‘ಇತ್ತೀಚೆಗೆ ಬ್ಯಾಂಕ್ ಜನಾರ್ಧನ್ ಭೇಟಿ ಮಾಡಲು ಆಗಲೇ ಇಲ್ಲ’; ಬೇಸರ ಹೊರಹಾಕಿದ ಸುಧಾರಾಣಿ
ನಟಿ ಸುಧಾರಾಣಿ ಅವರು ಬ್ಯಾಂಕ್ ಜನಾರ್ಧನ್ ಸಾವಿಗೆ ಮರುಕ ವ್ಯಕ್ತಪಡಿಸಿದ್ದಾರೆ. ಅವರ ಸಾವಿನ ಬಗ್ಗೆ ಕಂಬನಿ ಹೊರಹಾಕಿದ್ದಾರೆ. ಟಿವಿ9 ಕನ್ನಡದ ಜೊತೆ ಮಾತನಾಡಿದ ಅವರು ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಅವರ ಭೇಟಿ ಮಾಡಲು ಅವಕಾಶ ಸಿಗಲೇ ಇಲ್ಲ ಎಂದು ಸಂತಾಪ ಹೊರಹಾಕಿದ್ದಾರೆ.
ಸುಧಾರಾಣಿ (Sudharani) ಅವರು ‘ಬ್ಯಾಂಕ್ ಜನಾರ್ಧನ್’ ಸಾವಿನ ಬಗ್ಗೆ ಸಂತಾಪ ಹೊರಹಾಕಿದ್ದಾರೆ. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಜನಾರ್ಧನ್ ನಿಧನ ವಾರ್ತೆ ಅವರಿಗೆ ಬೇಸರ ತಂದಿದೆ. ‘ಇತ್ತೀಚೆಗೆ ನನಗೆ ಜನಾರ್ಧನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಗಲೇ ಇಲ್ಲ ಎಂಬುದು ಬೇಸರದ ವಿಚಾರ. ಈ ರೀತಿಯ ಕಲಾವಿದರ ಕಷ್ಟದ ಕಾಲದಲ್ಲಿ ನಾವು ಅವರ ಜೊತೆ ಇರಬೇಕು ಎಂದುಕೊಂಡಿದ್ದೆವು. ಆದಾಗ್ಯೂ ಇವರ ಭೇಟಿ ಆಗಿಲ್ಲ’ ಎಂದಿದ್ದಾರೆ ಸುಧಾರಾಣಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Apr 14, 2025 10:24 AM
Latest Videos