ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಮತ್ತು ಮಠಾಧೀಶರ ವಿಷಯದಲ್ಲೂ ಯತ್ನಾಳ್ ಹಗುರವಾಗಿ ಮಾತಾಡುತ್ತಿದ್ದರು: ಕಾಶಪ್ಪನವರ್
ಪಕ್ಷಗಳ ಸಿದ್ಧಾಂತಗಳ ಅಡಿಯಲ್ಲಿ ತಾನು ಮತ್ತು ಬಸನಗೌಡ ಯತ್ನಾಳ್ ಹೋರಾಟಗಳನ್ನು ಮಾಡಿದ್ದು ನಿಜ, ಆದರೆ ಹೋರಾಟವೇ ಬೇರೆ ರಾಜಕಾರಣವೇ ಬೇರೆ, ಅತಿಯಾದ ಮಾತೇ ಅವರಿಗೆ ಕುತ್ತು ತಂದಿತೆಂದು ಹೇಳಿದರೆ ಉತ್ಪ್ರೇಕ್ಷೆ ಅನಿಸಿಕೊಳ್ಳಲಾರದು ಎಂದು ವಿಜಯಾನಂದ ಕಾಶಪ್ಪನವರ್ ಹೇಳಿದರು. ವಿಜಯಪುರ ಶಾಸಕ ಯತ್ನಾಳ್ ರನ್ನು ಬಿಜೆಪಿ ಶಿಸ್ತು ಸಮಿತಿ ನಿನ್ನೆ ಪಕ್ಷದಿಂದ ಉಚ್ಚಾಟಿಸಿದೆ.
ಬಾಗಲಕೋಟೆ, ಮಾರ್ಚ್ 27: ಹುನುಗುಂದ ಕಾಂಗ್ರೆಸ್ ಶಾಸನ ವಿಜಯಾನಂದ ಕಾಶಪ್ಪನವರ್ ಸಹ ಬಸನಗೌಡ ಪಾಟೀಲ್ ಯತ್ನಾಳ್ ರಂತೆ ಪಂಚಮಸಾಲಿ ಸಮುದಾಯಕ್ಕೆ (Panchamasali community) ಸೇರಿದವರು ಮತ್ತು ಮೀಸಲಾತಿಗಾಗಿ ಹೋರಾಟ ನಡೆಸಿದವರು. ಯತ್ನಾಳ್ ಅವರನ್ನು ಬಿಜೆಪಿ 6-ವರ್ಷ ಅವಧಿಗೆ ಉಚ್ಚಾಟನೆ ಮಾಡಿರುವ ಹಿನ್ನೆಲೆಯಲ್ಲಿ ನಮ್ಮ ಬಾಗಲಕೋಟೆ ವರದಿಗಾರ ಕಾಂಗ್ರೆಸ್ ಶಾಸಕನೊಂದಿಗೆ ಮಾತಾಡಿದಾಗ, ಕಳೆದ ಎರಡು ವರ್ಷಗಳಿಂದ ಯತ್ನಾಳ್ ಮಾತಾಡುತ್ತಿದ್ದ ರೀತಿ ಬೇರೆಯವರಿಗೆ ಬೇಸರ ಮತ್ತು ನೋವನ್ನುಂಟು ಮಾಡುವ ಹಾಗಿತ್ತು, ಧರ್ಮವನ್ನು ಆಧಾರವಾಗಿಟ್ಟುಕೊಂಡು ಮಾತಾಡುವುದು, ಪಕ್ಷವನ್ನು ಅಧಿಕಾರಕ್ಕೆ ತಂದವರ ವಿರುದ್ಧ ಮಾತಾಡುವದು ಹಾಗೂ ಮಠಾಧೀಶರ ವಿಷಯದಲ್ಲೂ ಅವರು ಕೇವಲವಾಗಿ ಮಾತಾಡಲು ಶುರು ಮಾಡಿದ್ದರು ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ದುರದೃಷ್ಟಕರ, ವಿಶ್ಲೇಷಣೆ ಮಾಡುವ ಗೋಜಿಗೆ ಹೋಗಲ್ಲ: ಸಿಟಿ ರವಿ, ಪರಿಷತ್ ಸದಸ್ಯ