ಅಪ್ಪನಿಗೆ ಅನಾರೋಗ್ಯದ ಕಾರಣ ಮನೇಲಿರೋದು ಬೇಜಾರಾಗುತಿತ್ತು: ಜ್ಯೋತಿ, ಬ್ಯಾಂಕ್ ಜನಾರ್ಧನ ಮಗಳು
ತನ್ನ ತಂದೆಗೆ ಹೇಳಿಕೊಳ್ಳುವಂಥ ಆರ್ಥಿಕ ಸಂಕಷ್ಟವೇನೂ ಎದುರಾಗಿರಲಿಲ್ಲ, ಹಣಕಾಸಿನ ವ್ಯವಹಾರಗಳನ್ನು ತನ್ನ ತಮ್ಮ ನೋಡಿಕೊಳ್ಳುತ್ತಿದ್ದ ಎಂದು ಜ್ಯೋತಿ ಹೇಳುತ್ತಾರೆ. ಆರೋಗ್ಯವಾಗಿದ್ದ ದಿನಗಳಲ್ಲಿ ಅವರ ಹೆಚ್ಚಿನ ಸಮಯ ಶೂಟಿಂಗ್ ನಲ್ಲೇ ಕಳೆಯುತ್ತಿತ್ತು, ಅವರು ಮನೇಲಿ ಇದ್ದಾರೆ ಅಂತ ಗೊತ್ತಾದರೆ ಎಲ್ಲರೂ ಬಂದು ಸೇರಿಕೊಳ್ಳುತ್ತಿದ್ದೆವು ಎಂದ ಅವರು ಹೇಳುತ್ತಾರೆ.
ಬೆಂಗಳೂರು, ಏಪ್ರಿಲ್ 14: ತಾಯಿಯನ್ನು ಬೇಗ ಕಳೆದುಕೊಂಡ ನಾಲ್ಕು ಜನ ಮಕ್ಕಳನ್ನು ಇಂದು ಬೆಳಗಿನ ಜಾವ ವಿಧಿವಶರಾದ ಖ್ಯಾತ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅಮ್ಮ ಮತ್ತು ಅಪ್ಪ ಎರಡೂ ಆಗಿದ್ದರು ಅಂತ ಅವರ ಮಗಳು ಜ್ಯೋತಿ (Jyothi) ಹೇಳುತ್ತಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು ಅನಾರೋಗ್ಯದ ಕಾರಣದಿಂದ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದ ಜನಾರ್ಧನ್ ಮನೇಲಿದ್ದು ಬೇಜಾರಾಗ್ತಿದೆ ಎನ್ನುತ್ತಿದ್ದರಂತೆ. ಸದಾ ಕ್ರಿಯಾಶೀಲ ಮತ್ತು ಮನೆಯಲ್ಲೂ ಎಲ್ಲರನ್ನು ನಗಿಸುತ್ತ, ತಾವೂ ನಗುತ್ತ ಇರುತ್ತಿದ್ದರು ಎಂದು ಜ್ಯೋತಿ ಹೇಳುತ್ತಾರೆ. ಕನ್ನಡ ದಿಗ್ಗಜರೊಂದಿಗೆ ನಟಿಸಿದ್ದ ಅವರಿಗೆ ನಿರ್ದಿಷ್ಟವಾದ ನಟ ನೆಚ್ಚಿನ ನಟನಾಗಿರಲಿಲ್ಲ, ಎಲ್ಲರನ್ನೂ ಇಷ್ಟಪಡುತ್ತಿದ್ದರು ಪ್ರತಿಯೊಬ್ಬರೊಂದಿಗೆ ಸ್ನೇಹದಿಂದಿದ್ದರು ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ದರ್ಶನ್, ಉಪೇಂದ್ರ, ಸುದೀಪ್ಗೆ ನನ್ನ ನೆನಪಿಲ್ಲ; ಬೇಸರ ಹೊರಹಾಕಿದ್ದ ಬ್ಯಾಂಕ್ ಜನಾರ್ಧನ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ