ಬ್ಯಾಂಕ್ ಜನಾರ್ಧನ ನಾಟಕ-ಸಿನಿಮಾ-ಬ್ಯಾಂಕ್ ಅಂತ ತುಂಬಾ ಹೆಣಗಾಡುತ್ತಿದ್ದರು: ಭಾಗ್ಯಶ್ರೀ, ಹಿರಿಯ ಕಲಾವಿದೆ
ಪಾತ್ರ ಯಾವುದೇ ಆಗಿದ್ದರೂ ಸಲೀಸಾಗಿ ನಿಭಾಯಸುವಷ್ಟು ಪ್ರತಿಭೆ ಮತ್ತು ಕ್ಷಮತೆ ಬ್ಯಾಂಕ್ ಜನಾರ್ಧನ ಅವರಲ್ಲಿತ್ತು, ಅಳುವ ಪಾತ್ರಗಳಿಗೂ ಸೈ ಅನಿಸಿಕೊಂಡಿದ್ದ ಅವರೊಂದಿಗೆ ನಟಿಸಲು ಅವಕಾಶ ಪಡೆದ ತಾವು ನಿಜಕ್ಕೂ ಅದೃಷ್ಟವಂತರು ಎಂದು ಭಾಗ್ಯಶ್ರೀ ಹೇಳಿದರು. ಸಂಭಾವನೆ ವಿಷಯದಲ್ಲಿ ಅವರಿಗೆ ಬೇಸರ ಉಂಟಾದ ಸಂದರ್ಭಗಳಿಗೆ, ಒಪ್ಪಂದಕ್ಕಿಂತ ಕಡಿಮೆ ಹಣ ಪಡೆದು ಅವರು ನೋವು ಅನುಭವಿಸಿದ್ದರು ಎಂದು ಅವರು ಹೇಳಿದರು.
ಬೆಂಗಳೂರು, ಏಪ್ರಿಲ್ 14 : ಚಿತ್ರರಂಗದ ಹಿರಿಯ ಮತ್ತು ಕಿರಿಯ ನಟ-ನಟಿಯರು ಬ್ಯಾಂಕ್ ಜನಾರ್ಧನ ಅವರ ನಿಧನಕ್ಕೆ ಭಾವುಕರಾಗಿ ಸಂತಾಪ ಸೂಚಿಸುತ್ತಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಹಿರಿಯ ನಟಿ ಭಾಗ್ಯಶ್ರೀ (Bhagyashree, senior actor) ಅವರು, ಆರಂಭದ ದಿನಗಳಲ್ಲಿ ಜನಾರ್ಧನ ಬಹಳ ಕಷ್ಟಪಡುತ್ತಿದ್ದರು, ಬ್ಯಾಂಕ್ ಕೆಲಸ, ಸಿನಿಮಾ ಮತ್ತು ರಂಗಭಮಿ-ಮೂರರೊಂದಿಗೆ ಏಗುತ್ತಿದ್ದ ಅವರು ಸಮಯ ಹೊಂದಿಸಲು ಬಹಳ ಕಷ್ಟಪಡುತ್ತಿದ್ದರು ಎಂದು ಹೇಳಿದರು. ಆದರೆ ನಂತರ ದಿನಗಳಲ್ಲಿ ಬದುಕು ಸಲೀಸಾಗುತ್ತಾ ಹೋಯಿತು, ಯಾಕೆಂದರೆ ಕಲಾವಿದನಿಗೆ ಒಮ್ಮೆ ರಿಕ್ಕಗ್ನಿಷನ್ ಸಿಕ್ಕಿತು ಅಂತಾದರೆ ಚಿತ್ರರಂಗ ನೋಡುವ ದೃಷ್ಟಿ ಬದಲಾಗುತ್ತದೆ ಎಂದು ಭಾಗ್ಯಶ್ರೀ ಹೇಳಿದರು.
ಇದನ್ನೂ ಓದಿ: ಬ್ಯಾಂಕ್ ಜನಾರ್ಧನ್ 860 ಸಿನಿಮಾ ಮಾಡಿದರೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ; ತಪ್ಪಿನ ಬಗ್ಗೆ ಮರುಗಿದ್ದ ನಟ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!

Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ

‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?

VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
