Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಬಸನಗೌಡ ಯತ್ನಾಳ್ ಮಾತಾಡುತ್ತಿದ್ದಾಗ ಮಚ್ಚು ಹಿಡಿದು ವೇದಿಕೆ ಬಳಿ ಬಂದ ವ್ಯಕ್ತಿ!

ರಾಯಚೂರು: ಬಸನಗೌಡ ಯತ್ನಾಳ್ ಮಾತಾಡುತ್ತಿದ್ದಾಗ ಮಚ್ಚು ಹಿಡಿದು ವೇದಿಕೆ ಬಳಿ ಬಂದ ವ್ಯಕ್ತಿ!

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 14, 2025 | 10:36 AM

ತಮ್ಮ ಹಿಂದೆ ಅಷ್ಟು ದೊಡ್ಡ ಪ್ರಮಾಣದ ಗಲಾಟೆ ನಡೆಯುತ್ತಿದ್ದರೂ ಭಾಷಣ ಮಾಡುತ್ತಿದ್ದ ಬಸನನಗೌಡ ಯತ್ನಾಳ್ ಗಮನಕ್ಕೆ ಅದು ಬರೋದೇ ಇಲ್ಲ. ವೇದಿಕೆ ಮೇಲೆ ಕುಳಿತವರು ಸಹ ಎದ್ದು ಏನು ಗಲಾಟೆ ಅಂತ ನೋಡಲು ಹೋಗುತ್ತಾರೆ ಅದರೆ ಯತ್ನಾಳ್ ಮಾತ್ರ ತಮ್ಮ ಭಾಷಣಕ್ಕೆ ಅಲ್ಪವಿರಾಮ ಕೂಡ ಹಾಕದೆ ಮಾತಾಡುತ್ತಾರೆ. ಏನೇ ಇರಲಿ, ಅವರು ಎಚ್ಚರಿಕೆಯಿಂದ ಇರುವ ಅಗತ್ಯವಂತೂ ಇದೆ.

ರಾಯಚೂರು, ಏಪ್ರಿಲ್ 14: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಅಸಂಖ್ಯಾತ ಅಭಿಮಾನಿಗಳು ಮತ್ತು ಬೆಂಬಲಿಗರು ಇರುವಂತೆಯೇ ಸಾಕಷ್ಟು ವೈರಿಗಳೂ ಇದ್ದಾರೆ. ನಿನ್ನೆ ರಾತ್ರಿ ಅವರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ರಾಮನವಮಿ ಪ್ರಯುಕ್ತ (on the occasion of Ram Navami ) ಏರ್ಪಡಿಸಲಾಗಿದ್ದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡುವಾಗ, ಶ್ರೀನಿವಾಸ್ ಪೂಜಾರಿ ಹೆಸರಿನ ವ್ಯಕ್ತಿಯೊಬ್ಬ ಮಚ್ಚು ಹಿಡಿದು ವೇದಿಕೆಯ ಬಳಿ ಬಂದಿದ್ದ. ಪೊಲೀಸರು ಕೂಡಲೇ ಅವನನ್ನು ವಶಕ್ಕೆ ಪಡೆದು ಅಲ್ಲಿಂದ ಎಳೆದೊಯ್ದರು. ಅವನ ಉದ್ದೇಶ ಏನಾಗಿತ್ತು ಇನ್ನೂ ಗೊತ್ತಾಗಿಲ್ಲ.

ಇದನ್ನೂ ಓದಿ:   ಮೃತ್ಯುಂಜಯ ಸ್ವಾಮೀಜಿ ಯತ್ನಾಳ್ ಪರ ನಿಂತು ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದಾರೆ: ವಿಜುಗೌಡ ಪಾಟೀಲ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 14, 2025 10:27 AM