ಬಾಲಕಿಯನ್ನು ಕೊಂದ ಆರೋಪಿ ರಿತೇಶ್ ಕುಮಾರ್ ಎನ್ಕೌಂಟರ್ ನಡೆದ ಸ್ಥಳ ವೀಕ್ಷಿಸಿದ ಪೊಲೀಸ್ ಆಯುಕ್ತ ಶಶಿ ಕುಮಾರ್
ಶರಣಾಗುವಂತೆ ಪೊಲೀಸರು ಎಚ್ಚರಿಸಿದರೂ ಕುಮಾರ್ ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾನೆ, ಅಗಲೇ ಪಿಎಸ್ಐ ಅನ್ನಪೂರ್ಣ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಶರಣಾಗು ಅಂತ ಹೇಳಿದ್ದಾರೆ. ಅವನು ಓಟ ಮುಂದುವರಿಸಿದಾಗ ಅನ್ನಪೂರ್ಣ ಪಿಸ್ಟಲ್ ನಿಂದ ಸಿಡಿದ ಮೊದಲ ಗುಂಡು ಅವನ ಕಾಲಿಗೆ ತಾಕಿದೆ ಎರಡನೇಯದ್ದು ಬೆನ್ನಿಗೆ. ಅಸ್ಪತ್ರೆಗೆ ಸಾಗಿಸಿದಾಗ ಅವನು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.
ಹುಬ್ಬಳ್ಳಿ, ಏಪ್ರಿಲ್ 14: ನಗರದ ವಿಜಯನಗರದಲ್ಲಿ ವಾಸವಾಗಿದ್ದ 5-ವರ್ಷದ ಬಾಲಕಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಬಿಹಾರ ಮೂಲದ ಆರೋಪಿ ರೀತೇಶ್ ಕುಮಾರ್ನನ್ನು (Ritesh Kumar) ಪೊಲೀಸರು ಎನ್ಕೌಂಟರ್ ಮಾಡಿದ ಸ್ಥಳವನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ತಮ್ಮ ಕೆಲ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ವೀಕ್ಷಿಸಿದರು. ಪೊಲೀಸರು ಕುಮಾರ್ನನ್ನು ವಶಕ್ಕೆ ಪಡೆದು ಅವನು ವಾಸ ಮಾಡುತ್ತಿದ್ದ ಸ್ಥಳಕ್ಕೆ ಮಹಜರ್ ಗೆ ಕರೆದೊಯ್ದಾಗ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಕಲ್ಲೆಸೆದು ಅವನು ಕಾರನ್ನು ಜಖಂಗೊಳಿಸಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಇದನ್ನೂ ಓದಿ: ಹೊರ ರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಅಪರಾಧ ಕೃತ್ಯಗಳು: ಗೃಹ ಸಚಿವ ಜಿ ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
