ಯತ್ನಾಳ್ ಇಲ್ಲದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಪಡೆವ ಕನಸು ಕಾಣುತ್ತಿದ್ದರೆ ಅದು ಕೇವಲ ಭ್ರಮೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿಯಲ್ಲಿ ಪ್ರತಿಭಟನೆನಿರತ ಪಂಚಮಸಾಲಿಗಳ ಮೇಲೆ ಸಿದ್ದರಾಮಯ್ಯ ಸರ್ಕಾರ ಬರ್ಬರವಾಗಿ ಲಾಠಿಚಾರ್ಜ್ ನಡೆಸಿದ ಬಳಿಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಬಿಜೆಪಿಯನ್ನು ಅಧಿಕಾರಕ್ಕೆ ತಂದು ಯತ್ನಾಳ್ರನ್ನು ಮುಖ್ಯಮಂತ್ರಿಯಾಗಿ ನೋಡುವ ನಿರ್ಣಯ ಮಾಡಿಕೊಂಡಿದ್ದರು, ಆದರೆ ಬಿಜೆಪಿ ತನ್ನ ಕಾಲ ಮೇಲೆ ತಾನೇ ಕೊಡಲಿ ಹೊಡೆದುಕೊಂಡಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿ, ಮಾರ್ಚ್ 27: ಬಸನಗೌಡ ಪಾಟೀಲ್ ಯತ್ನಾಳ್ ಅವರು ಉಚ್ಚಾಟಿಸಿ ಕರ್ನಾಕದಲ್ಲಿ ಅಧಿಕಾರಕ್ಕೆ ಬರುವ ಕನಸು ಬಿಜೆಪಿ ಕಾಣುತ್ತಿದ್ದರೆ ಅದು ಕೇವಲ ಭ್ರಮೆ ಎಂದು ಕೂಡಲಸಂಗಮದ ಪಂಚಮಸಾಲಿ (Panchamasali) ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕೇವಲ ಲಿಂಗಾಯತರು ಮಾತ್ರ ಅಲ್ಲ, ಎಲ್ಲ ವರ್ಗದ ಜನ ಯತ್ನಾಳ್ ಪರ ನಿಂತಿದ್ದಾರೆ, ರಾಜ್ಯದಲ್ಲಿ ಲಿಂಗಾಯತರು ಒಂದು ದೊಡ್ಡ ಸಮುದಾಯ ಮತ್ತು ಪಂಚಮಸಾಲಿಗಳು ಲಿಂಗಾಯತರಲ್ಲಿ ಅತಿದೊಡ್ಡ ಪಂಗಡ, ಉತ್ತರ ಕರ್ನಾಟಕ ಭಾಗದ ಲಿಂಗಾಯತರು ಸಂಪೂರ್ಣವಾಗಿ ಬಿಜೆಪಿ ಪರ ವಾಲಿದ್ದಾರೆ, ಹಾಗಾಗಿ ಪಂಚಮಸಾಲಿಗಳನ್ನು ಮತ್ತು ಯತ್ನಾಳ್ರನ್ನು ಬಿಜೆಪಿ ಕಡೆಗಣಿಸಿದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಸಾಧ್ಯವೇ ಇಲ್ಲ ಎಂದು ಸ್ವಾಮೀಜಿ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ವೀರಶೈವ ಲಿಂಗಾಯತ ಸಮಾವೇಶಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಠಕ್ಕರ್