ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್

ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್

ರಾಜೇಶ್ ದುಗ್ಗುಮನೆ
|

Updated on:Jan 09, 2025 | 8:49 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಧನರಾಜ್ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಆದರೆ, ಅವರು ಆಡುವ ಆಟ ಮಾತ್ರ ಇಲ್ಲಿ ಕೆಲಸಕ್ಕೆ ಬರೋದಿಲ್ಲ. ಎದುರಾಳಿಗಳ ಪ್ಲ್ಯಾನಿಂಗ್ ಕೂಡ ಮುಖ್ಯ ಆಗುತ್ತದೆ. ಈಗ ಧನರಾಜ್ ಅವರು ನಂಬಿ ಮೋಸ ಹೋದರೇ ಎನ್ನುವ ಪ್ರಶ್ನೆ ಮೂಡಿದೆ.

ಧನರಾಜ್ ಅವರು ಬಿಗ್ ಬಾಸ್​​ನಲ್ಲಿ ಎಲ್ಲರನ್ನೂ ನಂಬಿಕೊಂಡಿದ್ದರು. ಆದರೆ ಆಟ ಸೋತು ಒಬ್ಬರನ್ನು ಹೊರಗೆ ಇಡಬೇಕು ಎಂದಾಗ ಎಲ್ಲರೂ ಧನರಾಜ್ ಹೆಸರನ್ನೇ ತೆಗೆದುಕೊಂಡರು. ಈ ಮೂಲಕ ಫಿನಾಲೆ ಟಿಕೆಟ್ ಪಡೆಯುವ ಅವಕಾಶ ಅವರ ಕೈ ತಪ್ಪಿದೆ. ಈ ವಾರ ಅವರು ನಾಮಿನೇಟ್ ಕೂಡ ಆಗಿದ್ದು, ಅದರಿಂದಲೂ ಬಚಾವ್ ಆಗಬೇಕಾದ ಅನಿವಾರ್ಯತೆ ಇದೆ. ಅವರಿಗೆ ನಂಬಿ ಮೋಸ ಹೋದ ಭಾವನೆ ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 09, 2025 08:20 AM