ಮೃತ್ಯುಂಜಯ ಸ್ವಾಮೀಜಿ ಯತ್ನಾಳ್ ಪರ ನಿಂತು ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದಾರೆ: ವಿಜುಗೌಡ ಪಾಟೀಲ್
ಪಂಚಮಸಾಲಿ ಸಮಾಜವೆಂದರೆ ಬಸನಗೌಡ ಯತ್ನಾಳ್ ಒಬ್ಬರೇ ಅಲ್ಲ, ತಾವೆಲ್ಲ ಪಂಚಮಸಾಲಿಗಳೇ ಎಂದು ಹೇಳಿದ ವಿಜುಗೌಡ ಪಾಟೀಲ್, ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯತ್ನಾಳ್ ಅಲ್ಲಿನ ಶಾಸಕ ಎಂಬಿ ಪಾಟೀಲ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ, ಕ್ಷೇತ್ರದಲ್ಲಿ 60 ಸಾವಿರಕ್ಕಿಂತ ಹೆಚ್ಚು ಪಂಚಮಸಾಲಿಗಳಿದ್ದರೂ ಕೇವಲ 3 ಸಾವಿರದಷ್ಟಿರುವ ಕೂಡು ಒಕ್ಕಲಿಗ ಪಂಗಡ ಪ್ರತಿನಿಧಿಸುವ ಎಂಬಿ ಪಾಟೀಲ್ ಗೆಲ್ಲೋದಿಕ್ಕೆ ಯತ್ನಾಳ್ ಕಾರಣ ಎಂದು ವಿಜುಗೌಡ ಹೇಳಿದರು.
ವಿಜಯಪುರ, ಏಪ್ರಿಲ್ 9: ಕೂಡಲಸಂಗಮ ಪೀಠಾಧಿಪತಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಪಂಚಮಸಾಲಿ ಸಮಾಜದ ಅಸಮಾಧಾನ ಹೆಚ್ಚುತ್ತಿದೆ. ಇಂದು ನಗರದಲ್ಲಿ ಮಾಜಿ ಬಿಜೆಪಿ ಶಾಸಕ ವಿಜುಗೌಡ ಪಾಟೀಲ್ (Vijugouda Patil) ನೇತೃತ್ವದಲ್ಲಿ ಪಂಚಮಸಾಲಿ ಲಿಂಗಾಯತರು ಸುದ್ದಿಗೋಷ್ಠಿಯೊಂದನ್ನು ನಡೆಸಿದರು. ಸ್ವಾಮೀಜಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಹೋರಾಟ ನಡೆಸುತ್ತಿರುವುದನ್ನು ಸ್ವಾಗತಿಸುತ್ತೇವೆ, ಅದರೆ ಅವರು ಉಚ್ಚಾಟಿತ ಬಸನಗೌಡ ಪಾಟೀಲ್ ಅವರ ಪರ\ ನಿಂತುಕೊಂಡು ಅವರನ್ನು ಪಕ್ಷಕ್ಕೆ ವಾಪಸ್ಸು ಕರೆಸಿಕೊಳ್ಳಲು ಗಡುವು ನೀಡುವುದು, ಕರೆಸಿಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡುವುದು ಸರಿಯಲ್ಲ, ಸ್ವಾಮೀಜಿ ಪಕ್ಷಕ್ಕೆ ಮುಜುಗುರವನ್ನುಂಟು ಮಾಡುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು.
ಇದನ್ನೂ ಓದಿ: ಯತ್ನಾಳ್ ಇಲ್ಲದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಪಡೆವ ಕನಸು ಕಾಣುತ್ತಿದ್ದರೆ ಅದು ಕೇವಲ ಭ್ರಮೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ