಫ್: ಚಾಪ್ಟರ್ 1’ ಹಾಗೂ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳಿಂದ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಗೆ ದೊಡ್ಡ ಲಾಭ ಆಯಿತು. ಜಾಗತಿಕ ಮಟ್ಟದಲ್ಲಿ ಈ ನಿರ್ಮಾಣ ಸಂಸ್ಥೆಯ ಹೆಸರು ಶೈನ್ ಆಯಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೆಜಿಎಫ್ 2’ ಸದ್ದು ಮಾಡಿದ್ದರಿಂದ ಪರಭಾಷೆಯ ಸ್ಟಾರ್ ಕಲಾವಿದರು ಕೂಡ ‘ಹೊಂಬಾಳೆ ಫಿಲ್ಮ್ಸ್’ ಜೊತೆ ಸಿನಿಮಾ ಮಾಡಲು ಮುಂದೆ ಬಂದರು. ಈಗ ‘ಕೆಜಿಎಫ್ 3’ ಬಗ್ಗೆ ಈ ಸಂಸ್ಥೆಯಿಂದ ಸಿಗಲಿರುವ ಫ್ರೆಶ್ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ‘ಎಷ್ಟೇ ಎತ್ತರಕ್ಕೆ ಬೆಳೆದರೂ ಬೆಂಬಲವಾಗಿ ನಿಲ್ಲುತ್ತಾರೆ’; ಯಶ್ ಮಾಡಿದ ಸಹಾಯ ನೆನೆದ ಅಜಯ್ ರಾವ್
‘ಕೆಜಿಎಫ್ 3’ ನೋಡಲು ತಾವು ಎಗ್ಸೈಟ್ ಆಗಿರುವುದಾಗಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಅಲ್ಲದೇ, ಮೂರು ವರ್ಷ ಆಗಿರುವ ಕಾರಣ ‘ಕೆಜಿಎಫ್ 2’ ಸಿನಿಮಾವನ್ನು ಮರು ಬಿಡುಗಡೆ ಮಾಡಿ ಎಂದು ಕೂಡ ಕೆಲವು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ಸದ್ಯ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.