ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪ್ರತಿಭಟನೆಕಾರರಿಗೆ ಎಚ್ಚರಿಸಲಾಗಿದೆ: ಶಶಿಕುಮಾರ್, ಪೊಲೀಸ್ ಕಮೀಶನರ್

ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪ್ರತಿಭಟನೆಕಾರರಿಗೆ ಎಚ್ಚರಿಸಲಾಗಿದೆ: ಶಶಿಕುಮಾರ್, ಪೊಲೀಸ್ ಕಮೀಶನರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 09, 2025 | 12:14 PM

ರಸ್ತೆಬದಿ ಪಾರ್ಕ್​ ಮಾಡಿಲಾಗಿರುವ ವಾಹನಗಳ ಟೈರ್ ಗಳಿಂದ ಗಾಳಿ ತೆಗೆಯುವ ಕೃತ್ಯವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಅದು ತನ್ನ ಗಮನಕ್ಕೆ ಬಂದಿಲ್ಲ ಅದರೆ ಅಧಿಕಾರಿಗಳಿಗೆ ವಿಷಯವನ್ನು ರವಾನಿಸಿ ಅಂಥ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಶಶಿಕುಮಾರ್ ಹೇಳಿದರು. ಪ್ರತಿಭಟನೆಯು ಚನ್ನಮ್ಮ ಸರ್ಕಲ್ ನಲ್ಲಿ ಸಮಾರೋಪಗೊಳ್ಳಲಿರುವುದರಿಂದ ಬ್ಯಾರಿಕೇಡ್​​​ಗಳನ್ನು ಹಾಕಲಾಗಿದೆ ಎಂದು ಅವರು ಹೇಳಿದರು.

ಹುಬ್ಬಳ್ಳಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಡಾ ಬಿಅರ್ ಅಂಬೇಡ್ಕರ್ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ ದಲಿತ ಮತ್ತು ವಿವಿಧ ಸಂಘಟನೆಗಳ ಇಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಬಂದ್ ಗೆ ಕರೆ ನೀಡಿದ್ದು ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ಹೇಳಿದರು. ಎರಡೂ ನಗರಗಳಲ್ಲಿ ತಾನು ರೌಂಡ್ಸ್ ಹಾಕಿದ್ದೇನೆ, ಎಲ್ಲ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ ಮತ್ತು ಬಂದ್ ಗೆ ಕರೆಕೊಟ್ಟಿರುವ ಆಯೋಜಕರೊಂದಿಗೆ ಸಭೆ ನಡೆಸಿ ಶಾಂತಿಯುತವಾಗಿ ಮತ್ತು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಎಚ್ಚರಿಸಲಾಗಿದೆ ಎಂದು ಕಮೀಶನರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜಕೀಯ ತಿರುವು ಪಡೆದುಕೊಂಡ ನಾಳಿನ ಹುಬ್ಬಳ್ಳಿ-ಧಾರವಾಡ ಬಂದ್: ಪೊಲೀಸ್ ಅಲರ್ಟ್