Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6,6,6... ಪೂರನ್ ಅಬ್ಬರಕ್ಕೆ ಹೈದರಾಬಾದ್ ಹೈರಾಣ! ವಿಡಿಯೋ ನೋಡಿ

6,6,6,6,6,6… ಪೂರನ್ ಅಬ್ಬರಕ್ಕೆ ಹೈದರಾಬಾದ್ ಹೈರಾಣ! ವಿಡಿಯೋ ನೋಡಿ

ಪೃಥ್ವಿಶಂಕರ
|

Updated on: Mar 27, 2025 | 11:02 PM

Nicholas Pooran's Fastest IPL 50: ಲಕ್ನೋ ಸೂಪರ್ ಜೈಂಟ್ಸ್ ಪರ ನಿಕೋಲಸ್ ಪೂರನ್ ಅವರು ಹೈದರಾಬಾದ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಕೇವಲ 26 ಎಸೆತಗಳಲ್ಲಿ 70 ರನ್ ಗಳಿಸಿದ ಅವರು, ಈ ಸೀಸನ್‌ನ ಅತ್ಯಂತ ವೇಗದ ಅರ್ಧಶತಕವನ್ನು (18 ಎಸೆತಗಳಲ್ಲಿ) ಸಿಡಿಸಿದರು. 6 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು.

ನಿಕೋಲಸ್ ಪೂರನ್ ಕ್ರೀಸ್‌ನಲ್ಲಿದ್ದರೆ, ಅದೆಷ್ಟೇ ಬೃಹತ್ ಮೊತ್ತವಿರಲಿ ಅದನ್ನು ಬೆನ್ನಟ್ಟುವ ಎಲ್ಲಾ ಸಾಧ್ಯತೆಗಳಿರುತ್ತವೆ. ಇದೀಗ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಪೂರನ್ ಆ ಕೆಲಸವನ್ನು ಮಾಡಿ ಮುಗಿಸಿದ್ದಾರೆ. ಹೈದರಾಬಾದ್ ಬೌಲರ್​ಗಳ ವಿರುದ್ಧ ಸಿಕ್ಸರ್‌ಗಳ ಮಳೆಗರೆದ ಪೂರನ್ ಕೇವಲ 26 ಎಸೆತಗಳಲ್ಲಿ 70 ರನ್ ಗಳಿಸಿದರು. ಈ ವೇಳೆ ಅವರ ಬ್ಯಾಟ್‌ನಿಂದ 6 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳು ಸಿಡಿದವು. ಅದ್ಭುತವಾದ ವಿಷಯವೆಂದರೆ ಪೂರಾನ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಈ ಸೀಸನ್​ನ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು.

ಪೂರನ್ ಅಬ್ಬರ, ಹೈದರಾಬಾದ್ ತತ್ತರ

ಎರಡನೇ ಓವರ್‌ನಲ್ಲಿ ಐಡೆನ್ ಮಾರ್ಕ್ರಾಮ್ ರೂಪದಲ್ಲಿ ಲಕ್ನೋ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಬೇಗನೆ ಬ್ಯಾಟಿಂಗ್‌ಗೆ ಬಂದ ಪೂರನ್​ ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರೆದರು. ಈ ಎಡಗೈ ಬ್ಯಾಟ್ಸ್‌ಮನ್ ಬಂದ ತಕ್ಷಣ ಸ್ಫೋಟಕವಾಗಿ ಬ್ಯಾಟಿಂಗ್ ಮಾಡಿದರು. ಅವರು ಮೂರನೇ ಓವರ್‌ನಲ್ಲಿ ಸಿಮರ್‌ಜೀತ್ ಎಸೆತದಲ್ಲಿ ಮೊದಲ ಸಿಕ್ಸರ್ ಬಾರಿಸಿದರು. ಸಿಮರ್‌ಜೀತ್ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದ ಪೂರನ್, ಅಭಿಷೇಕ್ ಶರ್ಮಾ ಓವರ್‌ನಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಜಂಪಾ ಅವರ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪುರಾನ್ ಅರ್ಧಶತಕ ಪೂರೈಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ