ಹೆಂಡ್ತಿ ಕೊಂದು ಸೂಟ್ಕೇಸ್ನಲ್ಲಿ ಪ್ಯಾಕ್: ಬೆಂಗಳೂರಿನಲ್ಲಿ ಪಾಪಿ ಪತಿಯ ಬೆಚ್ಚಿಬೀಳಿಸೋ ಕೃತ್ಯ
ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ಬೆಳಕಿಗೆ ಬಂದಿದೆ. ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯಲ್ಲಿ ಪಾಪಿ ಪತಿರಾಯ ಪತ್ನಿಯ ತುಂಡರಿಸಿ ಸೂಟ್ ಕೇಸ್‌ಗೆ ತುಂಬಿದ್ದಾನೆ. ಬಳಿಕ ಮಹಾರಾಷ್ಟ್ರದಲ್ಲಿರುವ ಪತ್ನಿಯ ಪೋಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ದೊಡ್ಡ ಕಮ್ಮನಹಳ್ಳಿಯ ಮನೆಯಲ್ಲಿ ಮಹಾರಾಷ್ಟ್ರ ಮೂಲದ ರಾಕೇಶ್, ಗೌರಿ ಅನಿಲ್ ಸಾಂಬೆಕರ್ ವಾಸಿಸುತ್ತಿದ್ದರು.
ಬೆಂಗಳೂರು, (ಮಾರ್ಚ್ 27): ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ಬೆಳಕಿಗೆ ಬಂದಿದೆ. ಹುಳಿಮಾವು ಸಮೀಪದ ದೊಡ್ಡ ಕಮ್ಮನಹಳ್ಳಿಯಲ್ಲಿ ಪಾಪಿ ಪತಿರಾಯ ಪತ್ನಿಯ ತುಂಡರಿಸಿ ಸೂಟ್ ಕೇಸ್‌ಗೆ ತುಂಬಿದ್ದಾನೆ. ಬಳಿಕ ಮಹಾರಾಷ್ಟ್ರದಲ್ಲಿರುವ ಪತ್ನಿಯ ಪೋಷಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ದೊಡ್ಡ ಕಮ್ಮನಹಳ್ಳಿಯ ಮನೆಯಲ್ಲಿ ಮಹಾರಾಷ್ಟ್ರ ಮೂಲದ ರಾಕೇಶ್, ಗೌರಿ ಅನಿಲ್ ಸಾಂಬೆಕರ್ ವಾಸಿಸುತ್ತಿದ್ದರು. ಗಂಡ, ಹೆಂಡತಿ ಮಧ್ಯೆ ಜಗಳವಾಗಿ ಪತ್ನಿಯನ್ನು ರಾಕೇಶ್ ತುಂಡು, ತುಂಡಾಗಿ ಕತ್ತರಿಸಿದ್ದಾನೆ ಎಂದು ತಿಳಿದುಬಂದಿದೆ. ಭಯಾನಕ ಕೃತ್ಯ ಎಸಗಿರುವ ಪತಿ, ಮಹಾರಾಷ್ಟ್ರದಲ್ಲಿರುವ ಪತ್ನಿ ಪೋಷಕರಿಗೆ ಫೋನ್ ಮಾಡಿ ನಡೆದಿರೋ ಘಟನೆಯನ್ನು ವಿವರಿಸಿದ್ದಾನೆ. ಗೌರಿ ಮನೆಯವರು ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರ ಪೊಲೀಸರು ಕೂಡಲೇ ಬೆಂಗಳೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಕೂಡಲೇ ಸ್ಥಳಕ್ಕೆ ಹುಳಿಮಾವು ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.